Advertisement

ದೂರದ ಊರುಗಳಿಗಿಲ್ಲ ಬಸ್‌ ಭಾಗ್ಯ

06:43 PM Apr 09, 2021 | Team Udayavani |

ಹೊಸಪೇಟೆ: ಸಾರಿಗೆ ನೌಕರರ ಮುಷ್ಕರ ಗುರುವಾರ ಕೂಡ ನಡೆದಿದ್ದು, ಬಸ್‌ ನಿಲ್ದಾಣದಿಂದಲೇ ಖಾಸಗಿ ಬಸ್‌ಗಳು ಕೂಡ ಈ ದಿನವೂ ಕಾರ್ಯಾಚರಿಸಿದವು. ನೌಕರರ ಮುಷ್ಕರದಿಂದ ದೂರದ ಊರುಗಳಿಗೆ ಬಸ್‌ಗಳನ್ನು ಓಡಿಸಲು ಆಗದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.

Advertisement

ನಗರದಲ್ಲಿ ಬಸ್‌ ಮುಷ್ಕರದ ಹಿನ್ನೆಲೆಯಲ್ಲಿ ದಾವಣಗೆರೆ, ಹುಬ್ಬಳ್ಳಿ ಕಡೆಗೆ ತೆರಳುವವರು ರೈಲು ಬಳಸಿ ಪ್ರಯಾಣಿಸುವ ತೆರಳುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬಹುತೇಕ ಪ್ರಯಾಣಿಕರು ರೈಲ್ವೆ ನಿಲ್ದಾಣದತ್ತ ದೌಡಾಯಿಸುತ್ತಿರುವುದು ಕಂಡು ಬಂದಿತು. 42 ಬಸ್‌ ಕಾರ್ಯಾಚರಣೆ: ಇಲ್ಲಿನ ಸಾರಿಗೆ ವಿಭಾಗದಿಂದ 42 ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಿದ್ದು, ತಲಾ ಒಂದು ಬಸ್‌ 4 ಟ್ರಿಪ್‌ಗ್ಳನ್ನು ಮಾಡಿದ್ದು, ಬಳ್ಳಾರಿ, ಕೊಪ್ಪಳ, ಗಂಗಾವತಿ, ಹುಲಿಗಿ, ಸಂಡೂರು, ಹರಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಭಾಗಗಳಿಗೆ ಬಸ್‌ಗಳು ಸಂಚರಿಸಿವೆ.

ನಗರದ ಬಸ್‌ ನಿಲ್ದಾಣದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು. ಏತನ್ಮಧ್ಯೆ, ಖಾಸಗಿ ಬಸ್‌ಗಳು ಕೂಡ 73 ಟ್ರಿಪ್‌ ಮಾಡಿವೆ. ಜತೆಗೆ ಟ್ರಾಕ್ಸ್‌, ಟಂಟಂಗಳು 328 ಟ್ರಿಪ್ಸ್‌ ಓಡಿವೆ. ಪ್ರಯಾಣಿಕರ ಹಿತಕ್ಕಾಗಿ ಖಾಸಗಿ ಬಸ್‌ಗಳನ್ನು ಬಸ್‌ ನಿಲ್ದಾಣದಿಂದಲೇ ಓಡಿಸಲಾಗುತ್ತಿದೆ.

ನಿವೃತ್ತ ನೌಕರರ ನಿಯೋಜನೆ: ಸಾರಿಗೆ ನೌಕರರು ಆರನೇ ವೇತನ ಆಯೋಗದ ಬೇಡಿಕೆ ಈಡೇರಿಕೆಗೆ ಮುಷ್ಕರನಿರತರಾಗಿರುವ ಹಿನ್ನೆಲೆಯಲ್ಲಿ ನಿವೃತ್ತ ನೌಕರರನ್ನು ನಿಯೋಜಿಸಿಕೊಳ್ಳಲು ಸಾರಿಗೆ ಇಲಾಖೆ ಮುಂದಾಗಿದೆ. ಹೀಗಾಗಿ ಮುಷ್ಕರ ಇನ್ನಷ್ಟು ದಿನ ನಡೆಯುವ ಮುನ್ಸೂಚನೆ ದೊರೆತಂತಾಗಿದೆ. ಸಾರಿಗೆ ಇಲಾಖೆ ಮುಷ್ಕರದ ಹಿನ್ನೆಲೆಯಲ್ಲಿ ಕಚೇರಿ ಸಿಬ್ಬಂದಿಯನ್ನು ಕೂಡ ಡ್ರೆçವರ್‌, ಕಂಡಕ್ಟರ್‌ಗಳನ್ನಾಗಿ ನಿಯೋಜಿಸಿ ಕೆಲಸ ಮಾಡಲಾಗುತ್ತಿದೆ. ವಿಭಾಗದಲ್ಲಿ ಈ ದಿನ 42 ಬಸ್‌ಗಳು ಸಂಚರಿಸಿದ್ದು, ಏ.9ರಂದು ಇನ್ನಷ್ಟು ಬಸ್‌ಗಳು ಸಂಚರಿಸಲು ಯೋಜನೆ ರೂಪಿಸಲಾಗಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ದೂರದ ಊರುಗಳಿಗೂ ಬಸ್‌ ಓಡಿಸಲು ಕ್ರಮವಹಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾ ಧಿಕಾರಿ ಜಿ. ಶೀನಯ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next