Advertisement

ವೈರಲ್‌ ಆಡಿಯೋದ ವ್ಯಕ್ತಿ ಮಾನಸಿಕ ಅಸ್ವಸ್ಥ!

11:14 AM Sep 17, 2021 | Team Udayavani |

ಬಳ್ಳಾರಿ: ಸಾಮಾಜಿಕ ಜಾಲತಾಣಗಳಲ್ಲಿವೈರಲ್‌ ಆಗಿರುವ ಮೊಬೈಲ್‌ ಆಡಿಯೋದಲ್ಲಿಬಳ್ಳಾರಿಯಲ್ಲಿ ರೇಪ್‌, ರ್ಯಾಗಿಂಗ್‌ಮಾಡಿರುವುದಾಗಿ ಮಾತನಾಡಿರುವವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದ್ದು, ಆತನುಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಎಸ್‌ಪಿಸೈದುಲು ಅಡಾವತ್‌ ಸ್ಪಷ್ಟಪಡಿಸಿದರು.ಆಡಿಯೋದಲ್ಲಿ “ಬಳ್ಳಾರಿ ನಗರಮತ್ತು ಗ್ರಾಮೀಣ ಪ್ರದೇಶದಲ್ಲಿ ಯುವತಿಯರಿಗೆರೇಪ್‌ ಮಾಡಿ ಸಾಯಿಸಿದ್ದೀವಿ, ಮಹಿಳೆಯರಿಗೆಕಿರುಕುಳ’ ನೀಡಿರುವುದಾಗಿ ಹೇಳಿಕೊಂಡಿದ್ದಾನೆ.

Advertisement

ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ.ಆದರೂ ಗಂಭೀರವಾಗಿ ಪರಿಗಣಿಸಿ, ಆಡಿಯೋಎಲ್ಲಿಂದ, ಯಾರಿಂದ ಬಂದಿದೆ? ಹೇಗೆ ಫಾವರ್ಡ್‌ಆಗಿದೆ? ಎಂಬುದನ್ನು ಪರಿಶೀಲಿಸಿದಾಗಆಡಿಯೋದಲ್ಲಿ ಮಾತನಾಡಿರುವ ವ್ಯಕ್ತಿಪತ್ತೆಯಾಗಿದ್ದು, ಆತನು ಮಾನಸಿಕಅಸ್ವಸ್ಥನಾಗಿದ್ದಾನೆ ಎಂದು ನಗರದ ಎಸ್‌ಪಿಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಮೂಲತಃ ವಿಜಯಪುರ ಜಿಲ್ಲೆಯಮುದ್ದೆಬೀಹಾಳ ತಾಲೂಕಿನ ನಾಲತ್ವಾಡಗ್ರಾಮದವನಾಗಿದ್ದಾನೆ. ಅವಿವಾಹಿತನಾಗಿದ ಈತನಿಗೆ34 ವರ್ಷ ವಯಸ್ಸಾಗಿದೆ. ಪೇಂಟರ್‌ಆಗಿ ಕೆಲಸಮಾಡುವ ಈತನ ಮೊಬೈಲ್‌ ಕಾಲ್‌ ಡಿಟೆಲ್ಸ್‌ ಸೇರಿಚಲನವಲನಗಳನ್ನು ಪರಿಶೀಲಿಸಿದಾಗ ಕಳೆದ ಎರಡುವರ್ಷಗಳಿಂದ ಬಳ್ಳಾರಿಗೆ ಬಂದಿಲ್ಲ ಎಂದು ತಿಳಿದುಬಂದಿದೆ. ಹೀಗೆ ಏಕೆ ಮಾತನಾಡಿದ್ದಾನೆ ಎಂದುಪರಿಶೀಲಿಸಿದಾಗ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾನೆ.ಈ ಕುರಿತು ಸಂಬಂಧಪಟ್ಟ ವೈದ್ಯರಿಂದಲೂ ವೈದ್ಯಕೀಯಪರೀಕ್ಷೆ ನಡೆಯುತ್ತಿದೆ ಎಂದವರು ವಿವರಿಸಿದ್ದಾರೆ.

ಸ್ನೇಹಿತರು ಸೇರಿ ಇತರರ ಮೊಬೈಲ್‌ ಪಡೆದುಯಾವುದೊ ಒಂದು ನಂಬರ್‌ಗೆ ಕಾಲ್‌ಮಾತನಾಡುವುದು ಇದೇ ಮೊದಲಲ್ಲ. ಈ ಹಿಂದೆಯೂಹಲವು ಬಾರಿ ಮಾತನಾಡಿದ್ದಾನೆ. ಆಡಿಯೋದಲ್ಲಿಕೇಳಿಸುವ ಮತ್ತೂಬ್ಬರನ್ನು ಸೇರಿ ಇವನೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿರುವ ಹಲವರನ್ನು ಪರಿಶೀಲಿಸಿದಾಗಅವರೆಲ್ಲರೂ ಇವನ ನಂಬರ್‌ನ್ನು ಬ್ಲಾಕ್‌ ಮಾಡಿದ್ದಾರೆ.

ವಿಜಯಪುರದ ವರದಿಗಾರರೊಬ್ಬರಿಗೂ ಸಹಮಾತನಾಡಿದ್ದಾನೆ ಎಂದವರು ತಿಳಿಸಿದ್ದಾರೆ.ಕಳೆದ ಮೂರು ತಿಂಗಳ ತಂದೆ-ತಾಯಿ ಇಬ್ಬರನ್ನೂಕಳೆದುಕೊಂಡಿರುವ ಇವನ ವಿರುದ್ಧ ಯಾವುದೇಪ್ರಕರಣ ದಾಖಲಾಗಿಲ್ಲ. ಮಾನಸಿಕವಾಗಿ ಒತ್ತಡ,ಖನ್ನತೆಗೆ ಒಳಗಾದರೆ ಈ ರೀತಿ ಮಾತನಾಡುತ್ತಾರೆಎಂದು ವೈದ್ಯರು ಖಚಿತ ಪಡಿಸಿದ್ದಾರೆ. ಮೇಲಾಗಿಇವನು ಮೊಬೈಲ್‌ನಲ್ಲಿ ಸಂಜೆ ಹೊತ್ತಲ್ಲಿ ಮಾತನಾಡಿದ್ದು,ಆ ದಿನಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಮಿಸ್ಸಿಂಗ್‌ಪ್ರಕರಣಗಳು ದಾಖಲಾಗಿಲ್ಲ.

Advertisement

ವೈದ್ಯಕೀಯ ಪರೀಕ್ಷೆಯನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದುಎಸ್‌ಪಿ ಸೈದುಲು ಸ್ಪಷ್ಟಪಡಿಸಿದ್ದಾರೆ.ಆಡಿಯೋದಲ್ಲೇನಿದೆ: ವೈರಲ್‌ ಆಗಿರುವಆಡಿಯೋದಲ್ಲಿ ಮಾತನಾಡಿರುವ 34 ವರ್ಷದ ವ್ಯಕ್ತಿತನ್ನ ಹೆಸರು ರಮೇಶ್‌ ಎಂದು ಹೇಳಿಕೊಂಡಿದ್ದಾನೆ.”ಬಳ್ಳಾರಿ ನಿವಾಸಿಯೇ ಆಗಿದ್ದು, ಹಿಟಾಚಿ ಚಾಲಕನಾಗಿಕೆಲಸ ಮಾಡುತ್ತಿದ್ದೇನೆ. ನಾನು ಮತ್ತು ನನ್ನ ಸ್ನೇಹಿತರಾದಉಮೇಶ, ಬಾರೇಶ, ಸಂಗು, ಮಹೇಶ್‌ 18 ವರ್ಷದಯುವತಿಯನ್ನು ರೇಪ್‌ ಮಾಡಿದ್ದೇವೆ. ಆ ವೇಳೆಯುವತಿ ಮೃತಪಟ್ಟಿದ್ದಾಳೆ.

ಎಲ್ಲರು ಸೇರಿ ಪಾರ್ಟಿಮಾಡುವಾಗ ಮಹಿಳೆಯರನ್ನು ಕಿರುಕುಳ ನೀಡಿದ್ದೇವೆ.ಯುವತಿಯ ಅಪ್ಪ-ಅಮ್ಮ ಪೊಲೀಸ್‌ ಠಾಣೆಯಲ್ಲಿದೂರು ನೀಡಿದ್ದಾರೆ. ಆದರೆ, ಪೊಲೀಸರು ಪ್ರೂಫ್‌ಸಿಕ್ಕಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ. ನಾವು ಸಹಅಂದು ಸ್ನಾನ ಮಾಡಿಕೊಂಡು ಬೈಕ್‌ನಲ್ಲಿ ತಪ್ಪಿಕೊಂಡುಬಂದಿದ್ದೇವೆ. ಸಿಕ್ಕರೆ ಕಂಬಿ ಎಣಿಸಬೇಕಾಗುತ್ತಿತ್ತುಎಂದೆಲ್ಲ’ ಮಾತನಾಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next