Advertisement
ತಾತ್ಕಾಲಿಕ ತರಕಾರಿ ಮಾರ್ಕೆಟ್: ಜನ ಸಂದಣಿಯಾಗುವುದನ್ನು ತಡೆಯಲು ಉದ್ಯೋಗ ಪೆಟ್ರೋಲ್ ಬಂಕ್ ಬಳಿಯ ಮಾರ್ಕೆಟ್ ಬಳಿ ತರಕಾರಿ ಮಾರಾಟಕ್ಕೆ ನಿರ್ಬಂಧ ವಿ ಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ ತಾತ್ಕಾಲಿಕ ಮಾರುಕಟ್ಟೆಗಳನ್ನು ತೆರೆಯಲಾಗಿದೆ. ನಗರದ ದೀಪಾಯನ ಶಾಲೆ ಆವರಣ, ಮುನ್ಸಿಪಲ್ ಕಾಲೇಜು ಮೈದಾನ, ಟಿಬಿಡ್ಯಾಂನ ಕಾಲೇಜು ಮೈದಾನ, ಬಳ್ಳಾರಿ ರಸ್ತೆಯ ಪಟೇಲ್ ಹೈಸ್ಕೂಲ್, ಬಾಲಾ ಟಾಕೀಸ್ ಬಳಿಯ ವಾಸವಿ ಶಾಲೆ ಮೈದಾನದಲ್ಲಿ ತಾತ್ಕಾಲಿಕ ತರಕಾರಿ ಮಾರ್ಕೆಟ್ ತೆರೆಯಲಾಗಿದೆ. ಸಚಿವರ ಸೂಚನೆ: ನಗರದಲ್ಲಿ ಕೊರೋನಾ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಅ ಧಿಕಾರಿಗಳ ಸಭೆ ನಡೆಸಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಕೊರೊನಾ ಕಂಟ್ರೋಲ್‌ಗೆ ಕಠಿಣ ನಿಯಮ ಜಾರಿಗೆ ಸೂಚಿಸಿದ್ದರು.
Related Articles
Advertisement
ವಾಹನಗಳ ಸಂಖ್ಯೆ ನಮೂದು: ನಗರದಲ್ಲಿ ಅಗತ್ಯವಸ್ತುಗಳ ಖರೀದಿಗೆ ಅಂತ ಹೇಳಿ ನಿತ್ಯವೂ ಹೊರ ಬಂದರೆ ಅಂತ ವಾಹನಗಳ ಸಂಖ್ಯೆಯನ್ನು ಪೊಲೀಸರು ಗುಟ್ಟಾಗಿ ನಮೂದು ಮಾಡಿಕೊಳ್ಳಲಿದ್ದಾರೆ. ಎಷ್ಟು ಬಾರಿ ಓಡಾಡಿದ್ದಾರೆ ಎಂಬುದರ ಪಕ್ಕಾ ಮಾಹಿತಿಯೊಂದಿಗೆ ಸಕಾರಣ ಕೇಳಿ ದಂಡ ವಿ ಧಿಸಲಿದ್ದಾರೆ. ಹೀಗಾಗಿ ಬರೀ ಮಜಾ ಉಡಾಯಿಸಲು ಹೊರಬಂದರೆ ಪೊಲೀಸರ ಲಾಠಿ ರುಚಿಯೊಂದಿಗೆ ಕೇಸ್ ಬೀಳುವುದಂತೂ ಗ್ಯಾರಂಟಿ. ಒಂದೇ ದಿನ ಬಸ್: ಸ್ಥಳೀಯ ವಿಭಾಗದಿಂದ ಇಂದು ಒಂದೇ ದಿನ ಮಾತ್ರ ಬಸ್ ಸೇವೆ ಲಭ್ಯವಾಗಲಿದೆ. ಕರ್ಫ್ಯೂ ಸಡಿಲಿಕೆ ಬಳಿಕವೇ ಬಸ್ ಸೇವೆ ಲಭ್ಯವಾಗಲಿದೆ. ಹೀಗಾಗಿ ಅನಗತ್ಯ ಓಡಾಟಕ್ಕೆ ಬ್ರೇಕ್ ಬೀಳಲಿದೆ.
ಪೊಲೀಸ್ ಪಡೆ ಸಜ್ಜು: ಈಗಾಗಲೇ ಈ ಹಿಂದಿನ ಕರ್ಫ್ಯೂ ಅನುಭವದ ಆಧಾರದ ಮೇಲೆ ಪೊಲೀಸ್ ಪಡೆ ನಗರದಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗಿದೆ. ಯಾವ ಕಡೆ ಕರ್ಫ್ಯೂ ನಿಯಮ ಗಾಳಿಗೆ ತೂರಿ ಜನ ಒಂದೇಡೆ ಸೇರಿದ್ದಾರೆ ಎಂಬುದರ ಮೇಲೆ ಪೊಲೀಸರು ನಿಗಾ ವಹಿಸಲಿದ್ದಾರೆ. ಇನ್ನೂ ತರಕಾರಿ ಖರೀದಿ, ಅಗತ್ಯವಸ್ತುಗಳ ಖರೀದಿ ವೇಳೆಯೂ ಪೊಲೀಸರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಪರಿಶೀಲನೆ ಮಾಡಲಿದ್ದಾರೆ. ಹೀಗಾಗಿ ಕೊರೊನಾ ಕಂಟ್ರೋಲ್ ಗೆ ಆರೋಗ್ಯ ಇಲಾಖೆ ಜತೆಗೆ ಪೊಲೀಸರ ಪಾತ್ರವೂ ಹಿರಿದಾಗಿದೆ.
ಮದ್ಯದಂಗಡಿಗೆ ಎಣ್ಣೆಪ್ರಿಯರ ಲಗ್ಗೆ: ಕರ್ಫ್ಯೂ ಘೋಷಣೆಯಾಗುತ್ತಿದ್ದಂತೆಯೇ ನಗರದಲ್ಲಿ ಎಣ್ಣೆಪ್ರಿಯರು ಎಂಎಸ್‌ಐಎಲ್‌ಗೆ ಲಗ್ಗೆ ಇಟ್ಟು ಎಣ್ಣೆ ಖರೀದಿಸಿದರು. ಯುವಕರು, ಮಹಿಳೆಯರು, ವೃದ್ಧರು ಕೂಡ ಚೀಲಗಳಲ್ಲಿ ಎಣ್ಣೆ ಖರೀದಿಸಿ ಕೊಂಡೊಯ್ದರು.