Advertisement

ಶ್ರೀರಾಮನ ಕಲ್ಯಾಣೋತ್ಸ ವದಿಂದ ಲೋಕಕ್ಕೆ ಕಲ್ಯಾಣ

05:33 PM Apr 22, 2021 | Team Udayavani |

ಸಿರುಗುಪ್ಪ: ಶ್ರೀರಾಮನವಮಿಯಂದು ಶ್ರೀರಾಮನ ಕಲ್ಯಾಣೋತ್ಸವ ನಡೆಸುವುದರಿಂದ ಲೋಕಕ್ಕೆ ಕಲ್ಯಾಣವಾಗುತ್ತದೆ ಎನ್ನುವ ನಂಬಿಕೆಯಿಂದ ಪ್ರತಿವರ್ಷ ಕಲ್ಯಾಣೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಅರ್ಚಕ ಶ್ರೀನಿವಾಸಶಾಸ್ತ್ರಿ ತಿಳಿಸಿದರು.

Advertisement

ನಗರದ ಹಳೇ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮನವಮಿ ಅಂಗವಾಗಿ ನಡೆದ ಕಲ್ಯಾಣೋತ್ಸವ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಶ್ರೀರಾಮನು ಮರ್ಯಾದ ಪುರುಷನಾಗಿದ್ದು, ಲೋಕದಲ್ಲಿ ಪೂಜೆಗೊಳ್ಳುವ ಮಹಾತ್ಮನಾಗಿದ್ದಾನೆ. ಶ್ರೀರಾಮನ ಆದರ್ಶಗಳು ಇಂದಿಗೂ ಜೀವಂತವಾಗಿದ್ದು ಅವರ ಆದರ್ಶಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.

ಶ್ರೀ ರಾಮನ ಮಹಾತೆ ಯನ್ನು ಸಾರುವ ಅನೇಕ ಗ್ರಂಥಗಳ ಭಂಡಾರ ನಮ್ಮ ದೇಶದಲ್ಲಿದೆ. ವಾಲ್ಮೀಕಿ ಮಹರ್ಷಿ ಬರೆದಿರುವ ಶ್ರೀರಾಮಾಯಣ ಚರಿತ್ರೆ ಅತಿ ಮಹತ್ವದ ಧಾರ್ಮಿಕ, ಸಾಮಾಜಿಕ, ನೈತಿಕ ಮೌಲ್ಯಗಳನ್ನು ಒಳಗೊಂಡಿರುವ ಗ್ರಂಥವಾಗಿದೆ. ತ್ರೇತಾಯುಗದಲ್ಲಿ ಶ್ರೀ ರಾಮನು ನಮ್ಮ ರಾಜ್ಯದ ಅನೇಕ ಕಡೆಗಳಲ್ಲಿ ಸಂಚರಿಸಿದ ಕುರುಹುಗಳಿದ್ದು, ಅಂಥ ಸ್ಥಳಗಳಲ್ಲಿ ಶ್ರೀರಾಮಚಂದ್ರನೇ ಸ್ಥಾಪಿಸಿ ಪೂಜಿಸಿದ ಲಿಂಗಗಳಿವೆ. ವಿಜಯನಗರ ಜಿಲ್ಲೆಯ ಹಂಪಿಯ ಪ್ರದೇಶದಲ್ಲಿ ಶ್ರೀರಾಮನು ಸಂಚರಿಸಿದ ಮತ್ತು ಸೀತೆಯ ಸೆರಗು ಪ್ರದೇಶವನ್ನು ಇಂದಿಗೂ ಭಕ್ತರು ಶ್ರದ್ಧೆ-ಭಕ್ತಿಯಿಂದ ವೀಕ್ಷಿಸುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next