ಕಂಪ್ಲಿ: ಪಟ್ಟಣದಲ್ಲಿ ಮಹಿಳೆಯ ಬರ್ಬರ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಂಪ್ಲಿಯ ಎಸ್. ಎನ್.ಪೇಟೆಯ ಮಲ್ಲಿಕಾರ್ಜುನ ದೇವಸ್ಥಾನ ಬಳಿಯಲ್ಲಿ ಫೆ.14ರಂದು ರಾತ್ರಿ ಸಮಯದಲ್ಲಿ ಅನೈತಿಕ ಸಂಬಂಧದ ಶಂಕೆಯಿಂದ ನಾಗಮ್ಮ ಎಂಬ ಮಹಿಳೆಯನ್ನು ಬರ್ಬರವಾಗಿ ಕೊಲೆಗೈದು ಆರೋಪಿ ಶೇಖರ ಕಣ್ಮರೆಯಾಗಿದ್ದನು. ಕೊಲೆ ಆರೋಪಿ ಸೆರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಹಂಪಿ ಉಪವಿಭಾಗದ ಡಿವೈಎಸ್‌ಪಿ ಎಸ್.ಎಸ್. ಕಾಶಿಗೌಡ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ್ ಎಚ್.ತಳವಾರ, ಪಿಎಸ್‌ಐ ವಿರೂಪಾಕ್ಷಪ್ಪ ನೇತೃತ್ವದಲ್ಲಿ ತಂಡ ಬಲೆ ಬೀಸಿತ್ತು. ಆಂಧ್ರಪ್ರದೇಶದ ಆಧೋನಿಯ ಕರಿಯಪ್ಪ ಹಾಸ್ಟೆಲ್ನಲ್ಲಿದ್ದ ಆರೋಪಿ ಶೇಖರನನ್ನು ಪೊಲೀಸರು ಬಂ ಧಿಸಿ, ಕಂಪ್ಲಿ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ನಂತರ
ನ್ಯಾಯಾಂಗ ಬಂಧನಕ್ಕೆ ಆರೋಪಿ ಒಪ್ಪಿಸಲಾಗಿದೆ. ಈ ಸಂದರ್ಭದಲ್ಲಿ ಎಎಸ್‌ಐಗಳಾದ ಹಗರಪ್ಪ, ತ್ಯಾಗರಾಜ್, ಮುಖ್ಯಪೇದೆಗಳಾದ ಗಫೂರ್
ಸಾಬ್, ರವಿವರ್ಮ, ಅನ್ವರ್ ಸಾಬ್, ಹನುಮನಗೌಡ, ಪೇದೆಗಳಾದ ಬಸವರಾಜ ಹಿರೇಮಠ, ಸುರೇಶ್ ಇದ್ದರು.
ಓದಿ :
ಬಿಳಿನೋಣ ರೋಗ ನಿಯಂತ್ರಣಕ್ಕೆ ಕ್ರಮ ವಹಿಸಿ