Advertisement

ಕೊಟ್ಟೂರು ರಥೋತ್ಸವ ಸ್ಥಳೀಯರಿಗಷ್ಟೇ ಮೀಸಲು

05:29 PM Feb 25, 2021 | Team Udayavani |

ಕೊಟ್ಟೂರು: ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಶ್ರೀ ಗುರುಕೊಟ್ಟೂರೇಶ್ವರ ರಥೋತ್ಸವ ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾ ಧಿಕಾರಿ ಮಂಜುನಾಥ ತಿಳಿಸಿದರು.

Advertisement

ಅವರು ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದನ್ವಯ ರಾಜ್ಯದಲ್ಲಿ ಕೋವಿಡ್‌ 2ನೇ ಅಲೆ ಹಿನ್ನೆಲೆಯಲ್ಲಿ ಪೂಜಾ ವಿಧಿವಿಧಾನ ಹೊರತುಪಡಿಸಿ ರಥೋತ್ಸವ ರದ್ದುಗೊಳಿಸಲಾಗಿದೆ ಎಂದರು.

ಶಾಸಕ ಎಸ್‌. ಭೀಮಾನಾಯ್ಕ ಮಾತನಾಡಿ, ರಥೋತ್ಸವದ ರದ್ದು ಆದೇಶ ಬೇಸರವನ್ನುಂಟು ಮಾಡಿದೆ. ಇದರಿಂದ ಭಕ್ತಾದಿಗಳಿಗೆ ನೋವಾಗಿದೆ. ಕಾನೂನು ಪ್ರಕಾರವಾಗಿ ಧಾರ್ಮಿಕ ಆಚರಣೆ ನಡೆಸಲು ಅನುಕೂಲ ಮಾಡಿಕೊಡಲಾಗಿದೆ ಎಂದರು.

ಈ ವರ್ಷ ಯಾವುದೇ ಜಾತ್ರೆಯಾಗಲಿ, ನಾಟಕಗಳಾಗಲಿ ಇರುವುದಿಲ್ಲ. ಸ್ಥಳೀಯ ಭಕ್ತಾದಿಗಳಿಗೆ ಮಾತ್ರ ಅವಕಾಶವಿದ್ದು, ಹೊರಗಿನ
ಭಕ್ತಾದಿಗಳಿಗೆ ಅವಕಾಶವಿರುವುದಿಲ್ಲ ಎಂದರು. ಜಿಪಂ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ ಮಾತನಾಡಿ, ರಥೋತ್ಸವ ರದ್ದಾಗಿರುವುದರಿಂದ ಪಾದಯಾತ್ರಿಗಳು ಬೇಸರಗೊಳ್ಳದೇ ದೇವರ ಧ್ಯಾನ, ಪ್ರಾರ್ಥನೆಯಲ್ಲಿ ಮಗ್ನರಾಗಬೇಕೆಂದರು. ಈ ಸಂದರ್ಭದಲ್ಲಿ ಕೊಟ್ಟೂರು ದೇವರು ಶಂಕರ ಸ್ವಾಮಿ, ತಹಶೀಲ್ದಾರ್‌ ಜಿ. ಅನಿಲ್‌ಕುಮಾರ, ಪಪಂ ಅಧ್ಯಕ್ಷೆ ಭಾರತಿ ಸುಧಾಕರ ಪಾಟೀಲ್‌, ತಾಪಂ ಅಧ್ಯಕ್ಷ ಗುರುಮೂರ್ತಿ, ಧರ್ಮಕರ್ತ ಸಿ.ಎಚ್‌.ಎಂ. ಗಂಗಾಧರ, ಮುಜಾರಾಯಿ ಇಲಾಖೆ ಪ್ರಕಾಶರಾವ್‌ ಗಂಗಾಧರ, ಪಿಎಚ್‌. ದೊಡ್ಡರಾಮಣ್ಣ, ಸಿಪಿಐ ದೊಡ್ಡಣ್ಣ, ಪಿಎಸ್‌ಐ ನಾಗಪ್ಪ, ರವೀಂದ್ರ, ಮರಬದ ನಾಗರಾಜ, ನೂತನ ಪಪಂ ಸದಸ್ಯರು, ಕಟ್ಟೆಮನಿ ದೈವಸ್ಥರು ಉಪಸ್ಥಿತರಿದ್ದರು.

ಓದಿ : ಜಲವಿವಾದಗಳ ಇತ್ಯರ್ಥಕ್ಕೆ ಉನ್ನತ ಮಟ್ಟದ ಸಭೆ ಕರೆದ ಸಚಿವ ರಮೇಶ್ ಜಾರಕಿಹೊಳಿ  

Advertisement
Advertisement

Udayavani is now on Telegram. Click here to join our channel and stay updated with the latest news.

Next