ಸಂಡೂರು: ಕಲೆಗಳಿಗೆ ಪ್ರೋತ್ಸಾಹ ಅಗತ್ಯ. ಕಲೆಗಳ ಬಗ್ಗೆ ಪೋಷಕರು ಜಾಗೃತಿ ಮೂಡಿಸಬೇಕಾಗಿದೆ ಎಂದು ಪುರಸಭೆಯ ಅಧ್ಯಕ್ಷೆ ಅನಿತಾ ವಂಸತಕುಮಾರ್ ತಿಳಿಸಿದರು.
ಅವರು ಪಟ್ಟಣದ ಎಪಿಎಂಸಿ ಪ್ರೌಢಶಾಲಾ ಅವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಗಿರಿಜನ ಉತ್ಸವ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಸಿ.ಎಂ. ಸಿಗ್ಗಾವಿ ಮಾತನಾಡಿ, ಜನಪದ ಅಳಿವಿನ ಅಂಚಿನಲ್ಲಿವೆ. ಇವುಗಳನ್ನು ರಕ್ಷಿಸುವ ಸಲುವಾಗಿ ಗಿರಿಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಯುವಕರು ಅಸಕ್ತಿ ವಹಿಸಿದರೆ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ.ಆದ್ದರಿಂದ ಕಲಾವಿದರನ್ನು ಬದುಕಿಸಲು ಸರ್ಕಾರ ಇಂತಹ ಹಲವು ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವ ಮೂಲಕ ಉಳಿಸುವ ಪ್ರಯತ್ನ ನಡೆಸಿದ್ದು ಪ್ರತಿಯೊಬ್ಬರೂ ಸಹಕಾರ ಅಗತ್ಯ ಎಂದರು.
ಪುರಸಭೆ ಉಪಾಧ್ಯಕ್ಷ ವೀರೇಶ್ ಸಿಂಧೆ ಮಾತನಾಡಿ, ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಮಹತ್ತರ ಕಾರ್ಯವು ಗ್ರಾಮೀಣ ಪ್ರದೇಶದಿಂದ ಪಟ್ಟಣದವರೆಗೂ ನಡೆಯಬೇಕು. ಆದರೆ ಪಟ್ಟಣದಲ್ಲಿ ಬರೀ ಪ್ರದರ್ಶನಗಳಲ್ಲಿ ಮಾತ್ರ ಕಾಣುವಂತಾಗಿದೆ. ಇಂದು ಹಳ್ಳಿಗಾಡಿನಲ್ಲಿ ಕೋಲಾಟ, ಬಯಲಾಟ ಇತರ ಜನಪದ ಕಲೆಗಳು ಉಳಿದಿರುವುದು ಕಾಣುತ್ತೇವೆ. ಅಲ್ಲಿಯೂ ಧಾರಾವಾಹಿಗಳ ಪ್ರಭಾವದಿಂದ ಕಲೆ ಉಳಿಯುವಿಕೆ ಕಷ್ಟಸಾಧ್ಯವಾಗುತ್ತಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಸಿದ್ದಲಿಂಗೇಶ್.ಕೆ. ರಂಗಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ನಾಡೋಜ ವಿ.ಟಿ. ಕಾಳೆ ಉದ್ಘಾಟಿಸಿದರು. ಲೋಕೇಶ್ ತಂಡದವರಿಂದ ತಾಶರಾಂ ಡೋಲ್ ಇತರ ಸಂಗೀತ ಕಾರ್ಯಕ್ರಮಗಳು ನಡೆದವು. ಎಚ್. ಕುಮಾರಸ್ವಾಮಿ ನಿರೂಪಿಸಿದರು. ಸಿದ್ದಲಿಂಗೇಶ್ ಕೆ. ರಂಗಣ್ಣ ಸ್ವಾಗತಿಸಿದರು. ಕಲಾವಿದರಾದ ತಿಪ್ಪೇಸ್ವಾಮಿ, ನಾಗರತ್ನಮ್ಮ, ಮಂಜುನಾಥ ಗೋವಾಡ್, ಲೋಕೇಶ್ ತಂಡ ಕಾರ್ಯಕ್ರಮ ನಡೆಸಿಕೊಟ್ಟರು.
ಓದಿ :
ಜೈಲು ಹಕ್ಕಿಗಳಿಗೆ ವರವಾಗದ ಇ-ಮುಲಾಖಾತ್!