Advertisement

ರಾಜ್ಯದಲ್ಲಿ 2 ಸಾವಿರ ಅಂಗನವಾಡಿಗಳಿಗೆ ಬೇಡಿಕೆ

04:47 PM Jan 26, 2021 | Team Udayavani |

ಹೊಸಪೇಟೆ: ರಾಜ್ಯದಲ್ಲಿ 2 ಸಾವಿರ ಅಂಗನವಾಡಿಗಳಿಗೆ·ಬೇಡಿಕೆ ಇದ್ದು, ಮಿನಿ ಅಂಗನವಾಡಿಗಳಿಗೂ ಮನವಿಗಳು·ಬಂದಿದ್ದು, ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ·ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ
ಜೊಲ್ಲೆ ಅವರು ಹೇಳಿದರು.

Advertisement

ನಗರದ ಎಂಜೆ ನಗರದ ಸಾವಿತ್ರಿಬಾಯಿ ಪುಲೆಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ರಾಷೀóಯ ಹೆಣ್ಣ·ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡುನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಅಂಗನವಾಡಿ ಕೇಂದ್ರದಿಂದ ಮಹಿಳೆ ಹಾಗೂ ಮಕ್ಕಳಿಗೆನೀಡುವ ಮೊಟ್ಟೆ ದರ ಹೆಚ್ಚಳಕ್ಕೆ ಬೇಡಿಕೆ ಇದ್ದು, ಈಗಅಂಗನವಾಡಿ ಕಾರ್ಯಕರ್ತೆಯರ ಖಾತೆಗೆ ಹಣ ಹಾಕಿ ಮೊಟ್ಟೆಖರೀದಿಸಿ ವಿತರಿಸುವ ಕಾರ್ಯ ನಡೆಯುತ್ತಿದ್ದು, ಈಗಾಗಲೇಅಧಿ ಕಾರಿಗಳ ಜೊತಗೆ ಸಭೆ ನಡೆಸಿ ವಿಭಾಗವಾರು ಟೆಂಡರ್‌ಪ್ರಕ್ರಿಯೆ ಮೂಲಕ ತಾಪಂ ವತಿಯಿಂದ ಮೊಟ್ಟೆ ವಿತರಿಸುವಕುರಿತು ಚರ್ಚಿಸಲಾಗುತ್ತಿದೆ, ಫಲಾನುಭವಿಗೆ ಯಾವುದೇಪರಿಣಾಮ ಉಂಟಾಗದೇ ಹಾಗೂವಿತಕರಿಗೆ ದರ ವ್ಯತ್ಯಾಸವಾಗದಂತೆ
ಸೂಕ್ತ ರೀತಿಯಲ್ಲಿ ನೀಡಲಾಗುತ್ತದೆ.

ಇಲಾಖೆ ದೊಡ್ಡದಿದೆ ಹಲವು ಅಭಿವೃದ್ಧಿಕಾರ್ಯಗಳನ್ನು ಮಾಡಬಹುದು.ಇದರ ಜೊತೆಗೆ ನ್ಯೂನತೆಗಳನ್ನುಸರಿಪಡಿಸಿಕೊಳ್ಳಲಾಗುತ್ತದೆ. ಎಂದಅವರು ಕೋವಿಡ್‌19 ಕಾರಣದಿಂದ ಸ್ಥಗಿತಗೊಂಡಿದ್ದಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಚ್‌-ಏಪ್ರಿಲ್‌ ತಿಂಗಳಲ್ಲಿ ಪುನಃ ಆರಂಭಿಸಲಾಗುತ್ತದೆ.

ಕೋವಿಡ್‌19 ಸಂದರ್ಭದಲ್ಲಿ ವಲಸೆ ಕಾರ್ಮಿಕರ ಮಕ್ಕಳನ್ನುತಪಾಸಣೆ ಕಾರ್ಯ ನಡೆಸಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕ ಮಕ್ಕಳುಹೆಚ್ಚಿದ್ದು, ಈ ಸಲುವಾಗಿ ಜಿಲ್ಲಾಧಿ ಕಾರಿಗಳೊಂದಿಗೆಹಾಗೂ ಪೋಷಣಾ ತಜ್ಞರ ಜೊತೆ ಚರ್ಚಿಸಿ ಈ ಭಾಗದಲ್ಲಿವಿಶೇಷ ಗಮನ ವಹಿಸಿ ಕಾರ್ಯನಿರ್ವಹಿಸಲಾಗುತ್ತಿದೆ.ಕೇಂದ್ರದಿಂದ ನೂತನ ಅಂಗನವಾಡಿಗಳ ನಿರ್ಮಾಣಕ್ಕೆಅನುಮತಿ ಮಂಜೂರಾಗುವ ವಿಶ್ವಾಸವಿದೆ. ಕೆಲವು
ಕಡೆ ನಿವೇಶನ ಇಲ್ಲದ ಕ್ಷೇತ್ರಗಳ ಶಾಸಕರೊಂದಿಗೆನಿವೇಶನಗಳನ್ನು ಗುರುತಿಸಿ ಅಂಗನವಾಡಿ ಕಟ್ಟಡಗಳನ್ನುನಿರ್ಮಿಸಲಾಗುತ್ತದೆ ಹಾಗೆಯೇ ಹೈಟೆಕ್‌ ಅಂಗನವಾಡಿಯೋಜನೆಯನ್ನೂ ಸಹ ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ125 ಹೆಣ್ಣು ಮಕ್ಕಳ ಜನನ ಹೆಚ್ಚಿದೆ ಎಂಬುದು ಗೊತ್ತಾಗಿದ್ದು,ಮಹಿಳೆಯರ ಏಳಿಗೆಗಾಗಿ ಜಾರಿಗೆ ತಂದ ಯೋಜನೆಯಶಸ್ವಿಯಾಗಿರುವುದಕ್ಕೆ ಇದೊಂದು ನಿದರ್ಶನವಾಗಿದೆ
ಎಂದರು.

ನಗರದ ಸಾವಿತ್ರಿಬಾಯಿ ಪುಲೆ ಅಂಗನವಾಡಿಯನ್ನುವೀಕ್ಷಿಸಿದ ಸಚಿವೆ ಅಂಗನವಾಡಿಯು ಮಕ್ಕಳು ಆಟದಮೂಲಕ ಪಾಠ ಕಲಿಬೇಕು ಎಂಬ ಬಾಲ ಸ್ನೇಹಿ ಕಟ್ಟಡಇದಾಗಿದೆ. ಅಂಗನವಾಡಿಗೆ ಸ್ಥಳೀಯ ದಾನಿಗಳ ಸಹಕಾರಜೊತೆಗೆ ಸ್ಥಳೀಯ ಸಮುದಾಯದ ಜನರು ತಾವು ಬೆಳೆದ
ತರಕಾರಿಗಳನ್ನು ಅಂಗನವಾಡಿಯ ಅಕ್ಷಯಪಾತ್ರೆಗೆನೀಡುತ್ತಿರುವುದು ಖುಷಿ ವಿಚಾರವಾಗಿದೆ ಎಂದರು.
ರಕ್ಷಿತ, ಕೃಷಿತ ಹಾಗೂ ಸಿಂಧೂ ಎಂಬ ಅಂಗನವಾಡಿ ಮಕ್ಕಳಹೆಸರಲ್ಲಿ ಮೂರು ಸಸಿಗಳನ್ನು ನೆಟ್ಟು ಗಿಡ ಬೆಳೆದಂತೆ ಮಕ್ಕಳು
ಸಹ ಬೆಳೆಯಲಿ ಎಂದರು.

Advertisement

ಈ ಸಂದರ್ಭದಲ್ಲಿ ಮಹಿಳಾ ಅಭಿವೃದ್ಧಿ ನಿಗಮದಅಧ್ಯಕ್ಷೆ ಶಶಿಕಲಾ ಟೆಂಗಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆಯ ಉಪ ನಿರ್ದೇಶಕ ಆರ್‌.ನಾಗರಾಜ್‌, ತಾಪಂಅಧ್ಯಕ್ಷೆ ನಾಗವೇಣಿ ಹಾಗೂ ಮಾಜಿ ನಗರಸಭಾ ಸದಸ್ಯಚಂದ್ರಕಾಂತ್‌ ಕಾಮತ್‌ ಸೇರಿದಂತೆ ಅಂಗನವಾಡಿ ಸಿಬ್ಬಂದಿಇದ್ದರು.

ಓದಿ :·ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಕೈಜೋಡಿಸಿ

Advertisement

Udayavani is now on Telegram. Click here to join our channel and stay updated with the latest news.

Next