Advertisement

ಕ್ಷಯ ರೋಗ ಮುಕ್ತ ಬಳ್ಳಾ ರಿಗೆ ಸಹಕರಿಸಿ

06:37 PM Mar 25, 2021 | Team Udayavani |

 ಬಳ್ಳಾರಿ: ವಿಶ್ವ ಕ್ಷಯರೋಗ ದಿನಾಚರಣೆ ನಿಮಿತ್ತ ಕ್ಷಯರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ ಅವರು ಜಿಲ್ಲಾಸ್ಪತ್ರೆ ಆವರಣದಲ್ಲಿ ಬುಧವಾರ ಚಾಲನೆ ನೀಡಿದರು. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ಸಹಯೋಗದಲ್ಲಿ ಜಾಥಾಗೆ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕ್ಷಯರೋಗ ಹೆಚ್ಚಿನ ಪ್ರಮಾಣದಲ್ಲಿದೆ. ರಾಜ್ಯದಲ್ಲಿ ನಮ್ಮ ಜಿಲ್ಲೆ ಕ್ಷಯರೋಗ ಪ್ರಕರಣಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ವೈದ್ಯರು ಕಠಿಣ ಕ್ರಮವಹಿಸದರೆ ನಮ್ಮ ಜಿಲ್ಲೆಯನ್ನು ಮೂರ್ನಾಲ್ಕು ವರ್ಷಗಳಲ್ಲಿ ಸಂಪೂರ್ಣವಾಗಿ ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿ ರೂಪಿಸಬಹುದು. ಕೊರೊನಾ ಕಾರಣದಿಂದಾಗಿ ಕಳೆದ ವರ್ಷ ಕ್ಷಯರೋಗವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈಗಾಗಲೇ ಎರಡನೇ ಅಲೆ ನಮ್ಮನ್ನು ಕಾಡುತ್ತಿದ್ದರೂ ಕ್ಷಯರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅತ್ಯವಶ್ಯಕವಾದ ಕೆಲಸ ಆಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.

ಕ್ಷಯರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮದಲ್ಲಿ ನೂರರಷ್ಟು ಕ್ಷಯರೋಗದ ಸ್ಕ್ರೀನಿಂಗ್‌ ಮಾಡಿ, ಸಾರ್ವಜನಿಕರಲ್ಲಿ ಈ ರೋಗದ ಕುರಿತು ಅರಿವು ಮೂಡಿಸುವ ಕಾರ್ಯ ಆಗಲಿ ಎಂದರು.

ಕ್ಷಯರೋಗ ಮುಕ್ತ ಜಿಲ್ಲೆಯನ್ನು ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕು. ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಕ್ಷಯರೋಗವನ್ನು ಮುಕ್ತವಾಗಿಸೋಣ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವಿಮ್ಸ್‌ ನಿರ್ದೇಶಕ ಡಾ| ಗಂಗಾಧರಗೌಡ, ಡಿಎಚ್‌ಒ ಡಾ| ಎಚ್‌.ಎಲ್‌.ಜನಾರ್ಧನ್‌, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಧಿಕಾರಿ ಡಾ| ಇಂದ್ರಾಣಿ, ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ| ಬಸರೆಡ್ಡಿ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಗುರುನಾಥ್‌ ಚೌಹಾಣ್‌, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಎಸ್‌.ಅನಿಲ್‌ ಕುಮಾರ್‌, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿ ಕಾರಿ ಡಾ| ರಾಜಶೇಖರ್‌ ರೆಡ್ಡಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ| ಅಬ್ದುಲ್ಲಾ ಆರ್‌., ಜಿಲ್ಲಾ ಸರ್ವೇಕ್ಷಣಾ ಅಧಿ ಕಾರಿ ಡಾ| ಮರಿಯಂ ಬೀ, ತಾಲೂಕು ಆರೋಗ್ಯ ಅಧಿಕಾರಿ ಡಾ| ಮೋಹನ್‌ ಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿ ಈಶ್ವರ್‌ ದಾಸಪ್ಪನವರ್‌ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಮತ್ತು ಇತರರು ಇದ್ದರು.

ಜಾಥಾ ಜಿಲ್ಲಾಸ್ಪತ್ರೆಯಿಂದ ಆರಂಭವಾಗಿ ಇಂದಿರಾ ವೃತ್ತದ ಮುಖಾಂತರ ಮೀನಾಕ್ಷಿ ಸರ್ಕಲ್‌, ಗಡಗಿ ಚನ್ನಪ್ಪ ವೃತ್ತದ ಮಾರ್ಗವಾಗಿ ಬಿಡಿಎಎ ಫುಟ್ಬಾಲ್‌ ಸಭಾಂಗಣದವರೆಗೆ ನಡೆಯಿತು. ಕ್ಷಯರೋಗ ಜಾಗೃತಿ ಸಂದೇಶ ಸಾರುವ ಫಲಕಗಳು ಗಮನಸೆಳೆದವು.

Advertisement

ಓದಿ :  ಬೆಳಗಾವಿಗೆ ಸತೀಶ್‌ ಜಾರಕಿಹೊಳಿ ಕೈ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next