ಬಳ್ಳಾರಿ: ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ನಗರದ ವಿವಿಧ ಸಂಘ ಸಂಸ್ಥೆ ಸಹಯೋಗದಲ್ಲಿ ಸ್ವತ್ಛ ಭಾರತ ಅಭಿಯಾನ ನಿಮಿತ್ತ ಸ್ವತ್ಛತೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು “ಸೈಕಲ್ ಜಾಥಾ’ವನ್ನು ನಗರದಲ್ಲಿ ಶನಿವಾರ ಹಮ್ಮಿಕೊಳ್ಳಲಾಯಿತು. ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಗರವನ್ನು ಒಂದು ಸ್ವತ್ಛ ಮತ್ತು ಸುಂದರ ನಗರವನ್ನಾಗಿ ರೂಪುಗೊಳಿಸುವ ಉದ್ದೇಶದಿಂದ ಸಾರ್ವಜನಿಕರಲ್ಲಿ ಸ್ವತ್ಛತೆಯ ಕುರಿತು ಜಾಗೃತಿ ಮೂಡಿಸಲು ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಾಥಾದಲ್ಲಿ ವಿವಿಧ ಶಾಲೆಗಳಿಂದ ಸುಮಾರು 100 ಮಕ್ಕಳು, ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಅನೇಕ ಜನರು ಪಾಲ್ಗೊಂಡಿದ್ದರು. ಜಾಥಾವು ನಗರದ ದುರುಗಮ್ಮ ದೇವಸ್ಥಾನದಿಂದ ಪ್ರಾರಂಭವಾಗಿ ಎಸ್.ಪಿ.ವೃತ್ತ, ಅಗ್ನಿಶಾಮಕ ದಳ ವೃತ್ತ, ಇಂದಿರಾ ನಗರದಿಂದ ಒಪಿಡಿ ವೃತ್ತ ಮತ್ತು ಸುಧಾ ಕ್ರಾಸ್‌ನಲ್ಲಿ ಇರುವ ಮಹಾತ್ಮ ಗಾಂಧಿ ಸ್ಮಾರಕದವರೆಗೆ ಸಾಗಿತು. ಈ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯ ಅಧಿ ಕಾರಿ ಡಾ| ಹನುಮಂತಪ್ಪ, ಪರಿಸರ ಅಭಿಯಂತರ ಶ್ರೀನಿವಾಸ್ ಮತ್ತು ಅವಿನಾಷ್, ಶಾಲೆಯ ಮಕ್ಕಳು ಹಾಗೂ ಶಿಕ್ಷಕರು, ರೆಡ್ ಕ್ರಾಸ್ ಸದಸ್ಯರಾದ ಹರಿಶಂಕರ್ ಅಗರ್ವಾಲ್, ಎಂ.ಎ.ಷಕೀಬ್, ಮಹಾಂತೇಶ್, ದಿವಾಕರ್, ಮಹಬೂಬ್ ಬಾಷಾ,
ಎಂ.ವಲಿಬಾಷಾ ಮತ್ತು ಮತ್ತು ಮಂಜುನಾಥ್ ಇದ್ದರು.
ಓದಿ :
ಕಲ್ಯಾಣ ಕರ್ನಾಟಕಕ್ಕೆ ಏಮ್ಸ್ ಬಂದರೆ ಉತ್ತಮ: ಸಚಿವ ಸುಧಾಕರ್