Advertisement
ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಗ್ರಾಮದಲ್ಲಿ ಬಿಡಾರ ಹೂಡಿದ್ದ ತಾಲೂಕು ಮಟ್ಟದ ಅ ಧಿಕಾರಿಗಳು, ಸಾರ್ವಜನಿಕರಿಂದ ಕೇಳಿಬರುವ ಸಮಸ್ಯೆಗಳ ಪಟ್ಟಿಯನ್ನು ಮಾಡಿಕೊಂಡಿದ್ದರು. ಜತೆಗೆ ಗ್ರಾಮವಾಸ್ತವ್ಯ ದಿನದಂದು ಆಗಮಿಸಿ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಸ್ಥಳೀಯ ಜನರಲ್ಲೂ ಜಾಗೃತಿ ಮೂಡಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮಸ್ಥರಿಂದ ನೂರಾರು ಅರ್ಜಿಗಳು ಸಲ್ಲಿಕೆಯಾದವು. ಸಂಜೆವರೆಗೆ ಸಲ್ಲಿಕೆಯಾದ ಅಹವಾಲುಗಳ ಪೈಕಿ ಕಂದಾಯ ಇಲಾಖೆಗೆ ಸೇರಿದ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಮಧ್ಯಾಹ್ನ 1 ಗಂಟೆ ವೇಳೆಗೆ ಪಹಣಿ ತಿದ್ದುಪಡಿಗೆ ಸಂಬಂಧಿಸಿದ 634 ಅರ್ಜಿಗಳು ಸಲ್ಲಿಕೆಯಾಗಿದ್ದವು. ಉಳಿದಂತೆ ಹಕ್ಕುಪತ್ರ ಬದಲಾವಣೆ, ಸ್ಮಶಾನಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಂಬಂಧಿಸಿದ ಅರ್ಜಿಗಳು ಸಲ್ಲಿಕೆಯಾಗಿರುವುದು ಗಮನಾರ್ಹ.
ತಹಶೀಲ್ದಾರ್ ಭರವಸೆ ನೀಡಿದರು. ಮೋಕಾ ಠಾಣೆ ಪಿಎಸ್‌ಐ ಎನ್.ರಘು, ಬಿಇಒ ಸಿದ್ಧಲಿಂಗಮೂರ್ತಿ, ಆಹಾರ ಪೂರೈಕೆ ಇಲಾಖೆಯ ಅ ಧಿಕಾರಿ
ಶರಣಯ್ಯಸ್ವಾಮಿ, ಕೃಷಿ ಇಲಾಖೆ ಅ ಧಿಕಾರಿ ಪಾಲಾಕ್ಷಗೌಡ ಸೇರಿದಂತೆ ಬಿಸಿಎಂ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
Related Articles
Advertisement