ಕಂಪ್ಲಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣಾ ಸಾಕ್ಷರತಾ ಸಮಿತಿಯವತಿಯಿಂದ ರಾಷೀóಯ ಮತದಾರರದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಮುಖ್ಯ ಅತಿಥಿತಾಪಂ ಇಒ ಬಿ. ಬಾಲಕೃಷ್ಣ ಅವರುಮತದಾನದ ಮಹತ್ವದ ಬಗ್ಗೆ ತಿಳಿಸಿದರು.ಕಾಲೇಜಿನ ಪ್ರಾಚಾರ್ಯರಾದಇಂದ್ರಿಪಿ ಮಲ್ಲಿಕಾರ್ಜುನ ಅವರುಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚುನಾವಣಾ ಸಾಕ್ಷರತಾ ಸಮಿತಿಸಂಚಾಲಕರು ಮತ್ತು ರಾಜ್ಯಶಾಸ್ತ್ರವಿಭಾಗದ ಮುಖ್ಯಸ್ಥರಾದ ರಾಜ್ಮಾಟಿ.ಎಂ.ಆರ್‌ರವರು ಪ್ರಸ್ತಾವಿಕನುಡಿಗಳನ್ನಾಡಿದರು.
ಆಯ್ಕೆಶ್ರೇಣಿ ಗ್ರಂಥಪಾಲಕರಾದ ಕೆ.ಗುರುಮೂರ್ತಿರವರು ಮತದಾರರಪ್ರತಿಜ್ಞಾ ವಿಧಿ ಯನ್ನು ಬೋಧಿ ಸಿದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿವಿಧ ವಿಭಾಗಗಳಮುಖ್ಯಸ್ಥರುಗಳಾದ ಡಾ| ಜೆ. ಕೃಷ್ಣ,ಮಮತ ಜಿ.ಎಂ.,ಪ್ರವೀಣ್‌ಕುಮಾರ್‌ಎಮ್.ಎನ್ ವಿದ್ಯಾರ್ಥಿಗಳನ್ನು
ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಚುನಾವಣಾಸಾಕ್ಷರತಸಮಿತಿ·ವತಿಯಿಂದಆಯೋಜಿಸಲಾಗಿದ್ದ·ತಾಲೂಕುಮಟ್ಟದಪ್ರಬಂಧಸ್ಪರ್ದೆಯಲ್ಲಿವಿಜೇತರಾದಜಿ.ಕಾವ್ಯ (ಪ್ರಥಮ ಸ್ಥಾನ), ಸಿ.ಬಸವರಾಜ (ದ್ವಿತೀಯ ಸ್ಥಾನ) ಮತ್ತುಕೆ. ಅರುಣಕುಮಾರ(ತೃತೀಯಸ್ಥಾನ)ವಿದ್ಯಾರ್ಥಿಗಳಿಗೆ ಜಿಲ್ಲಾ ಚುನಾವಣಾ ಧಿಕಾರಿಗಳ ಕಾರ್ಯಾಲಯ ಹಾಗೂಜಿಲ್ಲಾ ಸ್ವೀಪ್ ಸಮಿತಿ , ಬಳ್ಳಾರಿ ಇವರ·ವತಿಯಿಂದ ಕಂಪ್ಲಿ ತಾಪಂ ಇಒ ಬಿ.ಬಾಲಕೃಷ್ಣ ಅವರು ಪ್ರಮಾಣಪತ್ರ ಮತ್ತುಬಹುಮಾನಗಳನ್ನು ವಿತರಿಸಿದರು.
ಓದಿ : ಕಲಬುರಗಿ: 2 ಕೋಟಿ ರೂ. ಲಾಭದಲ್ಲಿ ಕೆಎಂಎಫ್