Advertisement

ಬಳ್ಳಾರಿಯಲ್ಲಿ ಮುಂದುವರಿದ ಕಾರ್ಯಾಚರಣೆ

06:42 PM Apr 19, 2021 | Team Udayavani |

ಬಳ್ಳಾರಿ: ಕೋವಿಡ್‌ ಸೋಂಕು ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದಿದ್ದವರಿಗೆ ದಂಡ ವಿ ಧಿಸುವ ಕಾರ್ಯಾಚರಣೆಯನ್ನು ಅತ್ಯಂತ ಪರಿಣಾಮಕಾರಿ ಬಳ್ಳಾರಿಯಲ್ಲಿ ಭಾನುವಾರವೂ ಮುಂದುವರಿಯಿತು. ಡಿಸಿಯಂತೆಯೇ ಸ್ವತಃಫೀಲ್ಡಿಗಿಳಿದ ಎಸ್ಪಿ ಸೈದುಲು ಅಡಾವತ್‌, ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಪೊಲೀಸ್‌ ಇಲಾಖೆ ಅ ಧಿಕಾರಿಗಳು ಮಾಸ್ಕ್ ಧರಿಸದ ಜನರಿಗೆ ಸ್ಥಳದಲ್ಲೇ ದಂಡ ವಿಧಿ ಸಿ ಬಿಸಿ ಮುಟ್ಟಿಸುವ ಮೂಲಕ ಕೋವಿಡ್‌ ನಿಯಂತ್ರಿಸುವ ಕುರಿತು ಜಾಗೃತಿ ಮೂಡಿಸಿದರು.

Advertisement

ನಗರದ ಬ್ರೂಸ್‌ಪೇಟೆ ಪೊಲೀಸ್‌ ಠಾಣೆ ಮಾರ್ಗ, ತೇರು ಬೀದಿ, ಜೈನ್‌ ಮಾರುಕಟ್ಟೆ, ಮೋತಿ ಸರ್ಕಲ್‌ ಸೇರಿದಂತೆ ವಿವಿಧೆಡೆ ಕಾಲ್ನಡಿಗೆಯಲ್ಲೇ ಸಂಚರಿಸಿದ ಎಸ್ಪಿ ಸೈದುಲು ಅಡಾವತ್‌, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಮಾಸ್ಕ್ ಧರಿಸದ ಜನರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲಿಯೇ ಅನೇಕರಿಗೆ ದಂಡ ವಿಧಿ ಸಿದರು.

ಕೋವಿಡ್‌ ನಿಯಮಾವಳಿಗಳ ಉಲ್ಲಂಘನೆ ಆಧಾರದ ಮೇರೆಗೆ ಕೆಲ ಅಂಗಡಿಗಳ ಮಾಲೀಕರಿಗೆ ಶೋಕಾಸ್‌ ನೋಟಿಸ್‌ ಕೂಡ ಇದೇ ಸಂದರ್ಭದಲ್ಲಿ ಜಾರಿ ಮಾಡಿದರು. ಕೆಲ ನಿರ್ಗತಿಕರಿಗೆ ಇದೇ ಸಂದರ್ಭದಲ್ಲಿ ಎಸ್ಪಿ ಸೈದುಲು ಅಡಾವತ್‌ ಅವರು ಮಾಸ್ಕ್ಗಳನ್ನು ನೀಡಿ, ಇನ್ಮುಂದೆ ಕಡ್ಡಾಯವಾಗಿ ಧರಿಸುವಂತೆ ಸೂಚಿಸಿದರು. ಎಸ್ಪಿ ಸೈದುಲು ಅಡಾವತ್‌ ಅವರು ಅಂಗಡಿಗಳ ಮಾಲೀಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ ದೃಷ್ಟಿಯಿಂದ ಮಾಕಿಂಗ್‌ ಮಾಡಬೇಕು. ಮಾಸ್ಕ್ ಧರಿಸದವರನ್ನು ಯಾವುದೇ ಕಾರಣಕ್ಕೂ ಅಂಗಡಿಗಳ ಒಳಗಡೆ ಬಿಟ್ಟುಕೊಳ್ಳಬಾರದು. ಅಂಗಡಿಗಳಲ್ಲಿ ಥರ್ಮಲ್‌ ಸ್ಕಾನರ್‌, ಸ್ಯಾನಿಟೈಸರ್‌ ಕಡ್ಡಾಯವಾಗಿರಬೇಕು ಮತ್ತು ಗ್ರಾಹಕರಿಗೆ ತಪಾಸಣೆ ಮಾಡಿಯೇ ಒಳಬಿಡಬೇಕು. ಸಾಮಾಜಿಕ ಅಂತರ ಪಾಲಿಸಬೇಕು.

ಇದು ಎಲ್ಲರ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ. ಒಂದು ವೇಳೆ ಉಲ್ಲಂಘಿಸಿದಲ್ಲಿ ನಿಯಮಾನುಸಾರ ದಂಡ ವಿಧಿ ಸಲಾಗುವುದು ಮತ್ತು ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ಕೋವಿಡ್‌ ನಿಯಮ ಉಲ್ಲಂಘಿಸುವ ಅಂಗಡಿಗಳಿಗೆ ನಾನ್‌ ಎಸಿ ಅಂಗಡಿಗಳಿಗೆ 5 ಸಾವಿರ ದಂಡ, ಎಸಿ ಸೌಲಭ್ಯವಿರುವ ಅಂಗಡಿಗಳಿಗೆ 10 ಸಾವಿರ ಮತ್ತು ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು.

ಮಲಬಾರ್‌ ಗೋಲ್ಡ್‌ ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಿದ ಎಸ್ಪಿ ಸೈದುಲು ಅಡಾವತ್‌ ಹಾಗೂ ಆಯುಕ್ತೆ ಪ್ರೀತಿ ಗೆಹೊÉàಟ್‌ ಅವರು ಕೋವಿಡ್‌ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದಿರುವುದಕ್ಕೆ ಮಳಿಗೆಯಲ್ಲಿನ ವ್ಯವಸ್ಥಾಪಕರಿಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅಲ್ಲಿಗೆ ಬಂದಿದ್ದ ಗ್ರಾಹಕರಿಗೂ ಕೋವಿಡ್‌ ಬಿಸಿ ಮುಟ್ಟಿಸಿದರು.

Advertisement

ದಂಡ ವಿ ಧಿಸಲು ಪೊಲೀಸ್‌ ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿಗೆ ಸೂಚಿಸಿದರು. ನಂತರ ಅದೇ ರಸ್ತೆಯಲ್ಲಿ ಯಾವುದೇ ರೀತಿಯ ಅನುಮತಿ ಪಡೆದುಕೊಳ್ಳದೇ ನಡೆಸುತ್ತಿದ್ದ ಸ್ನೂಕರ್‌ ಶಾಪ್‌ಗೆ ಭೇಟಿ ನೀಡಿ ಪರಿಶೀಲಿಸಿದ ಎಸ್ಪಿ ಮತ್ತು ಪಾಲಿಕೆ ಆಯುಕ್ತರು ಅನುಮತಿ ಪಡೆಯದಿರುವುದನ್ನು ಖಚಿತಪಡಿಸಿಕೊಂಡು ಅಂಗಡಿಯನ್ನು ಸೀಜ್‌ ಮಾಡಿ ಕ್ಲೋಸ್‌ ಮಾಡಿದರು.

ನಗರ ಪ್ರದೇಶದಲ್ಲಿ ಮಾಸ್ಕ್ ಧರಿಸಿದೇ ಓಡಾಡುತ್ತಿದ್ದಲ್ಲಿ 250 ರೂ. ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ 100 ರೂ. ದಂಡ ವಿಧಿ ಸಲಾಗುತ್ತಿದೆ. ಜಿಲ್ಲೆಯಾದ್ಯಂತ ಮಾಸ್ಕ್ ಧರಿಸದಿರುವುದಕ್ಕೆ ದಂಡ ವಿ ಧಿಸುವ ಕಾರ್ಯಾಚರಣೆ ಶುರು ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ರಮೇಶ, ಪೊಲೀಸ್‌ ಅಧಿ  ಕಾರಿಗಳಾದ ನಾಗರಾಜ, ಹಾಲೇಶ ಹಾಗೂ ಪೊಲೀಸ್‌ ಸಿಬ್ಬಂದಿ, ಮಹಾನಗರ ಪಾಲಿಕೆ ಅ ಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next