Advertisement

ಕೃಷಿ ಕಾಯ್ದೆ ಹಿಂಪಡೆಯಲು ರಾಜ್ಯ ಹೆದ್ದಾರಿ ಬಂದ್‌

05:02 PM Feb 07, 2021 | Team Udayavani |

ಹರಪನಹಳ್ಳಿ: ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ದೇಶಾದ್ಯಾಂತ ನಡೆಯುತ್ತಿರುವ ಹೆದ್ದಾರಿ ಬಂದ್‌ಗೆ ಬೆಂಬಲಿಸಿ ಸ್ಥಳೀಯ ಅಖೀಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟಗಳು
ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದವು.

Advertisement

ಪಟ್ಟಣದ ಮಿನಿವಿಧಾನಸೌಧ ಬಳಿ ಹೊಸಪೇಟೆ ರಾಜ್ಯ ಹೆದ್ದಾರಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು. ಪ್ರಧಾನ ಮಂತ್ರಿಗಳು ಅನ್ನದಾತರ ಸಮಸ್ಯೆ ಬಗೆಹರಿಸುವ ಬದಲು ಹೋರಾಟಗಾರರನ್ನು ಹತ್ತಿಕ್ಕಲು ರಸ್ತೆಗಳಿಗೆ ಮೊಳೆ ಹೊಡೆದು, ತಂತಿ ಬೇಲಿ ಹಾಕಿರುವುದು ನಾಚಿಗೇಡಿನ ಸಂಗತಿಯಾಗಿದೆ. ಹೋರಾಟಗಾರರನ್ನು ಭಯೋತ್ಪಾದಕರು, ಖಲಿಸ್ತಾನಿಗಳು ಎಂದು ಹೇಳಿಕೆ ನೀಡಿರುವ ರಾಜ್ಯದ ಕೃಷಿ ಮಂತ್ರಿ ಬಿ.ಸಿ.ಪಾಟೀಲ್‌ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಹೊಸಹಳ್ಳಿ ಮಲ್ಲೇಶ್‌, ಇದ್ಲಿ ರಾಮಪ್ಪ, ಗುಡಿಹಳ್ಳಿ ಹಾಲೇಶ್‌, ಕೆ.ಕಲ್ಲಹಳ್ಳಿ ಗೋಣ್ಯೆಪ್ಪ, ಕುಂಚೂರು ಶಫಿವುಲ್ಲಾ, ಟಿ.ಬಸಪ್ಪ, ಗೌರಿಹಳ್ಳಿ ಹನುಮಂತಪ್ಪ, ತಿಮ್ಮಪ್ಪ, ಬಳಿಗನೂರು ಕೋಟ್ರೇಶ್‌ ಮತ್ತಿತರರು ಭಾಗವಹಿಸಿದ್ದರು.

ಓದಿ : ಜನಪದಕ್ಕೆ ಸ್ಕೂಲಿಂಗ್ ಆಗಬೇಕು, ಇದು ಶಾಸ್ತ್ರವಾಗದ ಹೊರತು ಶಾಶ್ವತವಾಗದು: ಹಂಸಲೇಖ

Advertisement

Udayavani is now on Telegram. Click here to join our channel and stay updated with the latest news.

Next