ಬಳ್ಳಾರಿ: ನಗರದ ಶ್ರೀರಾಂಪುರ ಕಾಲೋನಿಯಲ್ಲಿ ಕಂಡುಬಂದಿರುವ ವಾಂತಿಭೇದಿ ಪ್ರಕರಣಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಐಸಿಸಿ ವಿಭಾಗ ಹಾಗೂ ಮಹಾನಗರ ಪಾಲಿಕೆ ವತಿಯಿಂದ
ಶನಿವಾರ ಜಾಗೃತಿ ಮೂಡಿಸಲಾಯಿತು.
ಓದಿ : ದೇಶದ ಕೃಷಿ ವ್ಯವಸ್ಥೆಯೇ ಬುಡಮೇಲು: ರಾಮಣ್ಣ
ಕುಡಿಯುವ ನೀರನ್ನು ಇಪ್ಪತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ಆರಿಸಿ ನಂತರ ಸೋಸಿ ಕುಡಿಯುವಂತೆ ತಿಳಿಸಲಾಯಿತು. ಬಿಸಿಯಾದ ಆಹಾರ ಪದಾರ್ಥವನ್ನು ಸೇವಿಸಲು ಮತ್ತು ಇಂದು ಮಾಡಿದ ಆಹಾರ ಪದಾರ್ಥವನ್ನು ಮರುದಿನ ಬಳಸದಂತೆ ಕೋರಲಾಯಿತು. ತಯಾರಿಸಿದ ಆಹಾರ ಪದಾರ್ಥಗಳನ್ನು ಮುಚ್ಚಳದಿಂದ ಮುಚ್ಚುವಂತೆ ಮತ್ತು ನೋಣಗಳು ಆಹಾರ ಪದಾರ್ಥಗಳ ಮೇಲೆ ಕುಳಿತುಕೊಳ್ಳದಂತೆ ಜಾಗ್ರತೆ ವಹಿಸಬೇಕು ಎಂದು ತಿಳಿಸಲಾಯಿತು. ರಸ್ತೆ ಬದಿಯಲ್ಲಿ ತಯಾರಿಸುವ ಕರಿದ ಪದಾರ್ಥಗಳು ಹಾಗೂ ಇತರ ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂದು ವೈದ್ಯರು ಸಾರ್ವಜನಿಕರಿಗೆ ತಿಳಿಸಿದರು.
ಶೌಚದ ನಂತರ ಹಾಗೂ ಊಟದ ಮೊದಲು ಕೈಗಳನ್ನು ಸೋಪು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು. ಚರಂಡಿಗಳಲ್ಲಿ ನೀರಿನ ಸಂಪರ್ಕದ ಪೈಪ್ ಇರುವಲ್ಲಿ ಮತ್ತು ನಳಗಳಲ್ಲಿ ಚರಂಡಿ ನೀರು ಕಂಡುಬಂದಲ್ಲಿ ಮಹಾನಗರ ಪಾಲಿಕೆ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು.
ತಾತ್ಕಾಲಿಕವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿರುವ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು. ಬಂಡಿಗಳಲ್ಲಿ ಕೋಯ್ದು ಮಾರಾಟ ಮಾಡುವ ಯಾವುದೆ ಹಣ್ಣುಗಳನ್ನು ತಿನ್ನದಂತೆ ವಿನಂತಿಸಲಾಯಿತು.
ಮನೆಗಳ ಸುತ್ತಲೂ ಸ್ವತ್ಛತೆ ಕಾಪಾಡಿ ನೋಣಗಳು ಬರದಂತೆ ಕ್ರಮವಹಿಸಬೇಕು ಎಂದು ವೈದ್ಯರು ಕೋರಿದರು. ಈ ವೇಳೆ
ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಈಶ್ವರ್ ದಾಸಪ್ಪನವರ ಮಾಹಿತಿ ನೀಡಿದರು. ತಾಲೂಕು ಆರೋಗ್ಯಾ ಧಿಕಾರಿ ಡಾ| ಮೋಹನ ಕುಮಾರಿ, = ಮಿಲ್ಲರಪೇಟೆ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸೌಜನ್ಯ, ಡಾ| ಪಾವನಿ, ಜಿಲ್ಲಾ ಆರೋಗ್ಯ ಉಪಶಿಕ್ಷಣಾಧಿಕಾರಿ ಗೌರಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಮ್ಮ ಅಭಿಷೇಕ್ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ಓದಿ : ಕೆಕೆಆರ್‌ಡಿಬಿ ಅನುದಾನ ಹಂಚಿಕೆಯಲ್ಲೂ ತಾರತಮ್ಯ