Advertisement

ಮೇಯರ್‌ ಚುನಾವಣೆಗೆ ತಾತ್ಕಾಲಿಕ ಬ್ರೇಕ್‌

06:20 PM Nov 17, 2021 | Team Udayavani |

ಬಳ್ಳಾರಿ: ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆಮೇಯರ್‌-ಉಪಮೇಯರ್‌ ಮತ್ತು ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆಗೆ ಇದೇ ನ. 18ರಂದುನಿಗದಿಯಾಗಿದ್ದ ಚುನಾವಣೆಯನ್ನು ವಿಧಾನಪರಿಷತ್‌ ಚುನಾವಣೆ ನಿಮಿತ್ತ ಮುಂದೂಡಿರುವುದುಆಕಾಂಕ್ಷಿಗಳಲ್ಲಿ ನಿರಾಶೆ ಮೂಡಿಸಿದ್ದು ಮತ್ತೂಂದುತಿಂಗಳು ಕಾಯುವಂತೆ ಮಾಡಿದೆ.

Advertisement

ಬಳ್ಳಾರಿ ಮಹಾನಗರ ಪಾಲಿಕೆಗೆ ಮೇ 28ರಂದುಮತದಾನ ನಡೆದು, ಮೇ 31ರಂದು ಮತ ಎಣಿಕೆನಡೆದಿತ್ತು. ಐದು ಪಕ್ಷೇತರರು ಸೇರಿ 21 ವಾಡ್‌ìಗಳಲ್ಲಿ ಜಯಗಳಿಸಿದ್ದ ಕಾಂಗ್ರೆಸ್‌ ಬಹುಮತ ಸಾಧಿಸಿತ್ತು. ಪಾಲಿಕೆಯಲ್ಲಿ ಸತತ ಎರಡನೇ ಅವ ಧಿಗೆಅಧಿಕಾರ ನಡೆಸಲು ಮುಂದಾಗಿದ್ದ ಕಾಂಗ್ರೆಸ್‌ನ ನೂತನ ಸದಸ್ಯರಿಗೆ ಮೇಯರ್‌-ಉಪಮೇಯರ್‌ಚುನಾವಣೆ ನಿಗದಿಯೇ ಕಗ್ಗಂಟಾಗಿ ಪರಿಣಮಿಸಿತ್ತು.

ಕೊನೆಗೆ ಆರು ತಿಂಗಳ ಬಳಿಕ ಸರ್ಕಾರ ಅನುಮತಿನೀಡಿದ ಹಿನ್ನೆಲೆಯಲ್ಲಿ ಇದೇ ನ.18 ರಂದು ಚುನಾವಣೆಜಿಲ್ಲಾಡಳಿತ ನಿಗದಿಪಡಿಸಿತ್ತು. ಇದರಿಂದ ಮೇಯರ್‌ಸ್ಥಾನದ ಆಕಾಂಕ್ಷಿಗಳಾದ 18ನೇ ವಾರ್ಡ್‌ನ ಮುಲ್ಲಂಗಿನಂದೀಶ್‌ ಕುಮಾರ್‌, 30ನೇ ವಾರ್ಡ್‌ನ ಆಸೀಫ್‌,23ನೇ ವಾರ್ಡ್‌, ಪಿ.ಗಾದೆಪ್ಪ, 3ನೇ ವಾರ್ಡ್‌ನಕಾಂಗ್ರೆಸ್‌ ಬಂಡಾ, ಪಕ್ಷೇತರ ಸದಸ್ಯ ಮುಂಡೂÉರುಪ್ರಭಂಜನ್‌ ಕುಮಾರ್‌, 34ನೇ ವಾರ್ಡ್‌ನ ರಾಜೇಶ್ವರಿಸುಬ್ಬರಾಯುಡು ಅವರು ಪ್ರಭಲ ಆಕಾಂಕ್ಷಿಯಾಗಿದ್ದು,ತೆರೆಮರೆಯಲ್ಲಿ ಕಸರತ್ತಿನಲ್ಲಿ ತೊಡಗಿದ್ದರು. ಆದರೆ,ಚುನಾವಣೆ ಮುಂದೂಡಿರುವುದು ಆಕಾಂಕ್ಷಿಗಳಲ್ಲಿನಿರಾಶೆ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next