ಬಳ್ಳಾರಿ: ಪ್ರೇಮಿಗಳ ದಿನವನ್ನು ದೇಶ ಪ್ರೇಮಿಗಳ ದಿನವನ್ನಾಗಿ ಆಚರಿಸುತ್ತಿರುವ ಯುವ ಬ್ರಿಗೇಡ್ ವತಿಯಿಂದ ಅಂಚೆ ಇಲಾಖೆ ಸಿಬ್ಬಂದಿಗಳನ್ನು
ಭಾನುವಾರ ಸನ್ಮಾನಿಸಲಾಯಿತು. ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಬ್ರಿಗೇಡ್‌ನ ವಿಭಾಗ ಸಂಚಾಲಕ ಗುರುಪ್ರಸಾದ್ ಅವರು ಅಂಚೆ ಇಲಾಖೆ ಸಿಬ್ಬಂದಿಗಳಿಗೆ ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಅವರ ಅಂಚೆ ಸೇವೆಯನ್ನು ಗೌರವಿಸಿದರು.
ಬಳಿಕ ಮಾತನಾಡಿದ ಅವರು, ಒಬ್ಬರು ಅಕ್ಕರೆಯಿಂದ ಕಳುಹಿಸಿದ ವಸ್ತುವನ್ನು ನಿಸ್ವಾರ್ಥವಾಗಿ ಜೋಪಾನ ಮಾಡಿ ಇನ್ನೂಬ್ಬರಿಗೆ ತಲುಪಿಸುವುದು ಎಂದರೆ ಅದು ಪುಣ್ಯದ ಕೆಲಸ ಮತ್ತು ಸಮಾಜ ಅಂಚೆ ಇಲಾಖೆಯ ಮೇಲೆ ಇಟ್ಟಿರುವ ನಂಬಿಕೆಯಾಗಿದೆ
ಎಂದು ಅಂಚೆ ಇಲಾಖೆ ಸಿಬ್ಬಂದಿಗಳ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಚೆ ಕಚೇರಿಯ ಪ್ರಮುಖ ನಾಗರಾಜ್ ಮಾತನಾಡಿ “”ಕೊರೋನಾ ಸಮಯದಲ್ಲಿ ಅಂಚೆ ಇಲಾಖೆಯ ನೌಕರರು ಸಹ ಕೊರೋನಾ ವಾರಿಯರ್ಸ್ ತರಹ ಕಾರ್ಯ ನಿರ್ವಹಿಸಿದರು. ಆದರೆ ಅದನ್ನು ಎಲ್ಲರೂ ಮರೆತಿರುವಾಗ ಯುವಾ ಬ್ರಿಗೇಡ್ ಸಂಘಟನೆ ನಮ್ಮನ್ನು ಗುರುತಿಸಿ ಗೌರವಿಸಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಳೆ ಬಿಸಿಲು ಎನ್ನದೇ ಕಾರ್ಯನಿರ್ವಹಿಸುವ ಇಲಾಖೆಯ ಪೋಸ್ಟ್‌ಮ್ಯಾನ್‌ಗಳಿಗೆ ಜಾಕೆಟ್ ಹಾಗೂ ಅಭಿನಂದನಾ ಪತ್ರ, ಸಿಹಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಿವೇದಿತಾ ಪ್ರತಿಷ್ಠಾನದ ಸೋದರಿಯರು ಹಾಗೂ ಯುವಾ ಬ್ರಿಗೇಡ್‌ನ ಲಕ್ಷ್ಮೀ ಕಾಂತ್, ಶಂಕರ್, ರಾಜು, ಸಂದೀಪ್, ವೀರಸೇನ ಇತರರು ಇದ್ದರು.
ಓದಿ :
ಶಿರ್ವ ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ:ಗ್ರಾ.ಪಂ.ಅಧ್ಯಕ್ಷ ಗಾದಿ ಬಿಜೆಪಿ ತೆಕ್ಕೆಗೆ