Advertisement

ಹಂಪಿ ವೀಕ್ಷಣೆಗೆ ಪ್ರವಾಸಿಗರ ದಂಡು

01:21 PM Dec 06, 2021 | Team Udayavani |

ಹೊಸಪೇಟೆ: ವಿಶ್ವ ಪರಂಪರೆ ತಾಣ ಹಂಪಿಗೆ ವೀಕೆಂಡ್‌ಹಿನ್ನೆಲೆಯಲ್ಲಿ ಭಾನುವಾರ ಪ್ರವಾಸಿಗರ ದಂಡು ಹರಿದುಬಂದಿದ್ದು, ಒಂದೇ ದಿನ ಏಳು ಸಾವಿರ ಪ್ರವಾಸಿಗರು ಹಂಪಿಸ್ಮಾರಕಗಳನ್ನು ವೀಕ್ಷಿಸಿದರು.

Advertisement

ಹಂಪಿ ಸ್ಮಾರಕಗಳ ವೀಕ್ಷಣೆಗೆ ಹಂಪಿಗೆ ಹೆಚ್ಚಿನ ಪ್ರಮಾಣದಲ್ಲಿವೀಕೆಂಡ್‌ನ‌ಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೊರೋನಾಮೂರನೇ ಅಲೆ ಭೀತಿ ಮತ್ತು ಒಮಿಕ್ರಾನ್‌ ವೈರಸ್‌ನ ಭಯದನಡುವೆಯೂ ಪ್ರವಾಸಿಗರು ಹಂಪಿಗೆ ಆಗಮಿಸುತ್ತಿದ್ದಾರೆ.

ಈನಡುವೆ ವಿಜಯನಗರ ಜಿಲ್ಲಾಡಳಿತ ಕೂಡ ಕೋವಿಡ್‌ ನೆಗೆಟಿವ್‌ರಿಪೋರ್ಟ್‌ ಇಲ್ಲದವರಿಗೆ ಹೋಟೆಲ್‌ ಹಾಗೂ ರೆಸಾರ್ಟ್‌ಗಳಲ್ಲಿರೂಮ್‌ಗಳನ್ನು ನೀಡಬಾರದು ಎಂದು ಸೂಚಿಸಿದೆ.ಹಂಪಿ ಸ್ಮಾರಕಗಳನ್ನು ವೀಕ್ಷಣೆ ಮಾಡಲು ಬರುವಪ್ರವಾಸಿಗರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು ಪೊಲೀಸರುಕೂಡ ಸೂಚಿಸಿದರು.

ವಿಶ್ವಪರಂಪರೆ ತಾಣ ಹಂಪಿಗೆ ಹೊರಜಿಲ್ಲೆ ಹಾಗೂ ರಾಜ್ಯ ಮತ್ತು ವಿದೇಶಗಳಿಂದಲೂ ಪ್ರವಾಸಿಗರುಆಗಮಿಸುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದನ್ನುಕಡ್ಡಾಯಗೊಳಿಸಲಾಗಿದೆ. ಹಂಪಿಯ ಶ್ರೀ ವಿರೂಪಾಕ್ಷೇಶ್ವರದೇಗುಲ, ಕಡಲೆಕಾಳು, ಸಾಸಿವೆಕಾಳು ಗಣಪ ಮಂಟಪ,ಹಜಾರರಾಮ ದೇಗುಲ, ಮಹಾನವಮಿ ದಿಬ್ಬ, ವಿಜಯ ವಿಠuಲದೇಗುಲ, ಕಲ್ಲಿನತೇರು, ಪುರಂದರ ಮಂಟಪ ಸೇರಿದಂತೆವಿವಿಧ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಿಸಿದರು.

ರಾಜ್ಯದಬೆಂಗಳೂರು, ಮೈಸೂರು, ತುಮಕೂರು, ಚಿತ್ರದುರ್ಗ,ದಾವಣಗೆರೆ, ಹಾವೇರಿ, ಗದಗ, ಧಾರವಾಡ, ಬೆಳಗಾವಿ,ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡಸೇರಿದಂತೆ ವಿವಿಧ ಜಿಲ್ಲೆಗಳ ಪ್ರವಾಸಿಗರು ಹಂಪಿಗೆ ಆಗಮಿಸಿಸ್ಮಾರಕಗಳನ್ನು ವೀಕ್ಷಿಸಿದರು.

Advertisement

ಇನ್ನೂ ತೆಲಂಗಾಣ, ಆಂಧ್ರಪ್ರದೇಶ,ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಪ್ರವಾಸಿಗರು ಹಂಪಿ ಸ್ಮಾರಕಗಳನ್ನು ಕಣ್ತುಂಬಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next