Advertisement

ಜೀವನದಲ್ಲಿ ನೋವಿದ್ದರೂ ನಗಿಸುತ್ತಿದ್ದ ಚಾರ್ಲಿ ಚಾಪ್ಲಿನ್‌

05:46 PM Apr 20, 2021 | Team Udayavani |

ಬಳ್ಳಾರಿ: ನಟ ಚಾರ್ಲಿ ಚಾಪ್ಲಿನ್‌ ತನ್ನ ನಿಜ ಜೀವನದಲ್ಲಿ ಎಷ್ಟೇ ನೋವು ಸಂಕಟವಿದ್ದರೂ ನಟನೆಯಲ್ಲಿ ನಗೆಯನ್ನು ಚಿಮ್ಮಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ಕೆ. ರಂಗಣ್ಣನವರ ಹೇಳಿದರು.

Advertisement

ನಗರದ ಕನ್ನಡ ಭವನದಲ್ಲಿ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಚಿತ್ರಕಲಾ ಶಿಕ್ಷಕರು ಚಿತ್ರಿಸಿದ್ದ ಚಿತ್ರಗಳ ಚಿತ್ರಕಲಾ ಪ್ರದರ್ಶನವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ವ್ಯಕ್ತಿ ಸದಾ ಕ್ರಿಯಾಶೀಲನಾಗಿದ್ದರೆ ಏನೆಲ್ಲಾ ಸೃಜಿಸಬಲ್ಲ ಎಂಬುದಕ್ಕೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾ ಚಿತ್ರಕಲಾ ಶಿಕ್ಷಕರು ಚಿತ್ರಿಸಿದ ಈ ವಿಭಿನ್ನ ರೀತಿಯ ಚಿತ್ರಗಳೇ ತಾಜಾ ಉದಾಹರಣೆಯಾಗಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, ಅರವತ್ನಾಲ್ಕು ಕಲೆಗಳಲ್ಲಿ ಅತಿ ಪ್ರಮುಖವಾದುವು ಸಾಹಿತ್ಯ, ಸಂಗೀತ, ಚಿತ್ರಕಲೆ, ನೃತ್ಯ, ಭಾರತೀಯ ಸಂಪ್ರದಾಯಗಳಲ್ಲಿ ಲಲಿತ ಕಲೆಗಳು ಪ್ರಮುಖವಾಗಿವೆ. ಕಲೆಯು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಅದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎಂದ ಅವರು, ಬಳ್ಳಾರಿ ಜಿಲ್ಲೆ ಸಾಂಸ್ಕೃತಿಕ ಕಲೆಗಳ ನೆಲೆವೀಡು. ಕಲೆ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಸದಾ ಕಾಲ ಬೆಂಬಲ ನೀಡುತ್ತದೆ ಎಂದರು.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಯು.ಅಶೋಕ್‌ ಮಾತನಾಡಿ, ಕಲಾವಿದರು ಹಳೆಯ ಸಂಪ್ರದಾಯಗಳಿಗೆ ಜೋತು ಬೀಳದೆ ಕಲೆಯಲ್ಲಿ ಹೊಸತನ ಹೊಸ ಆವಿಷ್ಕಾರಗಳನ್ನು ಮಾಡಬೇಕು .ಹೊಸ ಹೊಸ ರೀತಿಯ ಮಾಧ್ಯಮಗಳನ್ನು ಆಯ್ಕೆ ಮಾಡಿಕೊಂಡಾಗ ಇಡೀ ವಿಶ್ವವೇ ನಿಮ್ಮ ಕಲಾ ಪ್ರೌಢಿಮೆಯನ್ನು ಗಮನಿಸಿ ಗೌರವ ನೀಡುತ್ತದೆ ಎಂದರು. ಭವಾನಿ ಲಲಿತಕಲಾ ಮಂದಿರದ ಸಂಸ್ಥಾಪಕ ಆರ್‌.ಎಲ್‌.ಜಾಧವ್‌ ಮಾತನಾಡಿ, ಚಿತ್ರಕಲಾ ಶಿಕ್ಷಕರಲ್ಲಿ ನವಚೈತನ್ಯ ಮೂಡಿಸುವಂತಹ ಇಂಥ ಪ್ರದರ್ಶನಗಳು ಪ್ರತಿವರ್ಷ ನಡೆಯುವಂತಾಗಬೇಕು. ಬಳ್ಳಾರಿ ಜನತೆಯೂ ಕೂಡ ಇಂಥ ಪ್ರದರ್ಶನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಿಸಿ ನೋಡುವಂತಾಗಬೇಕು ಎಂದು ಆಶಿಸಿದರು.

ಶಿಲ್ಪ ಮತ್ತು ಚಿತ್ರಕಲಾ ಸಂಘದ ಚಿಕ್ಕಬಳ್ಳಾಪುರದ ಅಧ್ಯಕ್ಷ ಎನ್‌.ಎಂ. ಶಿವರಾಜ್‌ ಮಾತನಾಡಿ, ಕಲಾಕೃತಿಗಳಲ್ಲಿ ಟೂಡಿ ತ್ರಿಡಿ ಫೂರ್‌ ಕೆ ಹಂತಗಳನ್ನು ಬಣ್ಣಗಳಲ್ಲಿ ಯಾವ ರೀತಿಯಲ್ಲಿ ಮಾಡಬಹುದು ಎಂಬುದನ್ನು ವಿವರಿಸಿದರಲ್ಲದೆ ಪ್ರತಿವಾರವೂ ಬಳ್ಳಾರಿಯಲ್ಲಿ ಕಲಾವಿದರಿಗೆ ಉಚಿತವಾಗಿ ಹೊಸ ಹೊಸ ರೀತಿಯ ಕಲಾ ಪ್ರಕಾರಗಳ ಪ್ರಾತ್ಯಕ್ಷಿಕೆ ನೀಡುವದಾಗಿ ಭರವಸೆ ನೀಡಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಾರಿ ವಿಜಯನಗರ ಜಿಲ್ಲೆಗಳ ಅಧ್ಯಕ್ಷ ಯು.ರಮೇಶ್‌ ವಹಿಸಿದದ್ದರು. ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ನಿರೂಪಿಸಿದರು. ಒಟ್ಟು 56 ಕಲಾಕೃತಿಗಳು ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next