Advertisement

ಮನಸಿದ್ದರೆ ಸಾಧನೆ ಸುಲಭ

05:42 PM Feb 08, 2021 | Team Udayavani |

ಸಂಡೂರು: ಸಾಧನೆ ಮಾಡುವ ಮನಸ್ಸಿದ್ದರೆ ಅಸಾಧ್ಯವಾದುದು ಯಾವುದು ಇಲ್ಲ ಎನ್ನುವ ಅಂಶವನ್ನು ಗುದುಗಿನ ಆದಿತ್ಯ ಅಡಿಗ ಮಾಡಿ ತೋರಿಸಿದ್ದು ಅವರ ಸಾಧನೆ ಪ್ರತಿ ವಿದ್ಯಾರ್ಥಿಗೂ ಸ್ಫೂರ್ತಿದಾಯಕವಾದುದು ಎಂದು ಕಾರ್ಯದರ್ಶಿ ಚಿದಂಬರ್‌ ಎಸ್‌. ನಾನಾವಟೆ ತಿಳಿಸಿದರು.

Advertisement

ಅವರು ಪಟ್ಟಣದ ಎಸ್‌.ವಿ. ನಾನಾವಟೆ ಪಿಯು ಕಾಲೇಜು ಹಾಗೂ ನಾನಾವಟೆ ಅಕಾಡೆಮಿಯಿಂದ ಸಿಎ ಮತ್ತು ಸಿಪಿಟಿಯ ಒಂದು ದಿನದ ಕಾರ್ಯಾಗಾರ ಮತ್ತು ಆದಿತ್ಯ ಅಡಿಗರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗದುಗಿನ ಜ್ಯೋತಿಷಿಯಾದ ಚಂದ್ರಶೇಖರ್‌ ಅಡಿಗ ಮತ್ತು ಸುಜಾತ ಅಡಿಗ ದಂಪತಿ ತಮ್ಮ ಮಗನಿಗೆ ಉತ್ತಮ ಸಂಸ್ಕಾರ ನೀಡಿದ ಪರಿಣಾಮ ಇಂದು ಅವರು ರಾಜ್ಯದಲ್ಲಿಯೇ ಲೆಕ್ಕ ಪರಿಶೋಧನೆ ಪರೀಕ್ಷೆಯಲ್ಲಿ 10ನೇ ರ್‍ಯಾಂಕ್‌ ಪಡೆಯುವ ಮೂಲಕ ರಾಜ್ಯಕ್ಕೆ, ಶಾಲೆಗೆ ಕೀರ್ತಿ ತಂದಿದ್ದಾರೆ. ಅವರ ಈ ಶ್ರಮ ನಮ್ಮ ವಿದ್ಯಾರ್ಥಿಗಳಿಗೂ ತಿಳಿಯಲಿ ಎನ್ನುವ ಉದ್ದೇಶದಿಂದ ಒಂದು ದಿನದ ಕಾರ್ಯಾಗಾರದಲ್ಲಿ ಅವರನ್ನು ಕರೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಕೋರಲಾಗಿದ್ದು ಪೂರ್ಣ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಆದಿತ್ಯ ಅಡಿಗ ಮಾತನಾಡಿ, ವಿಷಯದ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಬೇಕು. ನಿರಂತರ ಅಧ್ಯಯನ ಮತ್ತು ಓದುವಿಕೆಗೆ ಹೆಚ್ಚು ಒತ್ತು ನೀಡಿದಾಗ ಸಮಸ್ಯೆಯನ್ನು ಸರಳವಾಗಿ ನಿಭಾಯಿಸಬಹುದು ಎಂದರು. ಎಸ್‌ ವಿಎನ್‌ ಪಿಯು ಕಾಲೇಜ್‌ ಡೀನ್‌ ಪಿ.ಎಸ್‌. ಕುಮಾರರೆಡ್ಡಿ, ಸಿಬಿಎಸ್‌ಇ ಶಾಲೆ ಪ್ರಾಂಶುಪಾಲ ರವಿಕಾಂತ್‌ ಚಕ್ರಿಗಾರಿ ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಓದಿ: 51 ಸಾವಿರ ಗಡಿ ತಲುಪಿ ದಾಖಲೆ ಬರೆದ ಷೇರುಪೇಟೆ: ಸೆನ್ಸೆಕ್ಸ್ 617 ಅಂಕ ಜಿಗಿತ, ನಿಫ್ಟಿ 15,000

Advertisement

Udayavani is now on Telegram. Click here to join our channel and stay updated with the latest news.

Next