Advertisement

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

07:32 PM Jul 28, 2022 | Team Udayavani |

ಬಳ್ಳಾರಿ: ಪಠ್ಯಪುಸ್ತಕಗಳ ಕೇಸರೀಕರಣ ವಿರೋ ಧಿಸಿ,ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ವಿತರಣೆ, ವಿದ್ಯಾರ್ಥಿ ವೇತನ ನೀಡುವಂತೆ ಆಗ್ರಹಿಸಿನಗರದಲ್ಲಿ ಎನ್‌ಎಸ್‌ಯುಐ ಸಂಘಟನೆಯು ವಿವಿಧಕಾಲೇಜು ವಿದ್ಯಾರ್ಥಿಗಳ ನೇತೃತ್ವದಲ್ಲಿ ಬುಧವಾರಪ್ರತಿಭಟನೆ ನಡೆಸಿತು.

Advertisement

ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಪಠ್ಯಪುಸ್ತಕಪರಿಷ್ಕರಣೆ ಮಾಡಿರುವ ರೋಹಿತ್‌ ಚಕ್ರತೀರ್ಥ, ರಾಜ್ಯಬಿಜೆಪಿ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನುಕೂಗಿ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಬಿಜೆಪಿ ಸರ್ಕಾರವು ರೋಹಿತ್‌ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಹೆಸರಲ್ಲಿ ಕೆಲವರ ಓಲೈಕೆಗಾಗಿ ಕೇಸರೀಕರಣ ಮಾಡಿಮಹಾಪುರುಷರಾದ ಬಸವಣ್ಣ, ಸಂವಿಧಾನ ಶಿಲ್ಪಿಡಾ| ಬಿ.ಆರ್‌. ಅಂಬೇಡ್ಕರ್‌, ರಾಷ್ಟ್ರಕವಿ ಕುವೆಂಪು,ಕನಕದಾಸರು, ನಾರಾಯಣಗುರು ಹೀಗೆ ಹಲವಾರುಮಹಾಪುರುಷರ ವಿಷಯಗಳನ್ನು ಕಡಿತಗೊಳಿಸುವಮೂಲಕ ಅಪಮಾನವೆಸಗಿದ್ದಾರೆ.

ರಾಜ್ಯ ಬಿಜೆಪಿಸರ್ಕಾರ ಈ ಕೂಡಲೇ ಹೊಸ ಪಠ್ಯಪುಸ್ತಕವನ್ನುಹಿಂಪಡೆದು ಮಕ್ಕಳ ಮೇಲೆ ಪಠ್ಯಪುಸ್ತಕದಕೇಸರೀಕರಣ ಹೇರುವುದನ್ನು ನಿಲ್ಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next