Advertisement

ಕೊರೊನಾ ಹತೋಟಿಗೆ ಮುನ್ನೆಚ್ಚರಿಕೆ ಕ್ರಮ

05:58 PM Apr 08, 2021 | Team Udayavani |

ಹೂವಿನಹಡಗಲಿ:ಕೊರೋನಾ ಮಹಾಮಾರಿ 2ನೇ ಅಲೆ ಪ್ರಾರಂಭವಾಗುತ್ತಿದ್ದಂತೆ ತಾಲೂಕಿನಾದ್ಯಂತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು ಅದಕ್ಕಾಗಿ ತಾಲೂಕು ಆರೋಗ್ಯ ಇಲಾಖೆ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ. ತಾಲೂಕಿನಲ್ಲಿ ಕೊರೊನಾ ಹತೋಟಿಗೆ ತರಲು ಆರೋಗ್ಯ ಇಲಾಖೆ ತಾಲೂಕಿನ ಸುಮಾರು 14 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ವ್ಯಾಕ್ಸಿನೇಷನ್‌ ಪ್ರಾರಂಭ ಮಾಡಲಾಗಿದ್ದು 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಈ ಕೊರೊನಾ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಅರ್ಹರಾಗಿದ್ದಾರೆ.

Advertisement

ಪ್ರತಿದಿನ ತಾಲೂಕಿನಲ್ಲಿ ಸುಮಾರು 1500ರಷ್ಟು ಜನರಿಗೆ ವ್ಯಾಕ್ಸಿನ್‌ ಹಾಕಲಾಗುತ್ತಿದ್ದು ಜನರಲ್ಲಿಯೂ ಸಹ ಅಗತ್ಯ ಜಾಗೃತಿ ಕಂಡು ಬರುತ್ತಿದೆ. ತಾಲೂಕು ಆರೋಗ್ಯ ಕೇಂದ್ರದಿಂದ ಗ್ರಾಮೀಣ ಪ್ರದೇಶದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿ ದಿನ ವ್ಯಾಕ್ಸಿನೇಸನ್‌ ತೆಗದುಕೊಂಡು ಹೋಗುತ್ತಿದ್ದು ತಾಲೂಕಿನಲ್ಲಿನ 14 ಪ್ರಾಥಮಿಕ ಕೇಂದ್ರದಲ್ಲಿಯೂ ಸಹ ವ್ಯಾಕ್ಸಿನ್‌ ಸೌಲಭ್ಯ ಕಲ್ಪಿಸಲಾಗಿದೆ. ತಾಲೂಕಿನ ಮೈಲಾರ, ಹೊಳಲು, ಕತ್ತೆಬೆನ್ನೂರು, ಹಿರೆಹಡಗಲಿ, ಮಾಗಳ, ಉತ್ತಂಗಿ, ನಾಗ್ತಿಬಸಾಪುರು, (ಗ್ರಾಮೀಣ) ಹಾಗೂ (ಅರ್ಬನ್‌ ) ಕೆ. ಆಯ್ಯನಹಳ್ಳಿ, ಎಂ.ಎಂ ವಾಡ, ಸೋಗಿ, ಹೊಳಗುಂದಿ, ಹಕ್ಕಂಡಿ ಹಾಗೂ ಹಡಗಲಿ ಪ್ರಾಥಮಿಕ ಕೇಂದ್ರದಲ್ಲಿಯೂ ಸಹ ವ್ಯಾಕ್ಸಿನೇಶನ್‌ ಹಾಕಲಾಗುತ್ತಿದ್ದು ವಾಕ್ಸಿನೇಶನ್‌ಗಾಗಿ ತಾಲೂಕು ಆರೋಗ್ಯ ಇಲಾಖೆ ಅಗತ್ಯ ಸಿಬ್ಬಂದಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮೈಲಾರ ಪ್ರಾಥಮಿಕ ಕೇಂದ್ರದಲ್ಲಿ 3198 ಗುರಿ ಹಾಕಿಕೊಳ್ಳಲಾಗಿದ್ದು ಅದರಲ್ಲಿ 2313 ಗುರಿ ತಲುಪಲಾಗಿದೆ.

ಸುಮಾರು 72.3ರಷ್ಟು ಹಾಗೂ ಹೊಳಲು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿನ 3304 ಜನರಿಗೆ ವ್ಯಾಕ್ಸಿನೇಶನ್‌ ಹಾಕುವ ಗುರಿ ಹೊಂದಲಾಗಿದ್ದು ಆದರಲ್ಲಿ 910 ಗುರಿ ಸಾಧನೆ ಮಾಡಿದೆ. ಕತ್ತೆಬೆನ್ನೂರು, 3726 ರಲ್ಲಿ 817 ಜನರಿಗೆ ಅಂದರೆ ಶೇ. 21.09ರಷ್ಟು ಗುರಿ ಹೊಂದಲಾಗಿದ್ದು ಈ ಕೇಂದ್ರದಲ್ಲಿ ಇನ್ನೂ ಪ್ರಗತಿ ಸಾಧಿಸಬೇಕಾಗಿದೆ. ಇದಕ್ಕಾಗಿ ಜನರ ಸಹಕಾರ ಸಹ ಮುಖ್ಯವಾಗಿದೆ. ನಾಗ್ತಿ ಬಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ಸುಮಾರು 2670 ಜನರಲ್ಲಿ 534 ಗುರಿ ಹಾಕಿಕೊಳ್ಳಲಾಗಿದ್ದು ಆದರಲ್ಲಿ 415 ಜನರಿಗೆ ವ್ಯಾಕ್ಸಿನೇಶನ್‌ ಹಾಕಲಾಗಿದೆ. ಅಂದರೆ ಶೇ. 77.7ರಷ್ಟು ಜನತೆಗೆ ವ್ಯಾಕ್ಸಿನೇಸನ್‌ ಹಾಕಿ ಹೆಚ್ಚು ಪ್ರಗತಿ ಸಾಧಿಸಿದ ಕೇಂದ್ರವಾಗಿದೆ. ಕೆ. ಅಯ್ಯನಹಳ್ಳಿ ಪ್ರಾಥಮಿಕ ಕೇಂದ್ರದಲ್ಲಿ ಹೆಚ್ಚಿನ ಪ್ರಗತಿ ಕಾಣಬೇಕಾಗಿದ್ದು ಅದರಲ್ಲಿ 14538 ಜನರಲ್ಲಿ 2908 ಜನರಿಗೆ ಲಸಿಕೆ ಗುರಿ ಹಾಕಿಕೊಳ್ಳಲಾಗಿದ್ದು ಕೇವಲ 328 ಜನರಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಹೆಚ್ಚಿನ ಪ್ರಗತಿ ಕಂಡುಕೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next