Advertisement

ಮಹಾ ನಗರ ಪಾಲಿಕೆ ಮತ ಸಮರ ಇಂದು

07:58 PM Apr 27, 2021 | Team Udayavani |

ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆಗೆ ಏ.27 ರಂದು ಮಂಗಳವಾರ ನಡೆಯಲಿರುವ ಮತದಾನ ಪ್ರಕ್ರಿಯೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಮಸ್ಟರಿಂಗ್‌ ಕೇಂದ್ರದಲ್ಲಿ ಚುನಾವಣೆಗೆ ನಿಯೋಜಿಸಿದ್ದ ಸಿಬ್ಬಂದಿ ಅಗತ್ಯ ಪರಿಕರಗಳೊಂದಿಗೆ ಮತಗಟ್ಟೆಗಳತ್ತ ಸೋಮವಾರ ತೆರಳಿದರು.

Advertisement

ಜಿಲ್ಲಾಡಳಿತ ಮತದಾನ ಪ್ರಕ್ರಿಯೆಗೆ 1376 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಈಗಾಗಲೇ ಅಗತ್ಯ ತರಬೇತಿ ನೀಡಲಾಗಿದೆ. ಮತದಾನಕ್ಕೆ 400 ಬ್ಯಾಲೆಟ್‌ ಯೂನಿಟ್‌, 400 ಕಂಟ್ರೋಲ್‌ ಯೂನಿಟ್‌ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮಸ್ಟರಿಂಗ್‌ ಹಾಗೂ ಡಿ-ಮಸ್ಟರಿಂಗ್‌ ಕೇಂದ್ರಕ್ಕೆ ಆಗಮಿಸಿದ ಸಿಬ್ಬಂದಿಗೆ ಸಂಬಂಧಪಟ್ಟ ಮೇಲಧಿ ಕಾರಿಗಳು ಮತಯಂತ್ರ, ಕಂಟ್ರೋಲ್‌ ಯೂನಿಟ್‌, ವಿವಿ ಪ್ಯಾಟ್‌ ಸೇರಿ ಅಗತ್ಯ ಪರಿಕರಗಳುಳ್ಳ ಚುನಾವಣಾ ಕಿಟ್‌ ಜೊತೆಗೆ ಕೋವಿಡ್‌ -19ರ ನಿಯಂತ್ರಣ ಕಿಟ್‌ (ಹ್ಯಾಂಡ್‌ ಸ್ಯಾನಿಟೈಸರ್‌, ಮಾಸ್ಕ್, ಹ್ಯಾಂಡ್‌ ಗ್ಲೌಸ್‌, ಫೇಸ್‌ಶೀಲ್ಡ್‌) ಸಹ ವಿತರಿಸಿದ್ದು, ಇವುಗಳನ್ನು ಹೊತ್ತ ಮತಗಟ್ಟೆ ಸಿಬ್ಬಂದಿಗಳ ತಂಡ, ತಮ್ಮ ತಮ್ಮ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ಮಸ್ಟರಿಂಗ್‌ ಹಾಗೂ ಡಿ-ಮಸ್ಟರಿಂಗ್‌ ಕೇಂದ್ರಗಳನ್ನು ಪ್ರತಿದಿನ ಮೂರು ಬಾರಿ ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಸಿಬ್ಬಂದಿ ಯವರು ಮತಗಟ್ಟೆ ಕೇಂದ್ರಗಳಿಗೆ ತೆರಳುವ ಎಲ್ಲ ವಾಹನಗಳನ್ನು ಸ್ಯಾನಿಟೈಸ್‌ ಮಾಡ ಲಾಗಿದೆ. ಮಸ್ಟರಿಂಗ್‌ ಹಾಗೂ ಡಿ-ಮಸ್ಟರಿಂಗ್‌ ಕೇಂದ್ರಗಳ ಹೊರ ಮತ್ತು ಒಳ ಹೋಗುವ ದ್ವಾರಗಳಲ್ಲಿ ಕಡ್ಡಾಯವಾಗಿ ಹ್ಯಾಂಡ್‌ ಸ್ಯಾನಿಟೈಸಿಂಗ್‌ ಹಾಗೂ ಟ್ರಿಪಲ್‌ಲೆಯರ್‌ ಮಾಸ್ಕ್ ವಿತರಿಸಿ ಥರ್ಮಲ್‌ಸ್ಕಾ ನಿಂಗ್‌ ಹಾಗೂ ಪಲ್ಸ್‌ ಆಕ್ಸಿಮೀಟರ್‌ನಿಂದ ತಪಾಸಣೆ ಮಾಡುವುದರ ಜೊತೆಗೆ ರೋಗಲಕ್ಷಣಗಳು ಕಂಡು ಬಂದ ಸಿಬ್ಬಂದಿಗೆ ಆವರಣದಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿ, ಪಾಸಿಟಿವ್‌ ಬಂದ ಸಿಬ್ಬಂದಿಗೆ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ಪ್ರೀತಿ ಗೆಹೊಟ್‌ ತಿಳಿಸಿದರು.

ಆಯ್ದ 20 ಸ್ಥಳಗಳಲ್ಲಿ ಕೈತೊಳೆದುಕೊಳ್ಳಲು ಲಿಕ್ವಿಡ್‌ ಸೋಪ್‌ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರೀತಿ ಗೆಹೊÉàಟ್‌ ಅವರು ಚುನಾವಣೆ ಸಮಯದಲ್ಲಿ ಕೋವಿಡ್‌ ನಿಯಂತ್ರಿಸಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ವಿವರಿಸಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ನಿಗಾವಹಿಸಲು ಪ್ರತ್ಯೇಕ ಪೊಲೀಸ್‌ ಮತ್ತು ಹೋಂಗಾರ್ಡ್‌ಗಳನ್ನು ನಿಯೋಜಿಸಿ ಧ್ವನಿವರ್ಧಕ ಮೂಲಕ ತಿಳಿವಳಿಕೆ ನೀಡಲಾಗುತ್ತದೆ. ಎಲ್ಲ ಶೌಚಾಲಯಗಳನ್ನು ಪ್ರತಿ 2 ಗಂಟೆಗೆ ಒಮ್ಮೆ ಸ್ಯಾನಿಟೈಸ್‌ ಮಾಡಲು ವ್ಯವಸ್ಥೆ ಮಾಡಲಾಗಿದೆ. ಮಹಾನಗರ ಪಾಲಿಕೆಯ ಚುನಾವಣಾ ದಿನಾಂಕ ಪ್ರಕಟ ವಾದ ದಿನದಿಂದ ಪಾಲಿಕೆಯ ಎಲ್ಲ ಕಸ ಸಂಗ್ರಹಣ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಕೋವಿಡ್‌ ಹರಡದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಕೋವಿಡ್‌ ತಪಾಸಣೆ: ಪಾಲಿಕೆಗೆ ಚುನಾವಣೆಗೆ ನಿಯೋಜಿಸಲಾಗಿದ್ದ ಸಿಬ್ಬಂದಿಗಳು ಮಸ್ಟ ರಿಂಗ್‌ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಹೊರಗಡೆಯೇ ಅವರಿಗೆ ಥರ್ಮಲ್‌ ಸ್ಕಾನರ್‌ ಮೂಲಕ ತಾಪಮಾನವನ್ನು ಪರಿಶೀಲಿಸಲಾಯಿತು. ಈ ವೇಳೆ ಸ್ವಲ್ಪ ಜ್ವರ ಕಾಣಿಸಿಕೊಂಡರೂ ಅಂತಹವರನ್ನು ಕೂಡಲೇ ಕೇಂದ್ರದಲ್ಲೇ ವ್ಯವಸ್ಥೆ ಮಾಡಲಾಗಿದ್ದ ವೈದ್ಯ ಸಿಬ್ಬಂದಿಗಳಿಂದ ಕೋವಿಡ್‌ ಪರೀಕ್ಷೆ ನಡೆಸಲಾಯಿತು. ತಪಾಸಣೆಯಲ್ಲಿ ನೆಗೆಟಿವ್‌ ಬಂದವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದ್ದು, ಪಾಸಿಟಿವ್‌ ಬಂದಿದ್ದ ಸಿಬ್ಬಂದಿಗೆ ಅಗತ್ಯ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯೂ ಮಾಡಲಾಯಿತು. ಇವರ ಬದಲಿಗೆ ಮೀಸಲಿಡಲಾಗಿದ್ದ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿ ಮತಗಟ್ಟೆಗಳಿಗೆ ಕಳುಹಿಸಿಕೊಡಲಾಯಿತು.

ಸಾಮಾಜಿಕ ಅಂತರ ಮಾಯ: ಬಳ್ಳಾರಿ ನಗರ ಸೇರಿ ಜಿಲ್ಲೆಯಾದ್ಯಂತ ಕೋವಿಡ್‌ ಸೋಂಕು ಎರಡನೇ ಅಲೆ ಅಬ್ಬರಿಸುತ್ತಿದೆ. ಪ್ರತಿದಿನ ನೂರಾರು ಪ್ರಕರಣಗಳು ಪತ್ತೆಯಾಗುತ್ತಿದ್ದು, ಹತ್ತಾರು ಜನರು ಬಲಿಯಾಗುತ್ತಿದ್ದಾರೆ. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ಪಾಲಿಕೆ ಚುನಾವಣೆ ನಿಮಿತ್ತ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಸ್ಟರಿಂಗ್‌ ಕೇಂದ್ರದಲ್ಲಿ ಸಾಮಾಜಿಕ ಅಂತರವೇ ಮಾಯವಾಗಿತ್ತು. ಮಾಸ್ಕ್ ಹಾಕಿದ್ದು, ಸ್ಯಾನಿಟೈಸರ್‌ ಬಳಸಿದ್ದನ್ನು ಹೊರತುಪಡಿಸಿದರೆ, ಯಾರೊಬ್ಬರೂ ಅಂತರ ಕಾಪಾಡಿಕೊಳ್ಳದೆ ಎಲ್ಲರೂ ಗುಂಪುಗುಂಪಾಗಿದ್ದದ್ದು ಕಂಡುಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next