Advertisement

ತಟ್ಟೆ -ಲೋಟ ಬಡಿದು ಪ್ರತಿಭಟನೆ-ಆಕ್ರೋಶ

06:28 PM Apr 16, 2021 | Team Udayavani |

ಹಗರಿಬೊಮ್ಮನಹಳ್ಳಿ: ಸಾರಿಗೆ ನೌಕರರಿಗೆ ಸರ್ಕಾರ 6ನೇ ವೇತನ ಆಯೋಗದ ನೀಡುವವರೆಗೂ, ನಾವು ನಮ್ಮ ಮನೆಯವರನ್ನು ಸಾರಿಗೆ ನೌಕರಿಗೆ ಕಳುಸುವುದಿಲ್ಲ ಎಂದು ಸಾರಿಗೆ ಸಂಸ್ಥೆಯ ವಿರುದ್ಧ ಸಾರಿಗೆ ನೌಕರರ ಮಡದಿಯರು ಹರಿಹಾಯ್ದರು.

Advertisement

ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಗುರುವಾರ ತಟ್ಟೆ, ಲೋಟ್‌ಗಳನ್ನು ಬಡಿದು ಸಾರಿಗೆ ನೌಕರರ ಕುಟುಂಬದ ಪಾಲಕರು, ಪತ್ನಿ, ಮಕ್ಕಳು ಸಮೇತರಾಗಿ, ಪ್ರತಿಭಟನೆ ಮೂಲಕ ಸರಕಾರ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಸಾರಿಗೆ ನೌಕರನ ಪತ್ನಿ ಕಸ್ತೂರಮ್ಮ ಮಾತನಾಡಿ, ಕಳೆದೊಂದು ವಾರದಿಂದ ಮುಷ್ಕರ ನಡೆಸತ್ತಿರುವ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಕಿಂಚಿತ್ತು ಕಾಳಜಿ ತೋರಿಸದ ಸರ್ಕಾರ ಜನವಿರೋಧಿಯಾಗಿದೆ. ನಾವು ನಮ್ಮ ಕುಟುಂಬಗಳ ಬಗ್ಗೆ ಚಿಂತಿಸದೇ ಇದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಈಗ ಖಾಸಗಿ ಬಸ್‌ಗಳನ್ನಿಡಿದು ಓಡಿಸುತ್ತಿದ್ದಾರೆ. ಖಾಸಗಿ ಕುಟುಂಬದವರು ಬದುಕಿದಂತೆ ನಮ್ಮ ಕುಟುಂಬಗಳು ಬದಕುಬೇಕಲ್ಲವೆ ಎಂದು ಬೇಸರ ವ್ಯಕ್ತಪಡಿಸಿದರು. ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಬಿ.ಮಾಳಮ್ಮ ಮಾತನಾಡಿ, ಹ.ಬೊಹಳ್ಳಿ ಘಟಕದ ಕಾರ್ಮಿಕರನ್ನು, ನೌಕರರನ್ನು ಮೇಲಾಧಿ ಕಾರಿಗಳು ಭಯಪಡಿಸಿ ಸೇವೆ ಪಡೆಯುತ್ತಿದ್ದಾರೆ. ಭಯದ ವಾತಾವರಣದಲ್ಲಿಯೇ ನಡೆದರೆ, ಮುಂದೆ ಯಾವುದೇ ಅವಘಡಗಳು ಸಂಭವಿಸಿದರೆ ಯಾರು ಹೊಣೆ ಎಂದು ಕಿಡಿಕಾರಿದರು.

ಸಿಐಟಿಯುನ ಆರ್‌.ಎಸ್‌.ಬಸವರಾಜ್‌ ಮಾತನಾಡಿ, ಅಲ್ಲಲ್ಲಿ ಸಾರಿಗೆ ನೌಕರರನ್ನು ಬೆದರಿಸಿ, ಆಮೀಷಗಳನ್ನು ಹೊಡ್ಡಿ ಕೆಲಸ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದಂತಾಗುತ್ತಿದೆ. ನೌಕರರು ಕೇಳುವುದರಲ್ಲಿ ನ್ಯಾಯ ಸಮ್ಮತವಾಗಿದೆ. ಅವರ ಬೇಡಿಕೆಗಳು ಈಡೇರಲೇಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಎಸ್‌.ಜಗನ್ನಾಥ್‌, ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದನಗೌಡ, ಕೃಷಿಕ ಸಮಾಜದ ಅಧ್ಯಕ್ಷ ದೇವರಾಜ್‌ ಸೇರಿದಂತೆ ಮಾತನಾಡಿದರು. ಸತ್ಸಂಗ ಸಮಿತಿಯ ಅಧ್ಯಕ್ಷ ಲಕ್ಷಿ ¾àಪತಿ, ಟಿಪ್ಪು ಸುಲ್ತಾನ್‌ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಸೈಯದ್‌ ಇರ್ಫಾನ್‌, ಸಾರಿಗೆ ನೌಕರರ ಕುಟುಂಬದವರಾದ ರೇಣುಕಾ, ಎಚ್‌. ಎಂ.ಉಮಾ, ಜಿ.ಪಾರ್ವತಿ, ಅನಿತಾ, ಗೀತಾ, ಮಹೇಶ್ವರಿ, ಶ್ಯಾಮಲ, ಶಿಲ್ಪ, ಶಾಂತಮ್ಮ, ಅಂಜಿನಮ್ಮ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next