Advertisement

ಈ ಗ್ರಾಮಗಳಿಗೆ ಮೂಲಸೌಕರ್ಯ ಮರೀಚಿಕೆ!

05:53 PM Apr 13, 2021 | Team Udayavani |

-ಸುಧಾಕರ್‌ ಮಣ್ಣೂರು

Advertisement

ಕುರುಗೋಡು: ತಾಲೂಕಿನ ಮುಷ್ಟಗಟ್ಟೆ. ಎಚ್‌. ವೀರಾಪುರ ಮತ್ತು ಚನ್ನಪಟ್ಟಣ, ಚಿಟಗಿನಾಳ್‌, ಸೋಮಲಾಪುರ ಗ್ರಾಮ ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿದೆ. ನಾಲ್ಕು ಗ್ರಾಮಕ್ಕೆ ಸೂಕ್ತ ರಸ್ತೆ ಸಂಪರ್ಕ, ಬಸ್‌ ವ್ಯವಸ್ಥೆಯಿಲ್ಲ. ಅಕ್ಕಪಕ್ಕದಲ್ಲಿ ಆಸ್ಪತ್ರೆ ಇಲ್ಲ. ರಾತ್ರಿ ಸಮಯದಲ್ಲಿ ಗರ್ಭಿಣಿಯರು ತುರ್ತು ಚಿಕಿತ್ಸೆಗೆ ಹೋಗಬೇಕಾದರೆ ಕುರುಗೋಡು, ಕಂಪ್ಲಿ, ಬಳ್ಳಾರಿ ಇತರೆ ತಾಲೂಕುಗಳಿಗೆ ಹೋಗಬೇಕಿದೆ. ಆದರೆ ಬಸ್‌ ವ್ಯವಸ್ಥೆಯಿಲ್ಲದಂತಾಗಿದೆ.

ಗುಳೆ ಹೋದ ಕುಟುಂಬಗಳು: ಸಿರುಗುಪ್ಪ ತಾಲೂಕಿನ ಕೊನೆ ಗ್ರಾಮವಾದ ಚನ್ನಪಟ್ಟಣ ಗ್ರಾಮ, ಎಚ್‌. ವೀರಾಪುರ ಗ್ರಾಮದಿಂದ ಸುಮಾರು 4 ಕಿಮೀ ದೂರವಿದೆ. ಅಲ್ಲಿನ ಗ್ರಾಮಸ್ಥರು ಬೇರೆ ಕಡೆ ಹೋಗಬೇಕಾದರೆ ಕಾಲ್ನಡಿಗೆ ಮೂಲಕ ಬಂದು ಅಲ್ಲಿಂದ ಹೋಗಬೇಕಿದೆ. ತುಂಗಭದ್ರಾ ಕಾಲುವೆ ಕೊನೆ ಭಾಗದ ರೈತರ ಜಮೀನುಗಳಿಗೆ ಸಮರ್ಪಕ ನಿರಿಲ್ಲದೆ ಕೃಷಿ ಚಟುವಟಿಕೆಗಳು ಕ್ಷಿಣಿಸಿವೆ.

ಇದರಿಂದ ಕೃಷಿ ಕೂಲಿಕಾರ್ಮಿಕರಿಗೆ ಕೈಗೆ ಕೆಲಸವಿಲ್ಲದಂತಾಗಿದೆ. ಹಾಗಾಗಿ ರೈತರು ಮತ್ತು ಕೂಲಿ ಕಾರ್ಮಿಕರು ಗ್ರಾಮ ತೊರೆದು ಗುಳೆ ಹೋಗುತ್ತಿದ್ದಾರೆ. ಎಚ್‌. ವೀರಾಪುರ ಗ್ರಾಮದಲ್ಲಿ 2500 ಕುಟುಂಬಗಳು, ಚಿಟಿಗಿನಾಳ್‌ ಗ್ರಾಮದಲ್ಲಿ 600 ಕುಟುಂಬಗಳು, ಸೋಮಲಾಪುರ ಗ್ರಾಮದಲ್ಲಿ 2100 ಕುಟುಂಬಗಳು, ಚನ್ನಪಟ್ಟಣ ಗ್ರಾಮದಲ್ಲಿ 800 ಕುಟುಂಬಗಳು ವಾಸವಿದ್ದರೂ ಮೂಲ ಸೌಕರ್ಯದಿಂದ ಬಳಲುತ್ತಿದ್ದಾರೆ.

ಕೆರೆಗಳಿದ್ದರೂ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಈಗಲೂ ಕೆರೆಗಳಿಗೆ ಹೋಗಿ ನೀರು ತರಬೇಕಾದ ಪರಿಸ್ಥಿತಿ ಇದೆ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

Advertisement

ಜನಪ್ರತಿನಿಧಿಗಳು ತಾಲೂಕಿಗೆ ಸಮೀಪವಿದ್ದರೂ ಅವರು ಇತ್ತ ತಿರುಗಿಯೂ ನೋಡಲ್ಲ. ಸಕಾಲಕ್ಕೆ ಪ್ರಗತಿ ಪರಿಶೀಲನೆ ಸಭೆ, ಗ್ರಾಮ ಭೇಟಿ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳು ನಡೆಯುತ್ತಿಲ್ಲ.

-ನೀಲಮ್ಮ, ಸರಸ್ವತಿ, ಮಾಯಮ್ಮ, ಗ್ರಾಮಸ್ಥರು

ಈಗಾಗಲೇ ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ ಗ್ರಾಮಗಳಲ್ಲಿ 30ರಿಂದ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕುಡಿಯುವ ನೀರಿನ ಕೆರೆಗಳನ್ನು ಭರ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲೇ ವ್ಯವಸ್ಥೆ ಕಲ್ಪಿಸಲಾಗುವುದು. ಇನ್ನೂ ಬಸ್‌ ವ್ಯವಸ್ಥೆಯು 4 ದಿನಗಳಿಂದ ತೊಂದ್ರೆ ಅಗಿದೆ ಇನ್ನೂ ಎರಡು ಮೂರು ದಿನಗಳಲ್ಲಿ ಅದು ಸಮಸ್ಯೆ ಬಗೆಹರಿಸುವ ವ್ಯವಸ್ಥೆ ಮಾಡುತ್ತೇನೆ. ಒಟ್ಟಾರೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.

ಎಂ.ಎಸ್‌. ಸೋಮಲಿಂಗಪ್ಪ, ಶಾಸಕರು, ಸಿರುಗುಪ

Advertisement

Udayavani is now on Telegram. Click here to join our channel and stay updated with the latest news.

Next