Advertisement

ಉಚಿತ ಹೊಲಿಗೆ ಯಂತ್ರ ವಿತರಣೆ

05:51 PM Jan 25, 2021 | Team Udayavani |

ಸಂಡೂರು: ತಾಲೂಕಿನ ಪ್ರತಿಯೊಬ್ಬ ಮಹಿಳೆಯೂ ಶಿಕ್ಷಣ ಪಡೆಯಬೇಕು, ಸ್ವಾವಲಂಬಿಗಳಾಗಿ ಆರ್ಥಿಕ ಪ್ರಗತಿ ಸಾಧಿಸಬೇಕು ಎನ್ನುವ ಮಹತ್ತರ ಉದ್ದೇಶದಿಂದ ಖನಿಜ ನಿ ಧಿ ಪ್ರತಿಷ್ಠಾನದಿಂದ (ಡಿ.ಎಂ. ಎಫ್‌.)ಸ್ವ ಉದ್ಯೋಗ ತರಬೇತಿ ಮತ್ತು ಉಚಿತ ಟೈಲರಿಂಗ್‌ ಯಂತ್ರಗಳನ್ನು ನೀಡಲಾಗುತ್ತಿದ್ದು ಅದರ ಪೂರ್ಣ ಸದುಪಯೋಗಪಡೆದುಕೊಳ್ಳಬೇಕು ಎಂದು ಶಾಸಕ ಈ. ತುಕಾರಾಂ ತಿಳಿಸಿದರು.

Advertisement

ಅವರು ತಾಲೂಕಿನ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಮಹಿಳೆಯರಿಗೆ ಡಿಎಂಎಫ್‌ ನಿಧಿ ಯಿಂದ ಟೈಲರಿಂಗ್‌ ತರಬೇತಿಯನ್ನು ನೀಡಿ ಅವರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿ, ಇಂದು ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ಬಹಳಷ್ಟು ಕುಟುಂಬಗಳು ನಿರುದ್ಯೋಗಿಗಳಾಗಿದ್ದರು. ಆದರೆ ಡಿಎಂಎಫ್‌ ನಿಧಿ ಯಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ತರಬೇತಿ, ಯುವಕರಿಗೆ ಸ್ವ ಉದ್ಯೋಗದ ಮೊಬೈಲ್‌ ರಿಪೇರಿ, ಕಂಪ್ಯೂಟರ್‌, ಟಿ.ವಿ. ಇತರೆ ರೀತಿ  ತರಬೇತಿಗಳನ್ನು ನೀಡುವ ಮೂಲಕ ಸ್ವ
ಉದ್ಯೋಗವನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ಪೂರ್ಣ ಸದುಪಯೋಗವನ್ನು ಪಡಿಸಿಕೊಳ್ಳಬೇಕು, ಸ್ವ ಉದ್ಯೋಗಿಗಳಾಗಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಯನ್ನು ಸಾಧಿ ಸಬೇಕು ಎಂದು
ಕರೆನೀಡಿದರು.

ಈ ಸಂದರ್ಭದಲ್ಲಿ ಸಂಸದ ವೈ. ದೇವೇಂದ್ರಪ್ಪ, ತಹಶೀಲ್ದಾರ್‌ ರಶ್ಮಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರುಗಳು, ಗ್ರಾಮದ ಪ್ರಮುಖರು, ಪಂಚಾಯಿತಿ ಅ ಧಿಕಾರಿಗಳು, ಖನಿಜ
ನಿಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಓದಿ: ಸೌಮ್ಯ ಧ್ವನಿಯ ಗಟ್ಟಿ ನಾಯಕ ಕಾರಜೋಳ

Advertisement

Udayavani is now on Telegram. Click here to join our channel and stay updated with the latest news.

Next