Advertisement
ಬಳ್ಳಾರಿಯ ವಿಮ್ಸ್ ಸಭಾಂಗಣದಲ್ಲಿ ಸೋಮವಾರ ನಡೆದ ಕೋವಿಡ್ ತುರ್ತು ಪರಿಸ್ಥಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇವರನ್ನು ಹೊರಗಡೆ ಬಿಡುವುದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯ ಅಧಿ ಕಾರಿಗಳು, ರ್ಯಾಪಿಡ್ ರಿಸ್ಪಾನ್ಸ್ ಟೀಂ, ಸಂಬಂಧಿಸಿದ ಆಯಾ ವ್ಯಾಪ್ತಿಯ ವೈದ್ಯಾಧಿ ಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ನಿಗಾವಹಿಸಿ ಕ್ರಮವಹಿಸಬೇಕು ಎಂದು ಸೂಚಿಸಿದ ಅವರು ಹೋಂ ಐಸೋಲೇಶನ್ ಇರುವವರ ವಿಷಯದಲ್ಲಿ ಉದಾಸೀನತೆ ತೋರಿದಲ್ಲಿ ಸೋಂಕು ವ್ಯಾಪಕವಾಗಿ ಹರಡಲಿದ್ದು, ಅದರ ಪರಿಣಾಮವನ್ನೆಲ್ಲ ನಾವೆಲ್ಲರೂ ಅನುಭವಿಸಬೇಕಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅವರು ಅ ಧಿಕಾರಿಗಳಿಗೆ ಹೇಳಿದರು.
Related Articles
Advertisement
ಸದ್ಯದ ಪಾಸಿಟಿವಿಟಿ ದರ 100ಕ್ಕೆ ಶೇ. 5ರಷ್ಟಿದ್ದು, ಇನ್ನೂ 10 ದಿನಗಳಲ್ಲಿ ಶೇ.10ಕ್ಕಿಂತ ಜಾಸ್ತಿಯಾಗಲಿರುವ ಆತಂಕದ ವಿಷಯವನ್ನು ಡಿಸಿ ಮಾಲಪಾಟಿ ಅವರು ಸಚಿವ ಆನಂದಸಿಂಗ್ ಅವರ ಗಮನಕ್ಕೆ ತಂದರು ಮತ್ತು ಇದಕ್ಕಾಗಿ ಜಿಲ್ಲಾಡಳಿತ ಕೈಗೊಂಡ ಸಿದ್ಧತಾ ಕ್ರಮಗಳನ್ನು ಅವರು ವಿವರಿಸಿದರು. ಕೋವಿಡ್ ಆಸ್ಪತ್ರೆಯನ್ನಾಗಿ ಟ್ರಾಮಾಕೇರ್ ಸೆಂಟರ್ ಕಾರ್ಯನಿರ್ವಹಿಸುತ್ತಿದ್ದು, ಸೊಂಕಿತರು ಹೆಚ್ಚಾದಲ್ಲಿ ನ್ಯೂ ಡೆಂಟಲ್ ಕಾಲೇಜು, ಓಲ್ಡ್ ಡೆಂಟಲ್ ಕಾಲೇಜು, ಜಿಲ್ಲಾಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್ ಕಾಲೇಜು ಮತ್ತು ಎಲ್ಲ ತಾಲೂಕು ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಹಾಗೂ ಜಂಬುನಾಥ ಗುಡ್ಡದ ಬಳಿಯ ಹಾಸ್ಟೆಲ್, ಕನ್ನಡ ವಿವಿಯಲ್ಲಿರುವ ಎಸ್ಸಿ/ಎಸ್ಟಿ ಹಾಸ್ಟೆಲ್, ಕೂಡ್ಲಿಗಿಯ ಬಿಸಿಎಂ ಹಾಸ್ಟೆಲ್ ಹಾಗೂ ಸಿರಗುಪ್ಪದ ಪದವಿಪೂರ್ವ ಹಾಸ್ಟೆಲ್ ಸೇರಿದಂತೆ ಇನ್ನಿತರೆಡೆ ಕೋವಿಡ್ ಕೇರ್ ಸೆಂಟರ್‌ಗಳನ್ನು ಗುರುತಿಸಿ ವೈದ್ಯರು ಮತ್ತು ನರ್ಸ್ ಹಾಗೂ ಸಿಬ್ಬಂದಿ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಲಾಗಿದೆ ಎಂದರು.
ವಿವಿಧ ವಿಷಯಗಳ ಕುರಿತು ಸು ದೀರ್ಘವಾಗಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸಂಸದ ದೇವೆಂದ್ರಪ್ಪ, ಶಾಸಕರಾದ ಅಲ್ಲಂ ವೀರಭದ್ರಪ್ಪ, ಸೋಮಲಿಂಗಪ್ಪ, ಜಿಪಂ ಸಿಇಒ ಕೆ.ಆರ್. ನಂದಿನಿ, ಎಸ್ಪಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹೊÉàಟ್, ಅಪರ ಜಿಲ್ಲಾಧಿ ಕಾರಿ ಮಂಜುನಾಥ, ಡಿಎಚ್‌ಒ ಡಾ| ಜನಾರ್ಧನ, ವಿಮ್ಸ್ ನಿರ್ದೇಶಕ ಡಾ| ಗಂಗಾಧರಗೌಡ ಮತ್ತಿತರರು ಇದ್ದರು