ಪಿ.ಸತ್ಯನಾರಾಯಣ
ಹೊಸಪೇಟೆ: ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿಗಾಗಿ ಸೈಕಲ್ ಮೂಲಕ ರಾಷ್ಟ್ರ ಪರ್ಯಟನೆ ಕೈಗೊಂಡಿರುವ ಪಶ್ಚಿಮ ಬಂಗಾಳದ ಯುವಕನೊಬ್ಬ ವಿಶ್ವವಿಖ್ಯಾತ ಹಂಪಿಗೆ ಶನಿವಾರ ಭೇಟಿ ನೀಡಿ ಜಾಗೃತಿ ಮೂಡಿಸಿದರು. ಪಶ್ಚಿಮ ಬಂಗಾಳದ ಸಿಲ್ಲಿಗುರಿ ಪುಟ್ಟ ಗ್ರಾಮದ ನಿವಾಸಿ ಮಧೈಪಾಲ್ ಎಂಬ ಯುವಕ ರಸ್ತೆ ನಿಯಮ ಕುರಿತು ಜಾಗೃತಿ ಮೂಡಿಸಲು ಮುಂದಾಗಿದ್ದು, ಸೈಕಲ್ ಮೂಲಕವೇ ಭಾರತ ಸುತ್ತುವ ಸಂಕಲ್ಪ ಮಾಡಿದ್ದಾರೆ.
ಕಾರು ಡ್ರೈವಿಂಗ್ ಸ್ಕೂಲ್ ನಡೆಸುತ್ತಿರುವ ಈತ ಡಿ.1ರಂದು ಕಳೆದ ಪಶ್ಚಿಮ ಬಂಗಾಳದ ಸಿಲ್ಲಿಗಿರಿ ಗ್ರಾಮದಿಂದ ಸೈಕಲ್ ಪ್ರವಾಸ ಆರಂಭಿಸಿದ್ದು ಶುಕ್ರವಾರ ಹಂಪಿಗೆ ಬಂದು ಇಳಿದಿದ್ದಾರೆ. ಪಶ್ಚಿಮ ಬಂಗಾಳದಿಂದ ಆರಂಭವಾದ ಸೈಕಲ್ ಯಾತ್ರೆ ಒಡಿಸ್ಸಾ, ಆಂಧ್ರ, ತೆಲಗಾಂಣ, ತಮಿಳುನಾಡು ಹಾಗೂ ಕೇರಳದ ಮೂಲಕ ಕರ್ನಾಟಕ ಪ್ರವೇಶ ಮಾಡಿ ಮಂಗಳವಾರ, ಮೈಸೂರು, ಬಂಡಿಪುರ, ಉಡುಪಿ ಯುವಕ ಇದೀಗ ಹಂಪಿಗೆ ಭೇಟಿ ನೀಡಿದ್ದಾರೆ.
ಕಳೆದ ನಾಲ್ಕು ತಿಂಗಳು ಅವಧಿಯಲ್ಲಿ 1 ಸಾವಿರ ಕಿಮೀನಷ್ಟು ದಾರಿಯನ್ನು ಕ್ರಮಿಸಿರುವ ಇವರು, ಒಟ್ಟು 18 ತಿಂಗಳ ಭಾರತಯಾತ್ರೆ ಪೂರ್ಣಗೊಳಿಸಿ, ಸ್ವಗ್ರಾಮಕ್ಕೆ ಮರಳಲಿದ್ದಾರೆ. ದಾರಿಯುದಕ್ಕೂ ಟ್ರಾμಕ್ ನಿಯಮ ಕುರಿತು ಜನಜಾಗƒತಿ ಮೂಡಿಸುತ್ತಿದ್ದಾರೆ. ಸೈಕಲ್ ಮುಂಭಾಗದಲ್ಲಿ ಸೇಪ್ ಡ್ರೈವ್ ಹಾಗೂ ಸೇವ್ ಲೈಪ್ ಎಂಬ ಸ್ಲೋಗನ್ ನೇತು ಹಾಕಿಕೊಂಡು ಗಮನ ಸೆಳೆಯುತ್ತಿದ್ದಾರೆ. ಮಾರ್ಗದದ್ದಕ್ಕೂ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಪ-ಸ್ವಲ್ಪ ಹಣ ಸಹಾಯವನ್ನೂ ಮಾಡುವ ಮೂಲಕ ಯುವಕನ ಸೈಕಲ್ ಯಾತ್ರೆಗೆ ನೆರವು ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರು ಯುವಕನೊಂದಿಗೆ ´ೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಾರೆ. ದಿನಚರಿ: ನಸುಕಿನ ಜಾವದಲ್ಲಿ ಆರಂಭವಾಗುವ ಯುವಕನ ಸೈಕಲ್ ಪ್ರವಾಸ ಸಂಜೆ ಮಬ್ಬು ಕವಿಯುವರೆಗೂ ನಡೆಯುತ್ತದೆ. ನಂತರ ಮಾರ್ಗದ ಸುರಕ್ಷಿತ ಸ್ಥಳದಲ್ಲಿ ರಾತ್ರಿ ವ್ಯಾಸ್ತವ್ಯ ಹೂಡಿ, ಪುನಃ ಯಾತ್ರೆ ಪ್ರಾರಂಭಿಸುತ್ತಾರೆ. ಮಾರ್ಗ ಮಧ್ಯದಲ್ಲಿ ಸಿಗುವ ಹೋಟೆಲ್‌ನಲ್ಲಿ ಉಟೋಪಾಚಾರ ಮುಗಿಸಿಕೊಂಡು ಮುಂದಿನ ಮಾರ್ಗ ತುಳಿಯುತ್ತಾರೆ.
ಸ್ಮಾರಕ ವೀಕ್ಷಣೆಗೆ ಸಿಗಲಿಲ್ಲ ಅವಕಾಶ: ಕೋವಿಡ್ ಹೆಚ್ಚಳವಾದ ಹಿನ್ನಲೆಯಲ್ಲಿ ಹಂಪಿ ಸ್ಮಾರಕ ವೀಕ್ಷಣೆಗೆ ನಿರ್ಬಂಧ ಹೇರಿದೆ. ಇದರಿಂದಾಗಿ ಹಂಪಿಯಲ್ಲಿ ಸ್ಮಾರಕ ವೀಕ್ಷಣೆ ಮಾಡದೇ ಯುವಕ ಒಲ್ಲದ ಮನಸ್ಸಿನಿಂದ ಹಂಪಿಯಿಂದ ನಿರ್ಗಮಿಸಿದರು. ಹುಬ್ಬಳ್ಳಿ, ಗೋವಾ, ಮಹಾರಾಷ್ಟ್ರ, ಗುಜರಾತ್ ಹಾಗೂ ಪಂಜಾಬ್ ಮೂಲಕ ಪ್ರವಾಸ ಮುಂದುವರೆಸಲಿದ್ದಾರೆ.