ನಗರದ ತೆಕ್ಕಲಕೋಟೆ ಹೊನ್ನೂರಮ್ಮ ಎಂ.ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂಕಾಲೇಜ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾರರುಪ್ರಮುಖ ಪಾತ್ರ ವಹಿಸಲಿದ್ದಾರೆ. ಮತದಾರರಿಗೆ ಸೂಕ್ತಮಾಹಿತಿ ನೀಡಬೇಕು, 18 ವರ್ಷ ತುಂಬಿದವರುಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದುಚುನಾವಣಾ ಆಯೋಗದ ಗುರಿಯಾಗಿದೆ.
ಈ ಹಿಂದೆ 21 ವರ್ಷ ತುಂಬಿದವರಿಗೆ ಮತದಾರರಗುರುತಿನ ಚೀಟಿ ನೀಡಲಾಗುತ್ತಿತ್ತು. ಆದರೆ ಈಗ 18ವರ್ಷ ತುಂಬಿದವರಿಗೆ ಮತದಾರರ ಗುರುತಿನ ಚೀಟಿನೀಡಲಾಗುತ್ತದೆ. ಯುವ ಪೀಳಿಗೆಗೆ ಮತದಾನಮಾಡುವ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು.ಮತದಾನ ಪ್ರಕ್ರಿಯೆಯಲ್ಲಿ ಯುವಕರ ಪಾತ್ರಮುಖ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರುಮತದಾನ ಮಾಡಬೇಕೆಂದು ಕರೆ ನೀಡಿದರು.ಸಹಾಯಕ ಪ್ರಾಧ್ಯಾಪಕ ಗಂಗಾಧರ ಅಂತಿಮಪದವಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
Advertisement
ಸಹಾಯಕ ಪ್ರಾಧ್ಯಾಪಕಿ ಅಂಬುತಾಯಿಅವರು ಮತದಾನದ ಮಹತ್ವ ಕುರಿತು ಉಪನ್ಯಾಸನೀಡಿದರು. ಶಿರಸ್ತೇದಾರ ಎನ್.ಬಿ. ಬಾಬು, ಪ್ರಭಾರಿಪ್ರಾಂಶುಪಾಲ ಕೃಷ್ಣಪ್ಪ ನಾಯಕ, ಸಹಾಯಕಪ್ರಾಧ್ಯಾಪಕರಾದ ಮಹೇಶ್ವರಿ, ಕೆ.ಎಂ. ಚಂದ್ರಕಾಂತ,ಉಪನ್ಯಾಸಕರಾದ ಎನ್. ರುದ್ರಪ್ಪ, ಮೆಹತಾಜ್‌ಹಾಗೂ ವಿದ್ಯಾರ್ಥಿಗಳು ಇದ್ದರು.