ಸಂಡೂರು: ಪ್ರಜಾಪ್ರಭುತ್ವದ ಅಡಿಗಲ್ಲು ಎಂದರೆ ಮತದಾನ. ದಾನಗಳಲ್ಲಿ ಶ್ರೇಷ್ಠ ಮತದಾನವಾಗಿದ್ದು ಅಂತಹ ದಾನಿಗಳಾದ 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ, ಯುವತಿಯರು ಕಡ್ಡಾಯವಾಗಿ ಮತದಾನ ಗುರುತಿನ ಚೀಟಿ ಪಡೆಯುವುದರ ಜೊತೆಗೆ ಮತದಾನ ಮಾಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಕೊಟ್ರೇಶ್ ತಿಳಿಸಿದರು.
ಅವರು ಸೋಮವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಮತದಾನ ದಿನಾಚರಣೆ ಉದ್ದೇಶಿಸಿ ಮಾತನಾಡಿ, ಇಂದು ಪ್ರಜಾಪ್ರಭುತ್ವ ಉಳಿಯಬೇಕಾದರೆ ಅದಕ್ಕೆ ಮತದಾನ ಅತಿ ಅವಶ್ಯಕವಾದುದು. ಆದ್ದರಿಂದ ಬಹಳಷ್ಟು ಯುವಕರು ಮತ್ತು ಯುವತಿಯರು ಇದರಿಂದ ದೂರ ಉಳಿಯುತ್ತಿದ್ದು ಇಂದು ಮತದಾನ ದಿನಾಚರಣೆ ಮೂಲಕ ಜಾಗೃತಿ ಉಂಟು ಮಾಡುತ್ತಿದ್ದು
ಅದರಲ್ಲಿ ಯುವಕರು ಜಾಗೃತರಾಗಿ ನೋಂದಾವಣೆ ಮಾಡಿಕೊಳ್ಳಬೇಕು. ತಮ್ಮ ಕುಟುಂಬದ ಸದಸ್ಯರನ್ನು ಸಹ ನೋಂದಾಯಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿ ಕಾರಿ ಡಾ| ಐ.ಅರ್. ಅಕ್ಕಿ ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಮತದಾನದ ಪ್ರಕ್ರಿಯೆಯಲ್ಲಿ ಭಾಗಿಗಳಾಗಬೇಕು ಎಂದು ಕರೆನೀಡಿದರು.
ತಾಲೂಕು ಕರ್ನಾಟಕ ಜನಪದ ಪರಿಷತ್ತಿನ ಅಧ್ಯಕ್ಷ ಬಸವರಾಜ ಬಣಕಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿ ಲೋಕೇಶ್, ಉಪತಹಶೀಲ್ದಾರ್ ಶಿವಕುಮಾರ್, ಶಿಕ್ಷಣ ಇಲಾಖೆ ಚುನಾವಣಾಧಿ ಕಾರಿ ಚರಂತಯ್ಯ ಮತದಾನ ಮತ್ತು ಅದರ ಮಹತ್ವ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೌಢ,. ಪ್ರಾಥಮಿಕ, ಕಾಲೇಜು ಹಂತದಲ್ಲಿ ಮತದಾನ ದಿನದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಓದಿ : ಚುನಾವಣೆ ಅರಿವು ಅಗತ್ಯ: ಶೇಷಗಿರಿ