ಬಳ್ಳಾರಿ: ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನಪರಿಷತ್ ಚುನಾವಣೆಯ ಬಳ್ಳಾರಿ ಮತಕ್ಷೇತ್ರದಕಾಂಗ್ರೆಸ್ ಟಿಕೆಟ್‌ನ್ನು ಕೊನೆಗೂ ಪಡೆಯುವಲ್ಲಿಹಾಲಿ ಸದಸ್ಯ ಕೆ.ಸಿ. ಕೊಂಡಯ್ಯ ಯಶಸ್ವಿಯಾಗಿದ್ದು, ಕೊನೆಯ ದಿನವಾದ ನ.23 ರಂದು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ತೀವ್ರಪೈಪೋಟಿ ಏರ್ಪಟ್ಟಿತ್ತು. ಈ ಹಿಂದೆ ಪಕ್ಷದ ಹಿರಿಯಮುಖಂಡರು ನೀಡಿದ್ದ ಭರವಸೆಯಿಂದ ಈ ಬಾರಿಎಂಎಲ್‌ಸಿ ಟಿಕೆಟ್‌ನ್ನು ದಲಿತ ಸಮುದಾಯಕ್ಕೆಕೊಡಿಸಬೇಕು ಎಂದು ಜಿಪಂ ಸದಸ್ಯ ಮುಂಡ್ರಿಗಿನಾಗರಾಜ್ ಪಟ್ಟು ಹಿಡಿದಿದ್ದರು.
ಜತೆಗೆ ಕುರುಬಸಮುದಾಯವೂ ಟಿಕೆಟ್ ಕೋರಿ ಮಾಜಿ ಎಂಎಲ್‌ಸಿಕೆ.ಎಸ್.ಎಲ್. ಸ್ವಾಮಿ ಅವರಿಂದ ಅರ್ಜಿ ಸಲ್ಲಿಸಿತ್ತು.ಕೊಂಡಯ್ಯನವರು ಹಿಂದೆ ಸರಿದರೆ ಎಂಎಲ್‌ಸಿಟಿಕೆಟ್ ನನಗೆ ಕೊಡುವಂತೆ ಮಾಜಿ ಶಾಸಕ ಅನಿಲ್‌ಲಾಡ್ ಅವರು ಪಕ್ಷದ ವರಿಷ್ಠರ ಮುಂದೆ ಅಹವಾಲು ಸಲ್ಲಿಸಿದ್ದರು.
ಇದರಿಂದ ಟಿಕೆಟ್‌ಗಾಗಿ ಪೈಪೋಟಿಏರ್ಪಟ್ಟಿದ್ದು, ಈ ಕಗ್ಗಟ್ಟು ಕೆಪಿಸಿಸಿ ವರಿಷ್ಠರಿಗೂತಲೆನೋವಾಗಿ ಪರಿಣಮಿಸಿದ್ದ ಹಿನ್ನೆಲೆಯಲ್ಲಿಅಂತಿಮವಾಗಿ ಟಿಕೆಟ್ ಹಂಚಿಕೆಯು ದೆಹಲಿವರಿಷ್ಠರ ಬಳಿಗೆ ತೆರಳಿದ್ದು, ಎಲ್ಲ ರೀತಿಯ ಹಗ್ಗಜಗ್ಗಾಟಗಳು ನಡೆದ ಬಳಿಕ ಅಂತಿಮವಾಗಿ ವಿಧಾನಪರಿಷತ್ ಹಾಲಿ ಸದಸ್ಯ ಕೆ.ಸಿ.ಕೊಂಡಯ್ಯ ಅವರಹೆಸರನ್ನು ಫೈನಲ್ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿಕೆ.ಸಿ. ಕೊಂಡಯ್ಯನವರು ಎರಡನೇ ಬಾರಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪ ರ್ಧಿಸಲು ಎಲ್ಲರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.ನಾಮಪತ್ರ ಸಲ್ಲಿಸಲು ಕೊನೆ ದಿನವಾದ ನ.23ರಂದು ಬಳ್ಳಾರಿ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿನಾಮಪತ್ರ ಸಲ್ಲಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿಮುನ್ನಾದಿನವಾದ ಸೋಮವಾರ ಕೆಪಿಸಿಸಿ ಅಧ್ಯಕ್ಷಡಿ.ಕೆ. ಶಿವಕುಮಾರ್ ಅವರಿಂದ ಬಿ. ಫಾರಂನ್ನುಅಭ್ಯರ್ಥಿ ಕೆ.ಸಿ. ಕೊಂಡಯ್ಯನವರು ಸ್ವೀಕರಿಸಿದರು.