Advertisement

ಅವೈಜ್ಷಾನಿಕ ಎನ್‌ಇಪಿ ಹಿಂಪಡೆಯಲು ಪಟ್ಟು

05:01 PM Nov 12, 2021 | Team Udayavani |

ಬಳ್ಳಾರಿ: ಕೇಂದ್ರ ಸರ್ಕಾರ ತರಾತುರಿಯಲ್ಲಿಜಾರಿಗೆ ತಂದಿರುವ ಅವೈಜ್ಞಾನಿಕ ರಾಷ್ಟ್ರೀಯಶಿಕ್ಷಣ ನೀತಿ ವಿರೋಧಿ ಸಿ ನಗರದ ಡಿಸಿಕಚೇರಿ ಆವರಣದಲ್ಲಿ ಎಐಡಿಎಸ್‌ಒವಿದ್ಯಾರ್ಥಿ ಸಂಘಟನೆಯು ಗುರುವಾರಪ್ರತಿಭಟನೆ ನಡೆಸಿತು.ಕೇಂದ್ರ ಸರ್ಕಾರ ಪ್ರಸಕ್ತ ಶೈಕ್ಷಣಿಕವರ್ಷದಿಂದ ಕರ್ನಾಟಕ ರಾಜ್ಯದಲ್ಲಿ ಎನ್‌ಇಪಿ-2020 ಅನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ.

Advertisement

ಈ ನೀತಿ ಪ್ರಸ್ತಾವನೆಆದಾಗಿನಿಂದಲೂ ರಾಜ್ಯದ ಶಿಕ್ಷಣತಜ್ಞರು, ಉಪನ್ಯಾಸಕರು, ಸಾಹಿತಿಗಳು,ವಿದ್ಯಾರ್ಥಿಗಳು ಹಾಗೂ ಪೋಷಕರುವ್ಯಾಪಕ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.ಎನ್‌ಇಪಿ-2020ರ ಮೂಲಕ ಶಿಕ್ಷಣಕ್ಷೇತ್ರದಲ್ಲಿ ತರಲು ಪ್ರಸ್ತಾಪಿಸಿದ್ದಹಲವು ಬದಲಾವಣೆಗಳು ಅಥವಾಸೇರ್ಪಡೆಗಳ ಕುರಿತು ಹಲವಾರುಅಂಶಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆಮತ್ತು ಭಿನ್ನಾಭಿಪ್ರಾಯಗಳಿಗೆ ಅವಕಾಶಮಾಡಿಕೊಟ್ಟಿದೆ. ಆದರೆ, ರಾಜ್ಯ ಸರ್ಕಾರಅತ್ಯಂತ ತರಾತುರಿಯಲ್ಲಿ ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಏಕಾಏಕಿಎನ್‌ಇಪಿ ಭಾಗವಾಗಿರುವ ನಾಲ್ಕು ವರ್ಷದಪದವಿ ಕೋರ್ಸ್‌ ಅನ್ನು ಅನುಷ್ಠಾನಕ್ಕೆತಂದಿದೆ. ಆ ಮೂಲಕ ರಾಜ್ಯದ ಶಿಕ್ಷಕವರ್ಗ, ಲಕ್ಷಾಂತರ ವಿದ್ಯಾರ್ಥಿಗಳಭವಿಷ್ಯ ಅಂಧಕಾರವಾಗಿದೆ ಎಂದುಪ್ರತಿಭಟನಾಕಾರರು ಆರೋಪಿಸಿದರು.

ಸರ್ಕಾರ ಜನತೆಯ, ಶಿಕ್ಷಕರ,ವಿದ್ಯಾರ್ಥಿಗಳು ಮತ್ತು ಸಂಘಟನೆಗಳ ಎಲ್ಲಅಭಿಪ್ರಾಯಗಳನ್ನು ಪ್ರಜಾತಾಂತ್ರಿಕವಾಗಿ,ಕೂಲಂಕುಷವಾಗಿ ಗಮನಿಸಿ, ಗಣನೆಗೆತೆಗೆದುಕೊಂಡು ನೂತನ ಶಿಕ್ಷಣ ನೀತಿಯಬಗ್ಗೆ ವಿಮರ್ಶೆ ಮಾಡಬೇಕು ಎಂದುಅಪೇಕ್ಷಿಸುತ್ತೇವೆ. ಅಲ್ಲಿಯವರೆಗೂ,ಈಗ ಅನುಷ್ಠಾನಕ್ಕೆ ತಂದಿರುವ ನಾಲ್ಕುವರ್ಷದ ಪದವಿ ಕೋರ್ಸ್‌ ಅನ್ನುವಿದ್ಯಾರ್ಥಿಗಳು, ಶಿಕ್ಷಕರ ಭವಿಷ್ಯಹಾಗೂ ಶಿಕ್ಷಣದ ಗುಣಮಟ್ಟವನ್ನುಕಾಪಾಡುವ ಸದುದ್ದೇಶದಿಂದಸರ್ಕಾರ ವಾಪಸ್‌ ಪಡೆಯಬೇಕು.ಈ ವರ್ಷದ ವಿದ್ಯಾರ್ಥಿ ಬಸ್‌ ಪಾಸ್‌ಅನ್ನು ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.

ಬಳಿಕ ಜಿಲ್ಲಾಡಳಿತದಮೂಲಕ ಮುಖ್ಯಮಂತ್ರಿಗಳಿಗೆ ಮನವಿಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಸೆಕ್ರೇಟರಿಯೇಟ್‌ ಸದಸ್ಯರಾದ ಕೆ. ಈರಣ್ಣ,ಎಂ. ಶಾಂತಿ. ಮಂಜುನಾಥ, ನಿಂಗರಾಜ,ಅನುಪಮ, ಸಿದ್ದು, ನಿಹಾರಿಕ ಹಾಗೂಜಿಲ್ಲಾ ಸಮಿತಿ ಸದಸ್ಯರಾದ ಉಮಾದೇವಿ,ನಾಗರತ್ನ ಸೇರಿ ವಿವಿಧ ಕಾಲೇಜುಗಳವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next