Advertisement
ತಾಲೂಕಿನ ಬನ್ನಿಗೋಳ ಗ್ರಾಮದಲ್ಲಿ ಧಾರವಾಡದ ಚಾಣಕ್ಯ ಕರಿಯರ್ ಅಕಾಡೆಮಿ ಹಮ್ಮಿಕೊಂಡಿದ್ದ ನಮ್ಮೂರ ಹೆಮ್ಮೆ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು. ಆಂಗ್ಲ ಭಾಷೆಯನ್ನು ಊಟದಲ್ಲಿ ಉಪ್ಪಿನಕಾಯಿ ತರಹಬಳಸಿ. ಜಾನಪದ ಉಳಿಯಬೇಕು ಅಂದರೆ ಕನ್ನಡ ಶಾಲೆಯಲ್ಲಿ ಮಕ್ಕಳನ್ನು ಓದಿಸಬೇಕು. ಸರ್ಕಾರಿ ನೌಕರಿ ನೆಪದಲ್ಲಿ ಆಂಗ್ಲ ಮಾಧ್ಯಮದ ಶಾಲೆಗಳ ಬೆನ್ನತ್ತಬೇಡಿ. ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸುವ ಬದಲು ಪುಸ್ತಕಗಳನ್ನು ಕೊಡಿ. ಎಲ್ಲರಲ್ಲಿಯೂ ಕಲೆ ಇರುತ್ತದೆ ಆ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದರು.
Related Articles
Advertisement
ಹೂವಿನಹಡಗಲಿ ಶಾಖಾ ಗವಿಮಠದ ಶ್ರೀ ಹಿರಿಶಾಂತವೀರ ಮಹಾಸ್ವಾಮೀಜಿ, ನಂದಿಪುರದ ಡಾ| ಶ್ರೀ ಮಹೇಶ್ವರ ಸ್ವಾಮೀಜಿ, ಹಂಪಸಾಗರದ ನವಲಿಹಿರೇಮಠದ ಶ್ರೀ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತರಿಗೆ ಸನ್ಮಾನ ಮಾಡಲಾಯಿತು. ಕೊಪ್ಪಳ ಉಪ ವಿಭಾಗಾಧಿಕಾರಿ ರಮೇಶ್ ಕನರೆಡ್ಡಿ, ಹಗರಿಬೊಮ್ಮನಹಳ್ಳಿತಹಶೀಲ್ದಾರ ಶರಣಮ್ಮ, ಮುಂಡರಗಿ ತಹಶೀಲ್ದಾರ ಆಶಪ್ಪ ಪೂಜಾರ್, ಕೊಟ್ಟೂರು ತಹಶೀಲ್ದಾರ ಅನಿಲ್ ಕುಮಾರ್, ಹೊಸಪೇಟೆ ಅಬಕಾರಿ ಉಪಾಧೀಕ್ಷಕ ಬಸವರಾಜ್ ಹಡಪದ, ಕೆಎಎಸ್ ಅಧಿ ಕಾರಿ ಭೀಮನಗೌಡ ಮಾತನಾಡಿದರು. ಡಿ. ಬೋರಯ್ಯ, ಶ್ರೀನಿವಾಸ ಗಡಾದ್, ಬೇಳಗಾವಿ ಗೋಪಾಲ್ ಲಮಾಣಿ, ಹಾವೇರಿಯ ಗುಡ್ಡಪ್ಪ ಜಿಗಳಕೊಪ್ಪ, ಹುಣಸಗಿಯ ಸಿದ್ದೇಶ್ ಯಳವಾರ, ಧಾರವಾಡದ ಮಂಜುನಾಥ್, ಶಿರಹಟ್ಟಿಯ ಯಲ್ಲಪ್ಪ ಡಂಬಳ, ಕಮಲಾಪುರದ ಅರುಣ ರಾಥೋಡ್, ಮಂಗಳೂರು ಅಬಕಾರಿ ಅ ಧಿಕಾರಿ ವಿಶ್ವನಾಥ, ಗುಡ್ಡದ ಗಿರಿಧರ, ಮೈನಳ್ಳಿ ಕೊಟ್ರೇಶ್, ಮೂಲಿಮನಿ ರವಿಪ್ರಸಾದ್ ಇತರರಿದ್ದರು. ಇದೇವೇಳೆ ಗ್ರಾಮದ ಗ್ರಂಥಾಲಯಕ್ಕೆ ಒಂದು ಲಕ್ಷ ರೂ. ಮೊತ್ತದ ಪುಸ್ತಕ ದೇಣಿಗೆ ನೀಡಿದರು. ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಗೆ ಉಚಿತ ನೋಟ್‌ಬುಕ್‌ಗಳನ್ನು ನೀಡಿ ಗಮನಸೆಳೆದರು. ಕಾರ್ಯಕ್ರಮದಲ್ಲಿ ಹಾಸ್ಯರಸ, ಸುಗಮ ಸಂಗೀತ ಮಾನವ ಕಂಪ್ಯೂಟರ್, ಏಕಲವ್ಯ ನಾಟಕ ಪ್ರದರ್ಶನಗೊಂಡವು. ಉಪನ್ಯಾಸಕರಾದ ಜನಾರ್ಧನ ಮಡಿವಾಳರ, ಈಶ್ವರ ಕರಾತ್, ರಮೇಶ ನವಲಿ, ಸಿಆರ್‌ಪಿ ಯಂಕಾರೆಡ್ಡಿ ನಿರೂಪಿಸಿದರು. ಓದಿ : ಶಿರ್ವ ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ:ಗ್ರಾ.ಪಂ.ಅಧ್ಯಕ್ಷ ಗಾದಿ ಬಿಜೆಪಿ ತೆಕ್ಕೆಗೆ