Advertisement

ಸಂತ ಸೇವಾಲಾಲ್‌ ಸಮಾಜ ಸುಧಾರಕರು

04:38 PM Feb 15, 2021 | Team Udayavani |

ಕೂಡ್ಲಿಗಿ: ತಾಲೂಕಿನ ಪೂಜಾರಹಳ್ಳಿ ತಾಂಡದಲ್ಲಿ ಜಗದ್ಗುರು ಸಂತ ಸೇವಾಲಾಲ್‌ ಗುರುಗಳ 282ನೇ ಜಯಂತ್ಯುತ್ಸವ ಆಚರಣೆ
ಮಾಡಲಾಯಿತು. ಶಿವಪ್ರಕಾಶ ಸ್ವಾಮೀಜಿ ಮಾತನಾಡಿ, ಬಂಜಾರ ಬುಡಕಟ್ಟು ಸಮುದಾಯದ ಕುಲ ಸಂತ ಶ್ರೀ ಜಗದ್ಗುರು ಸೇವಾಲಾಲ್‌
ಗುರುಗಳು ಒಬ್ಬ ಪವಾಡಪುರುಷ ಎಂದು ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಪೂಜಾರಹಳ್ಳಿ ತಾಂಡಾದಲ್ಲಿ ಸಂತ ಶ್ರೀಸೇವಾಲಾಲ್‌ ಅವರ 282ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಲೋಕ
ಕಲ್ಯಾಣಕ್ಕಾಗಿ ದೇಶದ ಅನೇಕ ಸಾಧು ಸಂತರು ಶರಣರು ಪವಾಡ ಪುರುಷರು ಜನಿಸಿದ್ದಾರೆ. ಸಮಾಜದಲ್ಲಿ ಮೌಡ್ಯತೆ ಕಂದಾಚಾರ
ತೊಡೆದು ಹಾಕಲು ಶ್ರಮಿಸಿದವರಲ್ಲಿ ಸಂತ ಶ್ರೀ ಸೇವಾಲಾಲ್‌ ಕೂಡ ಒಬ್ಬರಾಗಿದ್ದಾರೆ ಎಂದರು.

ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದ್ದರು ಸೇವಾ ಮನೋಭಾವದಿಂದ ಸಮುದಾಯದ ರಕ್ಷಣೆಗೆ ನಿಂತ ಮಹನೀಯ ಎಂದು ಸ್ಮರಿಸಿದರು. ಲಾಲ್‌ ಸಿಂಗ್‌ ನಾಯ್ಕ, ಸ್ವಾಮಿ ನಾಯ್ಕ, ಶ್ಯಾಮಾನಾಯ್ಕ, ಶಿವುನಾಯ್ಕ, ಸೇವಾಲಾಲ್‌ ನಾಯ್ಕ, ತಾಲೂಕಿನ ವಿವಿಧ ತಾಂಡಾಗಳ ಮುಖಂಡರು, ಪೂಜಾರಹಳ್ಳಿ ತಾಂಡಾದ ದೈವಸ್ಥರು, ಊರಿನ ಪ್ರಮುಖರು ಉಪಸ್ಥಿತರಿದ್ದರು.

ಓದಿ : ಯಡಿಯೂರಪ್ಪರಂತೆ ವಿಜಯೇಂದ್ರ ಕೂಡಾ ರಾಜಾಹುಲಿಯಾಗಿ ಹೊರಹೊಮ್ಮಲಿ: ಎಸ್ ಟಿ ಸೋಮಶೇಖರ್

Advertisement

Udayavani is now on Telegram. Click here to join our channel and stay updated with the latest news.

Next