Advertisement

“ನಮ್ಮ ಹಕ್ಕುಗಳನ್ನು ಸದುಪಯೋಗಪಡಿಸಿಕೊಳ್ಳೋಣ’

04:45 PM Feb 15, 2021 | Team Udayavani |

ಸಿರುಗುಪ್ಪ: ಭಾರತದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಸಿಗಬೇಕು ಎನ್ನುವ ಉದ್ದೇಶದಿಂದ ಸಂವಿಧಾನವನ್ನು ಡಾ|
ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿದ್ದಾರೆ ಎಂದು ಉಪನ್ಯಾಸಕ ರಮೇಶ್‌ ಸುಗ್ಗೇನಹಳ್ಳಿ ತಿಳಿಸಿದರು.

Advertisement

ನಗರದ ದೇಶನೂರು ರಸ್ತೆಯ ಗಂಗೋತ್ರಿ ಕಲ್ಯಾಣ ಮಂಟಪದಲ್ಲಿ ಸಿರುಗುಪ್ಪ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಸಹಭಾಗಿತ್ವದಲ್ಲಿ ವಿಶ್ವಜ್ಞಾನಿ ಶೈಕ್ಷಣಿಕ ಸಾಂಸ್ಕೃತಿಕ ಅಭಿವೃದ್ಧಿ ಸಂಘಟನೆಯ ಉದ್ಘಾಟನೆ ಹಾಗೂ ದಲಿತ ಗ್ರಾಪಂ ಸದಸ್ಯರಿಗೆ ಸನ್ಮಾನ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಹಾಗೂ ಮೂಲ ಸೌಕರ್ಯಗಳು ಇಂದು ನಮಗೆ ದೊರೆತಿದೆ ಎಂದರೆ ಅದಕ್ಕೆ ಡಾ| ಬಿ.ಆರ್‌.ಅಂಬೇಡ್ಕರ್‌ ಅವರೆ ಕಾರಣರಾಗಿದ್ದಾರೆ.

ನಮಗೆ ದೊರೆತಿರುವ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಹೇಳಿದರು. ಪಂಚಾಯತ್‌ ರಾಜ್‌ ವ್ಯವಸ್ಥೆ ಬಗ್ಗೆ ಮಾತನಾಡಿದ ಎಂ. ಪಂಪಾಪತಿ ಪ್ರತಿ ಗ್ರಾಪಂನಲ್ಲಿ ನರೇಗಾ
ಯೋಜನೆ ಅಡಿ ಕೋಟ್ಯಾಂತರ ರೂ. ಅನುದಾನ ಸಿಗುತ್ತದೆ. ಅದೇ ರೀತಿ ಎಸ್ಸಿ ಎಸ್ಟಿ ಕೇರಿಗಳಲ್ಲಿ ಉಚಿತವಾಗಿ ಗ್ರಾಪಂನಿಂದ ಹಾಕಲಾಗುತ್ತದೆ. ಶೌಚಾಲಯ, ಮಕ್ಕಳ ವಿದ್ಯಾಭ್ಯಾಸ, ದಲಿತ ಕೇರಿಗಳಲ್ಲಿ ಸಭೆ ನಡೆಸಿ ಮೂಲಭೂತ ಸೌಲಭ್ಯ ಒದಗಿಸಲು ಗ್ರಾಪಂ ಅಧಿಕಾರಿಗಳಿಗೆ ತಿಳಿಸಿ ಮೂಲ ಸೌಕರ್ಯ ಒದಗಿಸಲು ದಲಿತ ಗ್ರಾಪಂ ಸದಸ್ಯರು ಶ್ರಮಿಸಬೇಕೆಂದರು. ಮುಖಂಡರಾದ ಧರಪ್ಪ ನಾಯ್ಕ, ಲಕ್ಷ್ಮಣ ಭಂಡಾರಿ ಮಾತನಾಡಿದರು.

ನಗರಸಭೆ ಅಧ್ಯಕ್ಷ ನಾಗರಾಜ, ಜಿಪಂ ಸದಸ್ಯೆ ರಾಧಾ ಧರಪ್ಪನಾಯ್ಕ, ಟಿಎಚ್‌ಒ ಈರಣ್ಣ, ಮುಖಂಡರಾದ ಕೊಡ್ಲೆ ಮಲ್ಲಿಕಾರ್ಜುನ,
ಷಣ್ಮುಖ ಬಂಡಾರಿ, ಎಚ್‌.ಬಿ. ಗಂಗಪ್ಪ, ಸಣ್ಣ ವೀರೇಶ, ಚಿದಾನಂದರಾಯುಡು, ಮಹದೇವ, ದೊಡ್ಡಬಸಪ್ಪ, ದೊಡ್ಡ ವೀರೇಶ,
ಮಲ್ಲೇಶ ನಾಯ್ಕ, ಗ್ರಾಪಂ ಸದಸ್ಯರು ಭಾಗವಹಿಸಿದ್ದರು.

ಓದಿ : ಯಡಿಯೂರಪ್ಪರಂತೆ ವಿಜಯೇಂದ್ರ ಕೂಡಾ ರಾಜಾಹುಲಿಯಾಗಿ ಹೊರಹೊಮ್ಮಲಿ: ಎಸ್ ಟಿ ಸೋಮಶೇಖರ್

Advertisement
Advertisement

Udayavani is now on Telegram. Click here to join our channel and stay updated with the latest news.

Next