Advertisement
ಸಂಘದ ತಾಲೂಕು ಅದ್ಯಕ್ಷ ಇ.ಆರ್ .ಯಲ್ಲಪ್ಪ ಮಾತನಾಡಿ, ಕೃಷಿ ಸಂಬಂಧಿ ತ ಕೆಲಸಗಳಲ್ಲಿ ತೊಡಗುವವರ ಕನಿಷ್ಠ ವೇತನವನ್ನು ಪರಿಷ್ಕರಿಸಿ 1-4-2020 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, ಈ ಆದೇಶದ ಪ್ರಕಾರ ಕೃಷಿ ರಂಗದಲ್ಲಿ ಕೆಲಸ ಮಾಡುತ್ತಿರುವ ಕೃಷಿ ಕಾರ್ಮಿಕರಿಗೆ 424.80 ರೂ. ಕನಿಷ್ಠ ವೇತನ ಜಾರಿಯಾಗಿರುತ್ತದೆ. ಈಗ ಕೇಂದ್ರ ಸರ್ಕಾರ ಗ್ರಾಮೀಣಾ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವವರ ಕನಿಷ್ಠ ದಿನಗೂಲಿಯನ್ನು ಪರಿಷ್ಕರಿಸುವ ಆದೇಶ ಹೊರಡಿಸಿದೆ. 15-03-2021ರಂದು ಹೊರಡಿಸಲಾದ ಈ ಆದೇಶದ ಪ್ರಕಾರ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸಗಾರರ ಕನಿಷ್ಠ ದಿನಗೂಲಿ ಕರ್ನಾಟಕದಲ್ಲಿ ಕೇವಲ 289 ರೂ. ಇರುತ್ತದೆ. ಆದರೆ ಈ ಎರಡು ಕೂಲಿ ದರಗಳ ನಡುವೆ ಗಣನೀಯವಾದ ವ್ಯತ್ಯಾಸವಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ. ಉದ್ಯೋಗ ಖಾತ್ರಿ ಕೆಲಸಗಾರರ ವೇತನವನ್ನು ಕೃಷಿ ಕಾರ್ಮಿಕರಿಗೆ ಅಕುಶಲ ಕೆಲಸಕ್ಕೆ ನೀಡುವ ಕನಿಷ್ಠ ದಿನಗೂಲಿಗಿಂತ ಕಡಿಮೆಯಾಗಿರಬಾರದು.
Advertisement
ಕೃಷಿ ರಂಗದ ಕಾರ್ಮಿಕರ ಕೂಲಿ ಹೆಚ್ಚಿಸಲು ಒತ್ತಾಯ
06:15 PM Apr 16, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.