Advertisement

ಬಿಂದು ಮಾಧವರ ಆದರ್ಶ ಅಳವಡಿಸಿಕೊಳ್ಳಿ : ಟಿ.ಜಿ. ವಿಠಲ್‌

04:45 PM Feb 19, 2021 | Team Udayavani |

ಬಳ್ಳಾರಿ: ಸ್ವಾತಂತ್ರ್ಯ ಸಂಗ್ರಾಮದ ರೂವಾರಿ, ಸಾಮಾಜಿಕ ಕಾರ್ಯಕರ್ತ ಹಾಗೂ ಯುವಕರ ಕಣ್ಮಣಿಯಾಗಿ ದೇಶವೇ ಬಳ್ಳಾರಿಯತ್ತ ತಿರುಗಿ
ನೋಡುವಂತೆ ಮಾಡಿದ್ದ ಬಿಂದು ಮಾಧವರ ಆದರ್ಶ ಗುಣಗಳನ್ನು ಇಂದಿನ ಯುವ ಜನತೆ ಅಳವಡಿಸಿಕೊಳ್ಳಬೇಕು ಎಂದು ಗಾಂಧಿ  ಭವನ ಮಲ್ಲಸಜ್ಜನ ವ್ಯಾಯಾಮ ಶಾಲೆಯ ಕಾರ್ಯದರ್ಶಿ ಟಿ.ಜಿ.ವಿಠಲ್‌ ಹೇಳಿದರು.

Advertisement

ಇಲ್ಲಿನ ಮಲ್ಲಸಜ್ಜನ ವ್ಯಾಯಾಮ ಶಾಲೆ ಆವರಣದಲ್ಲಿರುವ ಬಿಂದು ಮಾಧವರ ಪುತ್ಥಳಿಗೆ ಗುರುವಾರ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬಿಂದು ಮಾಧವರು ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರು. ಮೂಲತಃ ಗದಗ ಜಿಲ್ಲೆಯ ಡಂಬಳದ ನಾರಾಯಣಾಚಾರ್‌ ಅವರ ಪುತ್ರರಾದ ಬಿಂದು ಮಾಧವ 1914ರ ಅನಂತ ಪದ್ಮನಾಭ ವ್ರತದ ದಿನವೇ ಜನಿಸಿದ್ದರು. 2002ರ ಫೆಬ್ರವರಿ 17 ರಂದು ಇಹ ಲೋಕ ತ್ಯಜಿಸಿದ್ದಾರೆ.

ಸ್ವಾತಂತ್ರ ಚಳವಳಿ ಅವ ಧಿಯಲ್ಲಿ ದಿಟ್ಟವಾದ ಪಾತ್ರವಹಿಸಿದ್ದ ಬಿಂದು ಮಾಧವರು, ಗಾಂ ಧೀಜಿ ಪ್ರಭಾವಕ್ಕೆ ಒಳಗಾಗಿದ್ದರು. ಮಹಾತ್ಮಗಾಂಧಿಧೀಜಿ ಅನಂತಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಳ್ಳಾರಿಯಿಂದಲೇ ಪಾದಯಾತ್ರೆ ತೆರಳಿದ್ದ ಬಿಂದು ಮಾಧವ ನಂತರ ಗಾಂ ಧೀಜಿ ಜತೆಗೆ ಅವರ ಬೋಗಿಯಲ್ಲಿ ಬಳ್ಳಾರಿಗೆ ಬಂದಿದ್ದು ವಿಶೇಷ ಎಂದರು.

ಮಲ್ಲಸಜ್ಜನ ವ್ಯಾಯಾಮ ಶಾಲೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಇವರೂ ಕೂಡ ಓರ್ವರು. ಸ್ವಾತಂತ್ರ ಸಂಗ್ರಾಮದಲ್ಲಿ ಧುಮುಕಿದ್ದರಿಂದ 2 ವರ್ಷ 11 ತಿಂಗಳು ತಮಿಳುನಾಡಿನ ವೆಲ್ಲೂರಿನಲ್ಲಿ ಜೈಲು ವಾಸ ಅನುಭವಿಸಿದ್ದರು. ಗಾಂಧಿಧೀಜಿ ಚಿತಾಭಸ್ಮವನ್ನು ಕೂಡ್ಲಿಗಿಯಲ್ಲಿ ಸ್ಮಾರಕವನ್ನಾಗಿಸುವ ಮೂಲಕ ದೇಶಭಕ್ತಿ ಮೆರೆದಿದ್ದಾರೆ. ಅಷ್ಟೇ ಅಲ್ಲ ದೇವದಾಸಿ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಿ ಅಂದಿನ ಸಮಯದಲ್ಲಿ ಅದೆಷ್ಟೋ ಕುಟುಂಬಗಳಿಗೆ ಸಾಂಸಾರಿಕ ಸಂಸ್ಕಾರ ನೀಡುವ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಮೂಡಿಸಿದ್ದಾರೆ.
ಭಾರತ ಸ್ವಾತಂತ್ರ ದಿನಾಚರಣೆಯ 25ನೇ ವರ್ಷದಲ್ಲಿ ಅವರಿಗೆ ತಾಮ್ರಪತ್ರದಲ್ಲಿ ಅಭಿನಂದನಾ ಪತ್ರ ನೀಡಲಾಗಿತ್ತು. ಅದೇರೀತಿ 50ನೇ ಸ್ವಾತಂತ್ರೊತ್ಸವ ಸಂದರ್ಭದಲ್ಲೂ ಸಹ ಜಿಲ್ಲಾಡಳಿತ ಗುರುತಿಸಿ ಗೌರವಿಸಿದೆ. ತಮ್ಮ ಕೊನೆಯ ಉಸಿರು ಇರುವವರೆಗೂ ಸ್ವಾತಂತ್ರ
ಸೇನಾನಿಯಾಗಿ ಮೆರೆದ ಮಹನೀಯರ ವರ್ಧಂತಿ ಆಚರಣೆ ಕೇವಲ ಸಾಂಕೇತಿಕ ಆಗಬಾರದು. ಯುವ ಜನತೆ ಅವರ
ತ್ಯಾಗ, ಬಲಿದಾನ, ಸಚ್ಚಾರಿತ್ರ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದು ಟಿ.ಜಿ.ವಿಠಲ್‌ ಕರೆ ನೀಡಿದರು. ಈ ಸಂದರ್ಭದಲ್ಲಿ ಮಲ್ಲಸಜ್ಜನ ವ್ಯಾಯಾಮ ಶಾಲೆಯ ಲಕ್ಷ್ಮೀ ನರಸಿಂಹಮತ್ತು ಎಂ.ಕೆ.ರವೀಂದ್ರ ಮತ್ತು ಪಟುಗಳು ಇದ್ದರು.

ಓದಿ : ಕಾಮಿಡಿ ಪೀಸ್‌ ಆಗುತ್ತೀರಾ : ರೇಣುಕಾಚಾರ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next