Advertisement

ಗ್ರಾಮಸ್ಥರ ಸಮಸ್ಯೆಗೆ ಡಿಸಿ ಸ್ಪಂದನೆ

04:33 PM Feb 21, 2021 | Team Udayavani |

ಹೊಸಪೇಟೆ: ಜಿಲ್ಲಾ ಧಿಕಾರಿ ನಡೆ ಹಳ್ಳಿಯ ಕಡೆಗೆ ನಿಮಿತ್ತ ಸಮೀಪದ ತಿಮ್ಮಲಾಪುರ ಗ್ರಾಮದಲ್ಲಿ ಶನಿವಾರ ಜಿಲ್ಲಾ ಧಿಕಾರಿ ಪವನಕುಮಾರ್‌ ಮಾಲಪಾಟಿ ಅವರು ಜನರ ಸಮಸ್ಯೆ ಆಲಿಸಿದರು.

Advertisement

ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದು, ಗ್ರಾಮದ ಅನೇಕ ಜಟಿಲ ಸಮಸ್ಯೆಗಳು ಸ್ಥಳದಲ್ಲಿ ಪರಿಹಾರ ಸೂಚಿಸಿದರು. ಕ್ಷಿಪ್ರಗತಿಯಲ್ಲಿ ಜನರಿಗೆ
ಸೇವೆ ಒದಗಿಸುವ ಹಾಗೂ ಸ್ಥಳದಲ್ಲಿಯೇ ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಸಾಮಾನ್ಯ ಜನರ ಸಮಸ್ಯೆಗಳಿಗೆ ಧ್ವನಿಯಾಯಿತು.

ಅನೇಕ ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ದಾಖಲೆಗಳು ಪಡೆಯಲು ಸರಕಾರಿ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದ 11
ಕುಟುಂಬಗಳಿಗೆ 94ಸಿ ಅಡಿ ಅಕ್ರಮ ಸಕ್ರಮ ಯೋಜನೆ ಅಡಿ ಪತ್ರಗಳನ್ನು ವಿತರಿಸಲಾಯಿತು. ವಯೋವೃದ್ಧರು, ವಿಶೇಷಚೇತನಪಿಂಚಣಿಗೆ ಸಂಬಂಧಿಸಿದಂತೆ 25 ಅರ್ಜಿಗಳು ಸ್ವೀಕರಿಸಲಾಗಿತ್ತು. ಅರ್ಹರಾದ ಎಲ್ಲರಿಗೆ ಪಿಂಚಣಿ ಪ್ರಮಾಣ ಪತ್ರ, ಭಾಗ್ಯಲಕ್ಷ್ಮೀ ಬಾಂಡ್‌ಗಳ ವಿತರಣೆ ಮತ್ತು ಜಮೀನಿನ ಖಾತೆ ಬದಲಾವಣೆ ಪ್ರಮಾಣ ಪತ್ರ ವಿತರಿಸಿದರು.

ಸರಕಾರಿ ಜಮೀನಿನಲ್ಲಿದ್ದುಕೊಂಡಿದ್ದ ಹಕ್ಕುಪತ್ರ ಹೊಂದಿರದ ತಿಮ್ಮಲಾಪುರದ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಧಿಕಾರಿಗಳು 80 ಸೆಂಟ್ಸ್‌ ಜಾಗವನ್ನು ಮಂಜೂರು ಮಾಡಿದ ಪ್ರಮಾಣ ಪತ್ರ ವಿತರಿಸಿದರು. ಮನೆ ಮನೆ ಭೇಟಿ ಸಂದರ್ಭದಲ್ಲಿ ವಿಕಲಚೇತನರೊಬ್ಬರ ಅಹವಾಲು ಆಲಿಸಿದ
ಡಿಸಿ ಅವರು, ಅವರಿಗೆ ತಕ್ಷಣವೇ ಪಿಂಚಣಿ ಮಂಜೂರು ಮಾಡಿ ಪ್ರಮಾಣಪತ್ರ ವಿತರಿಸಿದರು. ಇದೇ ಸಂದರ್ಭದಲ್ಲಿ ವೈಯಕ್ತಿಕ ಸೌಲಭ್ಯದ ಪ್ರಮಾಣಪತ್ರ ವಿತರಿಸಲಾಯಿತು. ಗ್ರಾಮದಲ್ಲಿ 212 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಬಹುತೇಕವನ್ನು ಡಿಸಿ ಮಾಲಪಾಟಿ ಅವರು ಸ್ಥಳದಲ್ಲೇ ಈಡೇರಿಸಿ ಉಳಿದವುಗಳನ್ನು ಅಧಿಕಾರಿಗಳಿಗೆ ನಿಯಮಾನುಸಾರ ಈಡೇರಿಸಲು ಸೂಚಿಸಿದರು.

ಸಂಸದ ವೈ.ದೇವೇಂದ್ರಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ, ತಾಪಂ ಸದಸ್ಯ ರಾಜಪ್ಪ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಬಾಯಿ, ಉಪಾಧ್ಯಕ್ಷೆ ಶಾರದಮ್ಮ, ತಹಶೀಲ್ದಾರ್‌ ವಿಶ್ವನಾಥ, ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅ ಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಇದ್ದರು.

Advertisement

ಓದಿ : ರೀ ಸಾಹೇಬ್ರ ಕರೆಂಟ್‌ ಕೊಡ್ರಿ..ಕುಡ್ಯಾಕ ನೀರ ಕೊಡ್ರಿ

Advertisement

Udayavani is now on Telegram. Click here to join our channel and stay updated with the latest news.

Next