Advertisement

ಇಂದು ಪಾಲಿಕೆ ಚುನಾವಣೆ ಅಧಿಸೂಚನೆ ಪ್ರಕಟ

06:08 PM Apr 08, 2021 | Team Udayavani |

ಬಳ್ಳಾರಿ: ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಏ. 8ರಂದು ಜಿಲ್ಲಾಡಳಿತದಿಂದ ಅ ಧಿಸೂಚನೆ ಪ್ರಕಟವಾಗಲಿದ್ದು, ನೀತಿ ಸಂಹಿತೆ ಜಾರಿಯಾಗುವುದರ ಜತೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೂ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಚುನಾವಣಾ ಆಯೋಗ ಘೋಷಿಸಿದಂತೆ ಏ. 8ರಿಂದ 15ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಏ. 16ರಂದು ನಾಮಪತ್ರಗಳ ಪರಿಶೀಲನೆ, ಏ.19 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಏ.27ರಂದು ಚುನಾವಣೆ ನಡೆಯಲಿದೆ. ಅವಶ್ಯವಿದ್ದಲ್ಲಿ ಏ.29 ರಂದು ಮರು ಮತದಾನಕ್ಕೆ ಅವಕಾಶವಿದ್ದು, ಏ.30 ರಂದು ಮತ ಎಣಿಕೆ ನಡೆಯಲಿದೆ ಎಂದು ವಿವರಿಸಿದರು.

ಬಳ್ಳಾರಿ ಪಾಲಿಕೆ ವ್ಯಾಪ್ತಿಯ 39 ವಾರ್ಡ್‌ಗಳಲ್ಲಿ 333 ಮೂಲ ಮತಗಟ್ಟೆಗಳು ಹಾಗೂ 11 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 344 ಮತಗಟ್ಟೆ ಕೇಂದ್ರಗಳಲ್ಲಿ ಏ. 27ರಂದು ಮತದಾನ ನಡೆಯಲಿದೆ. ಇದಕ್ಕೆ ಪಿಆರ್‌ಒ, ಎಪಿಆರ್‌ಒ, ಪಿಓ ಸೇರಿದಂತೆ ಒಟ್ಟು 1376 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಏ. 30ರ ಮತ ಎಣಿಕೆ ಕಾರ್ಯ ನಗರದ ಸರ್ಕಾರಿ ಡಿಪ್ಲೊಮಾ ಕಾಲೇಜು ಮತ್ತು ಅಥವಾ ಸಂತ್‌ ಜಾನ್‌ ಪ್ರೌಢಶಾಲೆಯನ್ನು ಗುರುತಿಸಲಾಗಿದ್ದು, ಯಾವುದಾದರೂ ಒಂದು ಸ್ಥಳದಲ್ಲಿ ನಡೆಯಲಿದೆ ಎಂದರು.

ಚುನಾವಣಾಧಿ ಕಾರಿಗಳ ನೇಮಕ: ಪಾಲಿಕೆಯ 39 ವಾರ್ಡ್‌ಗಳ ಚುನಾವಣಾ ಪ್ರಕ್ರಿಯೆಗಾಗಿ 8 ಜನ ಚುನಾವಣಾಧಿ ಕಾರಿಗಳು ಮತ್ತು 8 ಜನರ ಸಹಾಯಕ ಚುನಾವಣಾ ಧಿಕಾರಿಗಳನ್ನು ನೇಮಿಸಲಾಗಿದೆ ಎಂದು ವಿವರಿಸಿದ ಡಿಸಿ ಮಾಲಪಾಟಿ, ತಲಾ 5 ವಾರ್ಡ್‌ಗಳಿಗೆ ಓರ್ವ ಚುನಾವಣಾಧಿಕಾರಿ, ಸಹಾಯಕ ಚುನಾವಣಾ  ಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಆಯಾ ವಾರ್ಡ್‌ಗಳಿಗೆ ಉಮೇದುವಾರಿಕೆ ಬಯಸುವ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಗೆ ಬರುವ ಚುನಾವಣಾ ಅ ಧಿಕಾರಿಗಳಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಪರಿಶಿಷ್ಟ ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳು 2500 ಹಾಗೂ ಇತರೆ ಅಭ್ಯರ್ಥಿಗಳು 5000 ಠೇವಣಿ ಸಲ್ಲಿಸಬೇಕು ಎಂದು ತಿಳಿಸಿದರು.

ವಾರ್ಡ್‌ಗೊಂದು ಎಂಸಿಸಿ ತಂಡ: ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ಜರುಗುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡುವ ನಿಟ್ಟಿನಲ್ಲಿ ಪ್ರತಿ ವಾರ್ಡ್‌ಗಳಿಗೆ ಒಂದೊಂದು ಎಂಸಿಸಿ ತಂಡಗಳನ್ನು ರಚಿಸಲಾಗಿದೆ. ಪ್ರತಿ ಎಂಸಿಸಿ ತಂಡದಲ್ಲಿ ಚುನಾವಣಾಧಿಕಾರಿ, ಸೆಕ್ಟರೋಲ್‌ ಅ ಧಿಕಾರಿಗಳು, ಕಂದಾಯ ನಿರೀಕ್ಷಕರು ಮತ್ತು ಬಿಲ್‌ ಕಲೆಕ್ಟರ್‌ ಇರಲಿದ್ದಾರೆ.

Advertisement

ಇವರ ಜೊತೆಗೆ ಪೊಲೀಸ್‌ ಸಿಬ್ಬಂದಿಯೂ ಇರಲಿದ್ದಾರೆ. 26 ಸೆಕ್ಟರೋಲ್‌ ಅ ಧಿಕಾರಿಗಳನ್ನು ಹಾಗೂ 5 ಜನ ಮಾಸ್ಟರ್‌ ಟ್ರೈನರ್‌ ಗಳನ್ನು ನೇಮಕ ಮಾಡಲಾಗಿದೆ. ಮತದಾನ ಪ್ರಕ್ರಿಯೆಗೆ 400 ಬ್ಯಾಲೆಟ್‌ ಯೂನಿಟ್‌ ಮತ್ತು 400 ಕಂಟ್ರೋಲ್‌ ಯೂನಿಟ್‌ ಸೇರಿದಂತೆ ಒಟ್ಟು 800 ಮತಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು. ವೆಚ್ಚ 3 ಲಕ್ಷ ರೂ. ಮೀರುವಂತಿಲ್ಲ: ಚುನಾವಣೆಯಲ್ಲಿ ಸ್ಪಧಿ ìಸುವ ಅಭ್ಯರ್ಥಿಗಳು ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿದಂತೆ ಚುನಾವಣಾ ವೆಚ್ಚ 3 ಲಕ್ಷ ರೂ. ಮೀರುವಂತಿಲ್ಲ. ಪ್ರಚಾರದ ನಿಮಿತ್ತ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪೇಯ್ಡ ನ್ಯೂಸ್‌ ರೂಪದ ಸುದ್ದಿಗಳು ಪ್ರಕಟವಾದಲ್ಲಿ ಸಂಬಂ ಧಿಸಿದ ಅಭ್ಯರ್ಥಿಗಳ ವೆಚ್ಚಕ್ಕೆ ನಿಯಮಾನುಸಾರ ಜಮಾಗೊಳಿಸಲಾಗುವುದು ಎಂದರು.

ಒಟ್ಟು ಮತದಾರರು: ಚುನಾವಣಾ ಆಯೋಗವು ನಗರದ 39 ವಾರ್ಡ್‌ಗಳಲ್ಲಿ ಏ. 5ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯಂತೆ 1,66,298 ಪುರುಷ ಮತದಾರರು ಹಾಗೂ 1,74,538 ಮಹಿಳಾ ಮತದಾರರು ಮತ್ತು 36 ಜನ ಇತರೆ ಸೇರಿ ಒಟ್ಟು 3,40,882 ಜನ ಮತದಾರರಿದ್ದಾರೆ ಎಂದು ಜಿಲ್ಲಾ  ಧಿಕಾರಿ ಮಾಲಪಾಟಿ ಅವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next