Advertisement

ಜಿಲ್ಲಾಡಳಿತ ಭವನ ನಿರ್ಮಾಣ ಪ್ರಕ್ರಿಯೆ ಚುರುಕು

05:25 PM Feb 25, 2021 | Team Udayavani |

ಹೊಸಪೇಟೆ: ಜಿಲ್ಲಾಡಳಿತ ಭವನ ನಿರ್ಮಾಣಕ್ಕಾಗಿ·ಪ್ರಕ್ರಿಯೆ ಚುರುಕುಗೊಂಡಿದ್ದು ತುಂಗಭದ್ರಾಸ್ಟೀಲ್‌ ಪ್ರಾಡಕ್ಟ್ (ಟಿಎಸ್‌ಪಿ) ಪ್ರದೇಶದ 40
ಎಕರೆ ಜಾಗಕ್ಕೆ ರಾಜ್ಯ ಸರಕಾರದ ಆರ್ಥಿಕ ಇಲಾಖೆಅನುಮೋದನೆ ನೀಡಿದೆ.

Advertisement

ಕರ್ನಾಟಕ ಗೃಹ ನಿರ್ಮಾಣ ಮಂಡಳಿಅ ಧೀನದಲ್ಲಿರುವ 83 ಎಕರೆ ಜಾಗವನ್ನುಕಂದಾಯ ಇಲಾಖೆಗೆ ಹಸ್ತಾಂತರ ಮಾಡಲು 60ಕೋಟಿಗೂ ಅ ಧಿಕ ಹಣ ಕಂದಾಯ ಇಲಾಖೆ ಗೃಹನಿರ್ಮಾಣ ಇಲಾಖೆಗೆ ನೀಡಲು ಮುಂದಾಗಿದೆ.ಈ ಭಾಗವಾಗಿ ಆರ್ಥಿಕ ಇಲಾಖೆ 40 ಎಕರೆ
ಜಾಗ ಹಸ್ತಾಂತರಕ್ಕೆ ಅನುಮೋದನೆ ನೀಡಿದೆ.ಹೀಗಾಗಿ ಉಳಿದ 43 ಎಕರೆ ಪ್ರದೇಶವನ್ನುಪಡೆಯುವ ಪ್ರಕ್ರಿಯೆ ಕೂಡ ನಡೆದಿದೆ ಎಂದುಉನ್ನತ ಮೂಲಗಳು ತಿಳಿಸಿವೆ.

ಈಗಾಗಲೇ ಜಾಗ ಪಡೆಯುವ ಬಗ್ಗೆ ಕಂದಾಯಇಲಾಖೆ ಹಾಗೂ ಗೃಹ ನಿರ್ಮಾಣ ಮಂಡಳಿಮತ್ತು ಆರ್ಥಿಕ ಇಲಾಖೆ ನಡುವೆ ಪತ್ರ ವ್ಯವಹಾರ
ನಡೆದಿದ್ದು ಆರ್ಥಿಕ ಇಲಾಖೆ 40 ಎಕರೆ ನೀಡಲುಮೊದಲ ಹಂತದಲ್ಲಿ ಅನುಮೋದನೆ ನೀಡಿದೆ.ಉಳಿದ ಜಾಗ ಹಸ್ತಾಂತರ ಆಗುವ ಸಾಧ್ಯತೆ ಇದೆಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.ಜಿಲ್ಲಾಧಿ ಕಾರಿ ಕಚೇರಿ: ಗೃಹ ನಿರ್ಮಾಣಮಂಡಳಿಯಿಂದ ಕಂದಾಯ ಇಲಾಖೆಗೆ 40
ಎಕರೆ ಜಾಗ ಹಸ್ತಾಂತರಕ್ಕೆ ಆರ್ಥಿಕ ಇಲಾಖೆಅಸ್ತು ಎಂದಿರುವ ಹಿನ್ನೆಲೆಯಲ್ಲಿ ಟಿಎಸ್‌ಪಿ ಹಳೇಕಚೇರಿಯಲ್ಲಿ ತಾತ್ಕಾಲಿಕವಾಗಿ ಜಿಲ್ಲಾ ಧಿಕಾರಿ
ಕಚೇರಿ ತೆರೆಯಲು ಎಲ್ಲ ಸಿದ್ಧತೆ ನಡೆದಿದೆ.ಈಗಾಗಲೇ ಮೂಲಭೂತ ಸೌಕರ್ಯ ಅಭಿವೃದ್ಧಿ,ಹಜ್‌ ಮತ್ತು ವಕ್ಫ್ ಸಚಿವ ಆನಂದ್‌ ಸಿಂಗ್‌
ಅವರು ಈ ಜಾಗ ಪರಿಶೀಲಿಸಿದ್ದು ಜಿಲ್ಲಾಧಿಕಾರಿ ಕಚೇರಿಗಾಗಿ ಭರದಿಂದ ಕಾಮಗಾರಿಯೂಸಾಗಿದೆ.

ಹಣ ವಾಪಸಾತಿ: ಕೇಂದ್ರ ಸರಕಾರದ ಅಧಿನದಲ್ಲಿದ್ದ ಜಾಗವನ್ನು ಗೃಹ ನಿರ್ಮಾಣಮಂಡಳಿ ನಿವೇಶನ ಮಾಡಲು ಟಿಎಸ್‌ಪಿ ಜಾಗ
ಖರೀದಿಸಿತ್ತು. ಆಗ ನಿವೇಶನಕ್ಕಾಗಿ ಅರ್ಜಿ ಕೂಡಆಹ್ವಾನಿಸಿತ್ತು. ಈ ವೇಳೆ ಹಣ ಪಾವತಿಸಿದ್ದಬಹುತೇಕರಿಗೆ ಈಗ ಹಣ ಕೂಡ ವಾಪಾಸ್‌
ನೀಡಲಾಗುತ್ತಿದೆ.

ಓದಿ :·ಜಲವಿವಾದಗಳ ಇತ್ಯರ್ಥಕ್ಕೆ ಉನ್ನತ ಮಟ್ಟದ ಸಭೆ ಕರೆದ ಸಚಿವ ರಮೇಶ್ ಜಾರಕಿಹೊಳಿ  

Advertisement
Advertisement

Udayavani is now on Telegram. Click here to join our channel and stay updated with the latest news.

Next