Advertisement

ವಿದ್ಯಾರ್ಥಿಗಳ ಜತೆ ಜಿಲ್ಲಾಧಿಕಾರಿ ಸಂವಾದ

04:38 PM Feb 21, 2021 | Team Udayavani |

ಹೊಸಪೇಟೆ: ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಗುರಿ ಸಾಧಿ ಸಬಹದು ಎಂದು ಬಳ್ಳಾರಿ ಜಿಲ್ಲಾ ಧಿಕಾರಿ ಪವನಕುಮಾರ್‌
ಮಾಲಪಾಟಿ ಹೇಳಿದರು.

Advertisement

ಜಿಲ್ಲಾ ಧಿಕಾರಿ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ನಿಮಿತ್ತ ತಿಮ್ಮಲಾಪುರದಲ್ಲಿ ಗ್ರಾಮವಾಸ್ತವ್ಯಕ್ಕಾಗಿ ಆಗನಿಸಿದ ಹಿನ್ನೆಲೆಯಲ್ಲಿ ತಿಮ್ಮಲಾಪುರದ ಮೊರಾರ್ಜಿ ದೇಸಾಯಿ ವಸತಿ ಪಿಯು ವಿಜ್ಞಾನ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪರಿಪೂರ್ಣ ಯೋಜನೆ, ಬದ್ಧತೆ, ಅವಿರಶತ ಶ್ರಮ, ಗುರಿ ಸಾಧಿ ಸುವ ಕನಸಿರಬೇಕು. ಅದನ್ನು ಸಾಧಿ ಸುವ ನಿರಂತರ ಶ್ರಮ ಇರಬೇಕು. ಅಂದಾಗ ಖಂಡಿತ ಗುರಿ ಮುಟ್ಟುತ್ತಿರಿ. ಇದಕ್ಕೆ ನಾನೇ ಉದಾಹರಣೆ. ಆರಂಭದಲ್ಲಿ ಒಳ್ಳೆಯ ಅಂಕಗಳು, ನಂತರ ಕಡಿಮೆ ಅಂಕಗಳು ಹಾಗೂ ವೈಫಲ್ಯ, ನಂತರ ಗುರಿಯಿಡೆಗೆ ಸಾಧಿ ಸಲು ನಡೆಸಿದ ಕಠಿಣ ಪರಿಶ್ರಮದಿಂದ ದೇಶದಲ್ಲಿ ಸಿವಿಲ್‌ ಸರ್ವಿಸ್‌ ಪರೀಕ್ಷೆಯಲ್ಲಿ 53ನೇ ರ್‍ಯಾಂಕ್‌ ಬರಲು ಸಾಧ್ಯವಾಯಿತು ಎಂದು ಅನುಭವ ಹಂಚಿಕೊಂಡರು.

ಅಪರ ಜಿಲ್ಲಾ ಧಿಕಾರಿ ಪಿ.ಎಸ್‌.ಮಂಜುನಾಥ, ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಮಾತನಾಡಿದರು. ಸಮಾಜಕಲ್ಯಾಣ ಇಲಾಖೆ
ಉಪನಿರ್ದೇಶಕ ರಾಜಪ್ಪ, ತಹಶೀಲ್ದಾರ್‌ ವಿಶ್ವನಾಥ, ಪರಿಶಿಷ್ಟ ವರ್ಗಗಳ ಕಲ್ಯಾಣಾ ಧಿಕಾರಿ ದಿವಾಕರ್‌ ಮತ್ತಿತರರು ಇದ್ದರು.

ಓದಿ : ರೀ ಸಾಹೇಬ್ರ ಕರೆಂಟ್‌ ಕೊಡ್ರಿ..ಕುಡ್ಯಾಕ ನೀರ ಕೊಡ್ರಿ

Advertisement

Udayavani is now on Telegram. Click here to join our channel and stay updated with the latest news.

Next