Advertisement

ನಿರಂತರ ಓದಿನಿಂದ ಆತ್ಮ ವಿಶ್ವಾ ಸ

05:07 PM Feb 08, 2021 | Team Udayavani |

ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿಗಳಿಗೆ ಸ್ಪಷ್ಟ ಮಾರ್ಗದರ್ಶನ ನೀಡುವ ಮೂಲಕ ಓದಿನಲ್ಲಿ ಆಸಕ್ತಿ ಬೆಳೆಸಬೇಕು ಎಂದು ಕೆಎಎಸ್‌ ತರಬೇತುದಾರ ಎಸ್‌. ಕೆ. ಕಿಶೋರಕುಮಾರ ತಿಳಿಸಿದರು.

Advertisement

ಪಟ್ಟಣದ ಜಿವಿಪಿಪಿ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಗರಿಬೊಮ್ಮನಹಳ್ಳಿಯ ಏಕದಂತ ಗ್ರೂಪ್‌ ಸಹಯೋಗದಲ್ಲಿ ನಡೆದ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ನಿರಂತರ ಓದುವುದು ಅತ್ಯಗತ್ಯವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಓದುವ ಸಾಮರ್ಥ್ಯವಿದ್ದರೂ ಉತ್ತಮ ತರಬೇತಿ ಇಲ್ಲದಿರುವುದರಿಂದ ಯಶಸ್ಸು ಪಡೆಯುವುದು ಕಷ್ಟವಾಗುತ್ತಿದೆ. ಉತ್ತಮ ಪುಸ್ತಕಗಳನ್ನು ಆಯ್ದುಕೊಂಡು ನಿರಂತರ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ಲೇಸ್‌ಮೆಂಟ್‌ ಸೆಲ್‌ ಅಧಿಕಾರಿ ವೀರೇಶ್‌ ಬಡಿಗೇರ್‌ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅತ್ಯಂತ ಆತ್ಮವಿಶ್ವಾಸದಿಂದ ಎದುರಿಸುವ ನಿಟ್ಟಿನಲ್ಲಿ ಉತ್ತಮ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಕಾಲೇಜಿನ ಗ್ರಂಥಾಲಯ ಹಾಗೂ
ಉಪನ್ಯಾಸಕರುಗಳ ಸಹಕಾರ ಪಡೆದು ಯಶಸ್ವಿಯತ್ತ ಸಾಗಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ| ಸತೀಶ್‌ ಪಾಟೀಲ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯಗಳ ಪುಸ್ತಕಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ವಿದ್ಯಾಭ್ಯಾಸದ ಸಮಯ ಅತ್ಯಮೂಲ್ಯ ಎಂಬುದನ್ನು ಅರಿತುಕೊಳ್ಳಬೇಕು. ಚಂಚಲತೆಯನ್ನು ದೂರವಿಟ್ಟು ಏಕಾಗ್ರತೆಯಿಂದ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ನಿರಂತರ ಓದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸ್ಪರ್ದಾತ್ಮಕ ಪರೀಕ್ಷೆಗಳ ಬಗ್ಗೆ ಭಯಬೇಡ ಎಂದು ತಿಳಿಸಿದರು.

Advertisement

ಏಕದಂತ ಗ್ರೂಪ್‌ನ ಎಂಪಿಎಂ ಮಂಜುನಾಥ ಮಾತನಾಡಿದರು. ಉಪನ್ಯಾಸಕರಾದ ಡಾ| ಮಲ್ಲಿಕಾರ್ಜುನ, ಡಾ| ಹರಾಳು ಬುಳ್ಳಪ್ಪ, ವರುಣ್‌ ಪಾಟೀಲ್‌ ಇದ್ದರು. ಸತ್ಯನಾರಾಯಣ, ಮಂಜುನಾಯ್ಕ ನಿರೂಪಿಸಿದರು.

ಓದಿ: ರಾಮನನ್ನು ಹೃದಯದಲ್ಲಿ ಸ್ಥಾಪಿಸಿಕೊಳ್ಳಿ : ಕುಲಕರ್ಣಿ 

Advertisement

Udayavani is now on Telegram. Click here to join our channel and stay updated with the latest news.

Next