ಸಿರುಗುಪ್ಪ: ತಾಲೂಕಿನ ಕರೂರು ಗ್ರಾಮದಲ್ಲಿರುವ ನಾಡಕಚೇರಿ ಕಟ್ಟಡದ ಮೇಲ್ಛಾವಣಿ ಸಿಮೆಂಟ್ ಉದುರಿ ಬೀಳುತ್ತಿದ್ದು, ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಭಯದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ನಾಡಕಚೇರಿ ಕಟ್ಟಡವು ನೀರಾವರಿ ಇಲಾಖೆಗೆ ಸೇರಿದ್ದು, ಸುಮಾರು 40 ವರ್ಷಗಳ ಹಿಂದೆ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಕಟ್ಟಡದ ನಿರ್ವಹಣೆಯನ್ನು ನೀರಾವರಿ ಇಲಾಖೆಯು ನಿರ್ವಹಿಸದ ಕಾರಣ ನಾಡಕಚೇರಿ ಆರಂಭಕ್ಕೂ ಮುನ್ನವೇ ಮಳೆ ಬಂದರೆ ಕಚೇರಿ ಒಳಗೆ ನೀರು ತೊಟ್ಟಿಕ್ಕುತ್ತಿತ್ತು. ಇದನ್ನೇ ರಿಪೇರಿ ಮಾಡಿಸಿ ಕಂದಾಯ ಇಲಾಖೆಯು ಸುಮಾರು 10ವರ್ಷಗಳ ಹಿಂದೆ ನಾಡಕಚೇರಿಯನ್ನು ಆರಂಭಿಸಿದ್ದು, ಕಚೇರಿ ಆರಂಭವಾದಾಗಿನಿಂದಲೂ ಮಳೆ ಬಂದರೆ ಸಾಕು ಕಟ್ಟಡವು ಸೋರುತ್ತಿದೆ. ಆದರೂ ಇಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ತಾತ್ಕಾಲಿಕ ರಿಪೇರಿ ಮಾಡಿಸುತ್ತ ಬಂದಿದ್ದರೂ ಕಟ್ಟಡ ಮಾತ್ರ ಸುಸ್ಥಿತಿಯಲ್ಲಿ ಇಲ್ಲ.
32 ಗ್ರಾಮಗಳ ಸಾರ್ವಜನಿಕರು ನಿತ್ಯ ಅಧಿ ಕಾರಿಗಳೊಂದಿಗೆ, ಕಂಪ್ಯೂಟರ್ ಆಪರೇಟರ್‌ಗಳೊಂದಿಗೆ ಬಂದು ಚರ್ಚಿಸುವುದು ಸಾಮಾನ್ಯವಾಗಿದೆ. ಸಾರ್ವಜನಿಕರು ಕಚೇರಿಯಲ್ಲಿ ಇರುವಾಗ ಮೇಲ್ಛಾವಣಿ ಸಿಮೆಂಟ್ ಬಿದ್ದ ಘಟನೆಗಳು ಈಗಾಗಲೆ 2-3 ಬಾರಿ ನಡೆದಿವೆ. 2 ವರ್ಷದ ಹಿಂದೆ ಮೇಲ್ಛಾವಣಿ ಸಿಮೆಂಟ್ ಉದುರಿ ಬಿದ್ದು ಕಂಪ್ಯೂಟರ್ ಮತ್ತು ಪ್ರಿಂಟಿಂಗ್ ಮಷಿನ್ ಹಾಳಾಗಿದ್ದವು. ಆಗ ಮೇಲ್ಛಾವಣಿ ರಿಪೇರಿ ಮಾಡಿಸಲು ಕ್ರಮ ಕೈಗೊಳ್ಳಬೇಕೆಂದು ನಾಡಕಚೇರಿ ಅಧಿ ಕಾರಿಗಳು ತಹಶೀಲ್ದಾರ್ ಮೂಲಕ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ
ಇಲ್ಲಿವರೆಗೆ ಕಚೇರಿ ರಿಪೇರಿ ಕಾರ್ಯ ನಡೆದಿಲ್ಲ. ಇದರಿಂದಾಗಿ ಪ್ರತಿಬಾರಿ ಮಳೆಬಂದಾಗ ಕಟ್ಟಡದ ಮೇಲ್ಛಾವಣಿ ಸಿಮೆಂಟ್ ಉದುರಿ ಬೀಳುವುದು ಸಾಮಾನ್ಯವಾಗಿದೆ. ತಮ್ಮ ಮೇಲೆ ಮೇಲ್ಛಾವಣಿ ಸಿಮೆಂಟ್ ಯಾವಾಗ ಉದುರಿ ಬೀಳುತ್ತದೋ ಎನ್ನುವ ಭಯದಲ್ಲಿಯೇ ಇಲ್ಲಿನ ಸಿಬ್ಬಂದಿ ಕಾರ್ಯ
ನಿರ್ವಹಿಸುತ್ತಿದ್ದಾರೆ.
ಓದಿ :
ಡಿಜೆ ಹಳ್ಳಿ ಗಲಭೆಯ ಎನ್‌ಐಎ ವರದಿ ಆಧಾರದಡಿ ಜಮೀರ್ ಮೇಲೆ ಕೇಸ್ ಹಾಕಿ: ಅಶ್ವತ್ಥ್ ನಾರಾಯಣ