Advertisement
ಜಿಲ್ಲೆಯ ಸಂಡೂರು, ಕುರುಗೋಡು ತಾಲೂಕಿನ ತೋರಣಗಲ್ಲು ಮತ್ತು ಕುಡತಿನಿ ಸುತ್ತಮುತ್ತಲು ಇರುವ ಕೈಗಾರಿಕೆಗಳಿಂದ ಹೊರಹೊಮ್ಮುವ ತ್ಯಾಜ್ಯ ಮತ್ತು ಧೂಳಿನ ಕಣಗಳಿಂದ ತೋರಣಗಲ್ಲು, ಸುಲ್ತಾನಪುರ ಗ್ರಾಮದ ಸುತ್ತಾಮುತ್ತ ಜಲ-ವಾಯು ವಿಷಪೂರಿತವಾಗಿವೆ. ದಿನದಿಂದ ದಿನಕ್ಕೆ ವಾಯು ಗುಣಮಟ್ಟದ ಸೂಚ್ಯಂಕ ಎಸ್ 1950 ಎಕ್ಯೂಎ ಹೆಚ್ಚಾಗಿದೆ. ನಾರಿಹಳ್ಳ ಮುಂತಾದ ನಾಲೆಗಳ ಮೂಲಕ ದರೋಜಿ ಕರೆಗೆ ವಿಷ ಪೂರಿತ ತ್ಯಾಜ್ಯ ಹರಿದು ಜಲ ಮಾಲಿನ್ಯವಾಗುತ್ತಿದೆ. ಕುಡಿತಿನಿ ಪಟ್ಟಣದಲ್ಲಿ ಧೂಳಿನಿಂದಾಗಿ ವಾಯು ಮತ್ತು ಕುಡಿಯುವ ನೀರಿನ ಮಾಲಿನ್ಯ ಉಂಟಾಗಿದೆ. ಪರಿಸರ ಮಾಲಿನ್ಯದ ಬಗ್ಗೆ ಕೈಗಾರಿಕೆಗಳ ಮೇಲೆ ಕಾನೂನು ರೀತಿ ಕೇಸು ದಾಖಲಿಸಿ ದಂಡ ವಿಧಿ ಸಿ, ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಆನ್‌ಲೈನ್ ಎಮಿಷನ್ ಮಾನಿಟರಿಂಗ್ ಸಿಸ್ಟಂನ್ನು ಪ್ರಮುಖ ಪರಿಸರ ಮಾಲಿನ್ಯ ಹಾಟ್‌ಸ್ಪಾಟ್ ಸ್ಥಳಗಳಲ್ಲಿ ಅಳವಡಿಸಬೇಕು. ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ಸಮಿತಿಯ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
Advertisement
ವಾಯು ಮಾಲಿನ್ಯ ತಡೆಗೆ ಒತ್ತಾಯಿಸಿ ಮನವಿ
05:46 PM Jan 25, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.