Advertisement

ವಾರಾಂತ್ಯ ಕರ್ಫ್ಯೂ: ಎಲ್ಲವೂ ಬಂದ್‌

05:47 PM Apr 26, 2021 | Team Udayavani |

ಬಳ್ಳಾರಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್‌ ಸೋಂಕು ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ವಿಧಿ ಸಿದ್ದ ವಾರಾಂತ್ಯದ ಕರ್ಫ್ಯೂ ಭಾನುವಾರವೂ ಮುಂದುವರೆದಿದ್ದು, ಬೆಳಗ್ಗೆ ನಿಗ ದಿತ ಅವಧಿ ಯಲ್ಲಿ ಅಗತ್ಯ ವಸ್ತುಗಳ ಮಳಿಗೆಗಳು, ಮದುವೆ, ಆಸ್ಪತ್ರೆಗೆ ತೆರಳುವವರನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲವೂ ಬಂದ್‌ ಆಗಿದ್ದವು. ನಗರದ ಎಪಿಎಂಸಿ ಆವರಣದಲ್ಲಿನ ತರಕಾರಿ ಸಗಟು ಮಾರುಕಟ್ಟೆ ಮಧ್ಯರಾತ್ರಿ 1 ಗಂಟೆಗೆ ಆರಂಭವಾಗಿ ಬೆಳಗ್ಗೆ 7 ಗಂಟೆಗೆ ಮುಕ್ತಾಯವಾಗಿದ್ದು, ನಂತರ ಬೆಳಗ್ಗೆ 6 ಗಂಟೆಗೆ ಆರಂಭವಾದ ತರಕಾರಿ ಚಿಲ್ಲರೆ ಮಾರುಕಟ್ಟೆ, ಅಗತ್ಯ ವಸ್ತುಗಳುಳ್ಳ ಕಿರಾಣಿ ಅಂಗಡಿ, ಫುಟ್‌ವೇರ್‌ಶಾಪ್‌, ಹಣ್ಣಿನ ಮಳಿಗೆಗಳು, ಬೀದಿಬದಿಯ ಹಣ್ಣು ಮಾರಾಟಗಾರರು 10 ಗಂಟೆವರೆಗೆ ತಮ್ಮ ವ್ಯಾಪಾರ ವಹಿವಾಟವನ್ನು ಮುಂದುವರೆಸಿದ್ದು, ನಂತರ ಬಂದ್‌ ಮಾಡಿದರು.

Advertisement

ಈ ಮಳಿಗೆಗಳನ್ನು ಹೊರತುಪಡಿಸಿ, ನಗರದಲ್ಲಿನ ಬಹುತೇಕ ಮಳಿಗೆಗಳು ಸ್ವಯಂಪ್ರೇರಣೆಯಿಂದ ಬಂದ್‌ ಮಾಡಿ, ವೀಕೆಂಡ್‌ ಲಾಕ್‌ಡೌನ್‌ಗೆ ಸಹಕಾರ ನೀಡಿದಂತಿತ್ತು. ಇನ್ನು ನಿಗದಿತ ಅವ ಧಿವರೆಗೆ ಹೋಟೆಲ್‌ಗ‌ಳು ತೆರೆದಿದ್ದವಾದರೂ, ಕೆಲವೊಬ್ಬರು ಅಲ್ಲಿಯೇ ಉಪಾಹಾರ ಸೇವಿಸಿದರೆ, ಬಹುತೇಕರು ಪಾರ್ಸೆಲ್‌ ತಗೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪೆಟ್ರೋಲ್‌ ಬಂಕ್‌, ಎಟಿಎಂ, ಔಷಧ ಮಳಿಗೆಗಳು, ಸಾರಿಗೆ ಬಸ್‌ಗಳ ಸಂಚಾರ ಎಂದಿನಂತೆ ಮುಂದುವರೆದಿತ್ತು.

ಪರದಾಡಿದ ಪ್ರಯಾಣಿಕರು: ಮದುವೆ ಸಮಾರಂಭ, ಅನಾರೋಗ್ಯ ನಿಮಿತ್ತ ನಗರಕ್ಕೆ ಆಗಮಿಸಿದ್ದ ವಿವಿಧ ಊರುಗಳ ಜನರು ಕೆಎಸ್‌ಆರ್‌ಟಿಸಿ ಬಸ್‌, ಆಟೋಗಾಗಿ ಪರದಾಟ ನಡೆಸಿದರು. ಮದುವೆ, ಆರೋಗ್ಯ ಸಮಸ್ಯೆ ನಿಮಿತ್ತ ಕೆಎಸ್‌ಆರ್‌ಟಿಸಿ ಬಸ್‌ ಗಳಲ್ಲಿ ನಗರಕ್ಕೆ ಆಗಮಿಸಿದ್ದ ಹಲವರು, ಯಾವುದೇ ಆಟೋಗಳು ಸಿಗದೆ, ಮದುವೆ ಮಂಟಪಕ್ಕೆ ಮತ್ತು ಆಸ್ಪತ್ರೆಗೆ ತೆರಳಲು ಹರಸಾಹಸ ಪಟ್ಟರು.

ಹಸುಗೂಸು, ಚಿಕ್ಕ ಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರ ಪಾಡು ಹೇಳತೀರದಾಗಿದ್ದು, ಬಿರುಬಿಸಿಲಲ್ಲಿ ಮಕ್ಕಳನ್ನು ಹೊತ್ತೂಯ್ಯುತ್ತಿದ್ದ ಪೋಷಕರು ನಿಲ್ದಾಣಕ್ಕೆ ತೆರಳಲು ಹರಸಾಹಸ ಪಟ್ಟರು.

ಬ್ಯಾರಿಕೇಡ್‌ ನಿರ್ಮಾಣ: ಪೊಲೀಸರು ನಗರದ ಪ್ರಮುಖ ವೃತ್ತಗಳಲ್ಲಿ ಮೊದಲದಿನ ನಿರ್ಮಿಸಿದ್ದ ಬ್ಯಾರಿಕೇಡ್‌ಗಳು ಎರಡನೇ ದಿನವೂ ಮುಂದುವರೆದವು. ವಿನಾಕಾರಣ ವಾಹನಗಳಲ್ಲಿ ಸಂಚರಿಸುತ್ತಿದ್ದ ಸವಾರರನ್ನು ತಡೆದು, ವಿಚಾರಿಸಿ, ದಾಖಲೆ ಪರಿಶೀಲಿಸಿ ಕಳುಹಿಸಿಕೊಡುತ್ತಿದ್ದರು. ಪಾಲಿಕೆ ಚುನಾವಣೆ ನಿಮಿತ್ತ ರಾಜಕೀಯ ಪಕ್ಷಗಳ ಮುಖಂಡರ ವಾಹನಗಳು ಮಾತ್ರ ಅಲ್ಲೊಂದು ಇಲ್ಲೊಂದು ಸಂಚರಿಸುತ್ತಿದ್ದರು.

Advertisement

ಮೂಲಂಗಿ ರಸ್ತೆಗೆ ಚೆಲ್ಲಿದ ವ್ಯಾಪಾರಿ: ವೀಕೆಂಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಪಿಎಂಸಿ ಆವರಣದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಮಧ್ಯರಾತ್ರಿ 1 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿನ ಚಿಲ್ಲರೆ ವ್ಯಾಪಾರಿಗಳನ್ನು ವಿವಿಧೆಡೆ ಸ್ಥಳಾಂತರಿಸಲಾಗಿದ್ದು, ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಸಗಟು ವ್ಯಾಪಾರಿಗಳಿಗೆ ಸಮರ್ಪಕವಾಗಿ ವ್ಯಾಪಾರವಾಗದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಮೂಲಂಗಿಯನ್ನು ರಸ್ತೆಗೆ ಚೆಲ್ಲಿದ್ದಾರೆ. ಈ ಕುರಿತು ಕೇಳಿದರೆ ಗ್ರಾಹಕರೇ ಬರದಿದ್ದಾಗ ಇವುಗಳನ್ನು ಇಟ್ಟುಕೊಂಡು ಏನು ಮಾಡಬೇಕು ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next