Advertisement
ದೆಹಲಿ ರೈತರ ಹೋರಾಟ ಬೆಂಬಲಿಸಿ,ನಗರದಲ್ಲಿ ರಸ್ತೆ ತಡೆ ಚಳುವಳಿನಡೆಸಿದ ಪ್ರತಿಭಟನಾಕಾರರು, ಕೇಂದ್ರಸರ್ಕಾರ ವಿರುದ್ಧ ವಿವಿಧ ಘೋಷಣೆಕೂಗಿ ಆಕ್ರೋಶ ವ್ಯಕ್ತಪಡಿಸಿದರು.ರೈತರಿಗೆ ಕಂಠಕ ಪ್ರಾಯವಾಗಿರುವಎಪಿಎಂಸಿ, ಭೂಸುಧಾರಣೆ ಹಾಗೂವಿದ್ಯುತ್ ತಿದ್ದುಪಡಿ ಕಾಯ್ದೆಗಳನ್ನುಹಿಂಪಡೆಯಬೇಕು ಎಂದು ಆಗ್ರಹಿಸಿ,ಕಳೆದ 75 ದಿನಗಳಿಂದ ರೈತರುನಡೆಸುತ್ತಿರುವ ಹೋರಾಟಕ್ಕೆ ಯಾವುದೇಮನ್ನಣೆ ನೀಡದೇ ಹಠಮಾರಿ ಧೋರಣೆಅನುಸರಿಸುತ್ತಿರುವ ಪ್ರಧಾನಿ ನರೇಂದ್ರಮೋದಿಯವರು ಈವರಗೆ ರೈತರೊಂದಿಗೆಸಮಾಲೋಚನೆ ನಡೆಸಿಲ್ಲ ಎಂದುಆಕ್ರೋಶ ವ್ಯಕ್ತಪಡಿಸಿದರು.
ಎ.ಕರುಣಾನಿ , ಬಿ.ತಾಯಪ್ಪನಾಯಕ, ಸಣ್ಣಕ್ಕಿ ರುದ್ದಪ್ಪ,ದುರ್ಗಪ್ಪ ಪೂಜಾರಿ, ಯಲ್ಲಾಲಿಂಗ,ಬಣ್ಣದಮನೆ ಸೋಮಶೇಖರ,ಎಂ.ಸಿ.ವೀರಸ್ವಾಮಿ, ಡಿ.ಮಾರೆಣ್ಣ,ಕೆ.ನಾಗರತ್ನಮ್ಮ, ಎಂ.ಗೋಪಾಲ,ಬಿ.ಮಹೇಶ್, ಶಕುಂತಲಮ್ಮ, ರೇವಣಸಿದ್ದಪ್ಪ, ವೆಂಕಟೇಶ್, ಸತ್ಯಮೂರ್ತಿ,ಶಿವುಕುಮಾರ, ಹಾಗೂ ರಮೇಶ್‌ಇನ್ನಿತರರಿದ್ದರು. ಸಿಪಿಐಎಂ, ಸಿಐಟಿಯು,ದಲಿತ ಹಕ್ಕುಗಳ ಸಮಿತಿ, ಪ್ರಗತಿ ಪರಸಂಘಟನೆಗಳ ಒಕ್ಕೂಟ, ಪ್ರಾಂತ ರೈತ
ಸಂಘ, ಸಮುದಾಯ ಸಂಘಟನೆ, ಡಾ|ಅಂಬೇಡ್ಕರ್ ಸಂಘ, ಡಿವೈಎಫ್‌ಐ, ಕಟ್ಟಡಕಾರ್ಮಿಕರ ಸಂಘಟನೆಗಳ ಮುಖಂಡರುಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಸ್ಥಳದಲ್ಲಿ ಪೊಲೀಸ್ ಅಧಿ ಕಾರಿ ಹಾಗೂಸಿಬ್ಬಂದಿ ಮೊಕ್ಕಾಂ ಹೂಡಿದ್ದರು. ಸಂಚಾರ ಅಸ್ತವ್ಯಸ್ತ: ನಗರದ ಕನಕದಾಸವೃತ್ತ, ಅನಂತಶಯನ ಗುಡಿ ಬೈಪಾಸ್,ಹಂಪಿ ರಸ್ತೆಗಳಲ್ಲಿ ಪೊಲೀಸರು,ಬ್ಯಾರಿಕೇಡ್‌ನ್ನು ಅಳವಡಿಸಿದ
ಹಿನ್ನೆಲೆಯಲ್ಲಿ ವಾಹನ ಸವಾಹರರು,ಬದಲಿ ರಸ್ತೆ ಮೂಲಕ ಸಂಚಾರಮಾಡಿದರು. ಇದರಿಂದಾಗಿ ಸಂಚಾರದಲ್ಲಿಅಸ್ತವ್ಯಸ್ತವಾಗಿತ್ತು. ಹೊಸಪೇಟೆಯಿಂದಹಂಪಿಗೆ ತೆರಳುವ ಮಾರ್ಗದಲ್ಲಿರೈತರು ರಸ್ತೆ ತಡೆ ನಡೆಸಿದ್ದರಿಂದ ಹಂಪಿ,ಕಮಲಾಪುರ, ಕಂಪ್ಲಿ ಹಾಗೂ ಗಂಗಾವತಿಗೆತೆರಳಲು ಪ್ರಯಾಣಿಕರು ಪರದಾಡಿದರು.
Related Articles
Advertisement