Advertisement

ಬಳ್ಳಾರಿ ಜಿಲ್ಲೆ ವಿಭಜಿಸಿದ ವ್ಯಕ್ತಿ ನಮಗೆ ಬೇಡ

05:05 PM Feb 25, 2021 | Team Udayavani |

ಬಳ್ಳಾರಿ: ಮಾಜಿ ಸಚಿವ ಜನಾರ್ದನರೆಡ್ಡಿ ಕಲಿಸಿದ್ದ ರಾಜಕೀಯ ಪಾಠವನ್ನು ಉಸ್ತುವಾರಿ ಸಚಿವ ಆನಂದ ಸಿಂಗ್‌ ಸಮರ್ಪಕವಾಗಿ ಸದ್ಬಳಕೆ
ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಸೋಮಶೇಖರ ರೆಡ್ಡಿ ಆರೋಪಿಸಿದ್ದಾರೆ.

Advertisement

ನಗರದ ತಾಳೂರು ರಸ್ತೆಯಲ್ಲಿ ಬುಧವಾರ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಅಲ್ಲೊಂದು ಇಲ್ಲೊಂದು ಮಾತುಗಳನ್ನು ಆಡುವ ಮೂಲಕ ಸದ್ಯ ರಾಜಕೀಯ ಆಟವನ್ನು ಚೆನ್ನಾಗಿ ಆಡುತ್ತಿದ್ದಾರೆ.

ಆನಂದ್‌ಸಿಂಗ್‌ ನಮಗೆ ಜಿಲ್ಲೆಯನ್ನು ಬಿಟ್ಟು ಕೊಡೋದಲ್ಲ, ನಾವೇ ಅವರನ್ನು ಬಳ್ಳಾರಿಯಿಂದ ಕಳುಹಿಸುತ್ತೇವೆ. ಜಿಲ್ಲೆ ವಿಭಜನೆ ಮಾಡಿದ್ದ ಅಪಕೀರ್ತಿ ಇರುವ ವ್ಯಕ್ತಿ ನಮಗೆ ಉಸ್ತುವಾರಿ ಸಚಿವರಾಗಿ ಇರುವುದು ಬೇಡ. ನಮ್ಮ ಜಿಲ್ಲೆಯಲ್ಲಿ ಅವರು ಇರೋದು ಬೇಕಾಗಿಲ್ಲ ಎಂದರು.

ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ ಸಮಯದಲ್ಲಿ ಆದ ರೀತಿಯಲ್ಲಿ ಬಳ್ಳಾರಿ ಅಭಿವೃದ್ಧಿ ಆಗಲಿದೆ. ಶ್ರೀರಾಮುಲು ನನ್ನ ತಮ್ಮ. ಅವರು ಬಳ್ಳಾರಿ ಉಸ್ತುವಾರಿ ಆಗುತ್ತಾರೆ ಎಂದರೆ ಬೇಡ ಅನ್ನಲ್ಲ. ಅಯೋಧ್ಯೆಯಲ್ಲಿ
ಶ್ರೀರಾಮ, ಬಳ್ಳಾರಿಯಲ್ಲಿ ರಾಮುಲು ಉಸ್ತುವಾರಿ ವಹಿಸಿಕೊಂಡಲ್ಲಿ ಚೆನ್ನಾಗಿರುತ್ತದೆ. ಬಳ್ಳಾರಿ ವಿಭಜನೆ ವಿರೋಧಿ ಸಿ ನ್ಯಾಯಾಲಯಕ್ಕೆ ಹೋಗುವವರಿಗೆ ನನ್ನ ಬೆಂಬಲವಿದೆ ಎಂದರು.

ಇದಕ್ಕೂ ಮುನ್ನ ಲೊಕೋಪಯೋಗಿ ಇಲಾಖೆ ವತಿಯಿಂದ ನಗರದ ತಾಳೂರು ರಸ್ತೆಯನ್ನು 128 ಅಡಿಗಳ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಸೋಮಶೇಖರರೆಡ್ಡಿಯವರು ಬುಧವಾರ ಭೂಮಿಪೂಜೆ ನೆರವೇರಿಸಿದರು.

Advertisement

ಈ ಸಂದರ್ಭದಲ್ಲಿ ಮೊತ್ಕರ್‌ ಶ್ರೀನಿವಾಸ್‌ ರೆಡ್ಡಿ, ಕೆಎಂಎಫ್‌ ನಿರ್ದೇಶಕ ವೀರಶೇಖರ ರೆಡ್ಡಿ, ಶಾಸಕರ ಪುತ್ರ ಜಿ.ಶ್ರವಣ್‌ ಕುಮಾರ್‌ ರೆಡ್ಡಿ, ಎಪಿಎಂಸಿ ಸದಸ್ಯ ಕೃಷ್ಣಾರೆಡ್ಡಿ, ಗುತ್ತಿಗೆದಾರ ಸಿದ್ದರಾಮನಗೌಡ, ಶ್ರೀನಿವಾಸಲು, ಉಮೇಶ್‌, ಗುಡಿಗಂಟೆ ಹನುಮಂತು, ಗುರುಮೂರ್ತಿ, ಪುರುಷೋತ್ತಮ ರೆಡ್ಡಿ ಇದ್ದರು.

ಓದಿ : ಕೋಟ್ಟಾ ಕಾಯ್ದೆಗೆ ಕಾರ್ಮಿಕ ವಿರೋಧಿ ತಿದ್ದುಪಡಿ ವಿರೋಧಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next