Advertisement

ಪ್ರಜಾಪ್ರಭುತ್ವದಲ್ಲಿ ಪ್ರತಿ ಮತ ಅಮೂಲ್ಯ

02:11 PM Jan 26, 2022 | Team Udayavani |

ಬಳ್ಳಾರಿ: ಮತದಾರರ ಗುರುತಿನ ಚೀಟಿ ಎನ್ನುವುದು ಕೇವಲ ಐಡಿ ಕಾರ್ಡ್‌ಮಾತ್ರವಲ್ಲ. ದೇಶದ ಯೋಗ್ಯ ಚುನಾಯಿತ ಪ್ರತಿನಿಧಿ ಗಳನ್ನು ಆಯ್ಕೆಮಾಡುವ ಮತ್ತು ದೇಶದ ವ್ಯವಸ್ಥೆ ಸರಿಯಾಗಿ ಮುನ್ನಡೆಸುವಂತೆ ಮಾಡುವಪ್ರಮುಖ ಜವಾಬ್ದಾರಿ ಎಂದು ಜಿಲ್ಲಾ ಧಿಕಾರಿ ಪವನಕುಮಾರ್‌ ಮಾಲಪಾಟಿ ಹೇಳಿದರು.

Advertisement

ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ವತಿಯಿಂದನಗರದ ಬಿಡಿಎಎ ಫುಟ್ಬಾಲ್‌ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ12ನೇ ರಾಷೀóಯ ಮತದಾರರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿಅವರು ಮಾತನಾಡಿದರು.ಪ್ರಜಾಪ್ರಭುತ್ವದಲ್ಲಿ ಪ್ರತಿ ಮತವೂ ಅತ್ಯಂತ ಅಮೂಲ್ಯವಾದುದು. ತಾವುಮತಚಲಾಯಿಸುವಾಗ ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೇಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಯೋಗ್ಯ ಅಭ್ಯರ್ಥಿಗಳಮೌಲ್ಯಮಾಪನ ಮಾಡಿ ಅಂತವರಿಗೆ ಮತಚಲಾಯಿಸಬೇಕು ಎಂದರು.

ಯೋಗ್ಯ ಅಭ್ಯರ್ಥಿಗಳಿಗೆ ಮತಚಲಾಯಿಸಿದರೆ ದೇಶದ ಪ್ರಜಾಪ್ರಭುತ್ವವ್ಯವಸ್ಥೆ ಸರಿಯಾಗಿ ಮುನ್ನಡೆಯಲು ಸಾಧ್ಯ ಎಂದು ಹೇಳಿದ ಡಿಸಿ ಮಾಲಪಾಟಿ,ಮತದಾನ ಮಾಡುವುದರಿಂದ ವಿಮುಖರಾಗದೇ ಪ್ರತಿ ಚುನಾವಣೆಯಲ್ಲಿತಮ್ಮ ಅಭಿಪ್ರಾಯವನ್ನು ತಮ್ಮ ಮತದ ಮೂಲಕ ದಾಖಲಿಸಬೇಕುಎಂದರು.ಎಸ್ಪಿ ಸೈದುಲು ಅಡಾವತ್‌ ಮಾತನಾಡಿ, ದೇಶದಲ್ಲಿರುವ ಪ್ರತಿಯೊಬ್ಬರಮತಕ್ಕೂ ಒಂದೇ ಮೌಲ್ಯವಿದೆ.

ಮತದಾನದಲ್ಲಿ ಶೇಕಡವಾರು ಮತದಾನಪ್ರಮಾಣ ಕಡಿಮೆಯಾಗುತ್ತಿದ್ದು, ಯಾರು ಕೂಡ ಮತದಾನದಿಂದವಿಮುಖರಾಗದೇ ಕಡ್ಡಾಯವಾಗಿ ತಮ್ಮ ಹಕ್ಕು ಚಲಾಯಿಸಬೇಕು ಎಂದರು.ಜಿಪಂ ಸಿಇಒ ಕೆ.ಆರ್‌. ನಂದಿನಿ ಮತದಾನದ ಪ್ರತಿಜ್ಞಾ ವಿಧಿ ಯನ್ನು ಬೋಧಿಸಿದರು.

ಈ ಸಂದರ್ಭದಲ್ಲಿ ರಾಷೀóಯ ಮತದಾರರ ದಿನಾಚರಣೆನಿಮಿತ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆಬಹುಮಾನಗಳು ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ಬಿಎಲ್‌ಒಗಳಿಗೆಪ್ರಶಸ್ತಿ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಮೊದಲ ಬಾರಿಗೆಮತದಾರರ ಗುರುತಿನ ಚೀಟಿ ಪಡೆದ ಯುವ ಮತದಾರರಿಗೆ ಮತದಾರರಗುರುತಿನ ಚೀಟಿಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next