ಬಳ್ಳಾರಿ: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಕೆಎಸ್ ಆರ್‌ಟಿಸಿ ನೌಕರರು ಕಳೆದ ಆರು ದಿನಗಳಿಂದ ನಡೆಸುತ್ತಿರುವ ಮುಷ್ಕರ ನಿಧಾನವಾಗಿ ಸಡಿಲವಾಗಿ, ಬಹುತೇಕ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದರೆ, ಮತ್ತೂಂದೆಡೆ ಮುಷ್ಕರಕ್ಕೆ ಬೆಂಬಲಿಸಿದ ನೌಕರರ ಕುಟುಂಬದ ಸದಸ್ಯರು ನಗರದ ಕುಮಾರಸ್ವಾಮಿ ದೇವಸ್ಥಾನ ಬಳಿ ಸೋಮವಾರ ತಟ್ಟೆ ಹಿಡಿದು ತಮಟೆ ಬಾರಿಸಿ ಪ್ರತಿಭಟಿಸುವ ಮೂಲಕ ನೌಕರರ ಮುಷ್ಕರ ಬೀದಿಗೆ ಬಂದಂತಾಗಿದೆ. ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರ ಕುಟುಂಬದ ಮಹಿಳೆಯರು, ಮಕ್ಕಳು ತಟ್ಟೆಹಿಡಿದು ತಮಟೆ, ಗಂಟೆ ಬಾರಿಸುವ ಮೂಲಕ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.
ನೌಕರರ ಮುಷ್ಕರಕ್ಕೆ ಬೆಂಬಲಿಸಿ ಜಿಲ್ಲಾ ಧಿಕಾರಿ ಕಚೇರಿ ಮತ್ತು ಬಸ್ ನಿಲ್ದಾಣದ ಬಳಿ ತಮಟೆ, ಗಂಟೆ ಬಾರಿಸಿ ಪ್ರತಿಭಟನೆ ನಡೆಸಬೇಕು ಎಂದು ನಿರ್ಣಯಿಸಲಾಗಿತ್ತು. ಆದರೆ ಜಿಲ್ಲಾಧಿ ಕಾರಿಗಳು 144 ಸೆಕ್ಷನ್ ಅಡಿ, ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ದೇವಸ್ಥಾನದ ಬಳಿ ಬೀದಿಯಲ್ಲೇ ನಿಂತು ಬಸ್ ತಡೆದು ತಟ್ಟೆಗಳನ್ನು ಹಿಡಿದು ತಮಟೆ, ಗಂಟೆ ಬಾರಿಸಿ ಪ್ರತಿಭಟಿಸುವ ಮೂಲಕ ಪ್ರತಿಭಟನಾನಿರತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗೊಂದಲ: ರಸ್ತೆಯಲ್ಲಿ ನಿಂತು ಪ್ರತಿಭಟನೆ ನಡೆಸಿದ ನೌಕರರ ಕುಟುಂಬಸ್ಥರು ಕೆಎಸ್ ಆರ್‌ಟಿಸಿ ಬಸ್ ಬರುತ್ತಿದ್ದಂತೆ ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕೆಲಕಾಲ ಗಲಾಟೆ, ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕೆಎಸ್ ಆರ್‌ಟಿಸಿ ಕುಟುಂಬಸ್ಥರನ್ನೂ ತರಾಟೆಗೆ ತೆಗೆದುಕೊಂಡರು. ಈ ವೇಳೆ ಪೊಲೀಸರು ಮತ್ತು ನೌಕರರ ಕಟುಂಬಸ್ಥರ ನಡುವೆಯೂ ವಾಗ್ವಾದ ಉಂಟಾಗಿದ್ದು, ಕೆಲಹೊತ್ತು ಪ್ರಕ್ಷುಬ್ದ ಪರಿಸ್ಥಿತಿ ಉಂಟಾಗಿ ತಿಳಿಯಾಯಿತು.
232 ಬಸ್ ಸಂಚಾರ: ಕಳೆದ ಐದು ದಿನಗಳಿಂದ ನಡೆಯುತ್ತಿರುವ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ನಿಧಾನವಾಗಿ ಸಡಿಲವಾಗುತ್ತಿದೆ. ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರು ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಿಳಿಯುತ್ತಿರುವ ಬಸ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಭಾನುವಾರ ಬಳ್ಳಾರಿ ಹೊಸಪೇಟೆಯಲ್ಲಿ 170ಕ್ಕೂ ಹೆಚ್ಚು ರಸ್ತೆಗಿಳಿದಿದ್ದ ಸಾರಿಗೆ ಬಸ್‌ಗಳು, ಸೋಮವಾರ 232 ಬಸ್‌ಗಳು ಸಂಚಾರ ಆರಂಭಿಸಿವೆ. ಬಳ್ಳಾರಿ ವಿಭಾಗದಲ್ಲಿ 200ಕ್ಕೂ ಹೆಚ್ಚು ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದು, ಕಚೇರಿ ಸಿಬ್ಬಂದಿ, ಮೆಕ್ಯಾನಿಕ್ ವಿಭಾಗದಲ್ಲಿ ಶೇ.90 ರಷ್ಟು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅಲ್ಲದೇ, ಮುಷ್ಕರದ ಅವ ಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಸುಮಾರು 738 ಸಿಬ್ಬಂದಿ ವೇತನವನ್ನು ಬಿಡುಗಡೆ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಕೆಎಸ್ ಆರ್‌ಟಿಸಿ ಬಸ್‌ಗಳ ಸಂಚಾರ ಸಂಪೂರ್ಣ ಸುಧಾರಣೆಯಾಗಲಿದೆ ಎಂದು ಕೆಎಸ್‌ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜಗೋಪಾಲ್ ಪುರಾಣಿಕ್ ತಿಳಿಸಿದ್ದಾರೆ.
ಇನ್ನು ಖಾಸಗಿ ಬಸ್ ಮತ್ತು ಪ್ರಯಾಣಿಕ ವಾಹನಗಳು ಸಹ 40 ವಾಹನಗಳು ಸಂಚರಿಸುತ್ತಿವೆ. ಈಗಾಗಲೇ ಕೆಎಸ್‌ಆರ್ ಟಿಸಿ ಬಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್ ಗಳಿಗೆ ಹತ್ತುತ್ತಿದ್ದಾರೆ. ಖಾಸಗಿ ಬಸ್‌ಗಳು ನಿಲ್ದಾಣಕ್ಕೆ ಆಗಮಿಸುತ್ತಿವೆಯಾದರೂ, ಪ್ರಯಾಣಿಕರು ಆಸಕ್ತಿ ತೋರುತ್ತಿಲ್ಲ. ಆದರೂ, ಪ್ರಯಾಣಿಕರನ್ನು ಕೈಬೀಸಿ ಕರೆಯುತ್ತಿದ್ದಾರೆ. ಇನ್ನೆರಡೂರು ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಗಳ ಸಂಚಾರ ಸಾಮಾನ್ಯವಾದ ಬಳಿಕ ಖಾಸಗಿ ಬಸ್‌ಗಳನ್ನು ಕೈಬಿಡಲಾಗುವುದು ಎಂದವರು ಸ್ಪಷ್ಟಪಡಿಸಿದರು.