Advertisement

ಮಕ್ಕಳು ಶಿಕ್ಷಣವಂತರಾಗಿ: ಮಲ್ಲಿಕಾರ್ಜುನ

05:12 PM Feb 15, 2021 | Team Udayavani |

ಸಂಡೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಉತ್ತಮ ಶಿಕ್ಷಣ ಪಡೆಯಬೇಕು ಹಾಗೂ ಸಮಾಜ ಶಕ್ತಿಯಾಗಬೇಕು ಎನ್ನುವ ಮಹತ್ತರ ಉದ್ದೇಶವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದು ಹೆಮ್ಮೆ ಪಡುವಂತಹದ್ದು ಎಂದು ಅಂಗಡಿ ಮಲ್ಲಿಕಾರ್ಜುನ ತಿಳಿಸಿದರು.

Advertisement

ಅವರು ತಾಲೂಕಿನ ದರೋಜಿ ವಲಯದಲ್ಲಿ ಎಸ್‌ಎಸ್‌ ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ಟ್ಯೂಷನ್‌ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿ, ಈಗಾಗಲೇ ಸಂಸ್ಥೆಯವರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಟ್ಯಾಬ್‌ ವಿತರಣೆ, ಲ್ಯಾಪ್‌ ಟಾಪ್‌ ವಿತರಣೆ ಮತ್ತು ವಿಶೇಷ ವಿದ್ಯಾರ್ಥಿವೇತನ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಪ್ರತಿಯೊಬ್ಬರೂ ಸಹ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಏಕಾಂಬರಪ್ಪ ಅವರು ಮಾತನಾಡಿ ಸಮಾಜಮುಖೀಯಾದ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಸಹಕರಿಸಬೇಕು. ಶಿಕ್ಷಣ ಪ್ರತಿಯೊಬ್ಬರ ಹಕ್ಕಾಗಿದೆ. ಆದ್ದರಿಂದ ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದರು. ದರೋಜಿ ವಲಯದ ಮೇಲ್ವಿಚಾರಕರಾದ ಅಜಿತ್‌ ಕುಮಾರ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ 600 ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಗಿದೆ. ಇದೇ ರೀತಿ 10 ಕಡೆ ವಿತರಿಸಲಾಗಿದೆ ಎಂದರು.

ಒಕ್ಕೂಟದ ಅಧ್ಯಕ್ಷ ಪದ್ಮನಾಭ ಶೇರುಗರ್‌, ಲಕ್ಷ್ಮಿ ದೇವಿ, ಸ್ಥಳೀಯ ಶಿಕ್ಷಕರು, ಶ್ರೀದೇವಿ, ವಿಶಾಲಾಕ್ಷಿ, ಉಪಸ್ಥಿತರಿದ್ದರು. ಸೇವಾ ಪ್ರತಿನಿ ಧಿಗಳಾದ ಎ.ಜಿ. ಶಿಲ್ಪಾ ನಿರೂಪಿಸಿದರು, ಪದ್ಮಾವತಿ ಸ್ವಾಗತಿಸಿದರು. ಪಾರ್ವತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next